ಆನೇಕಲ್(ಜ.08): ಖಾಸಗಿ ವ್ಯಕ್ತಿಗಳಿಂದ ಒತ್ತವರಿಯಾಗಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರಕಾರಿ ಭೂಮಿಯನ್ನು ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ಆನೇಕಲ್ ತಾಲ್ಲೂಕು ಆಡಳಿತ ವಶಕ್ಕೆ ಪಡೆದಿದೆ. ಹೌದು ಆನೇಕಲ್ ತಹಶೀಲ್ದಾರ್ ಮಹಾದೆವಯ್ಯ ನೇತೃತ್ವದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಎರಡು ಎಕರೆ ಜಾಗವನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಪೋಡು ಗ್ರಾಮದ ಸರ್ವೇ ನಂಬರ್ 156/13 ರಲ್ಲಿ ಎರಡು ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಸರಸ ಮುನಿಶ್ವಾಮಿ ರೆಡ್ಡಿ ಎಂಬುವವರು ಆಕ್ರಮಿಸಿಕೊಂಡು ಕೋಳಿ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು ಸಮಿತಿಗೆ ದೂರು ಸಲ್ಲಿಸಿದ್ದರು. ವಿಶೇಷ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪ್ರಕರಣ ನಡೆದು ಅಂತಿಮವಾಗಿ ಎರಡು ಎಕರೆ ಭೂಮಿ ಸರ್ಕಾರಿ ಭೂಮಿಯಾಗಿದ್ದು, ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಲಾಗಿದೆ.
ಚಾಮರಾಜನಗರದ ಮೆಡಿಕಲ್ ಕಾಲೇಜಿಗೆ ಎಂಟ್ರಿ ಕೊಟ್ಟ ಚಿರತೆ; ವಿಡಿಯೋ ನೋಡಿದರೆ ಎದೆ ಝಲ್ ಅನ್ನುತ್ತೆ..!
ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಆನೇಕಲ್ ತಾಲ್ಲೂಕು ಆಡಳಿತ ಜೆಸಿಬಿಗಳ ಮುಖಾಂತರ ಕೋಳಿ ಷೆಡ್ ಗಳನ್ನು ಹಾಗು ಕಾಂಪೌಂಡ್ ತೆರವು ಮಾಡಿ ಸುಮಾರು ಎರಡು ಎಕರೆ ಗಳಷ್ಟು ಭೂಮಿಯನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದ ಸರಸ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಸರ್ವೆ ನಂ 156 ರಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಸರಕಾರದ ವಶಕ್ಕೆ ಪಡೆಯಲಾಗುವುದು.
(ವರದಿ: ಆದೂರು ಚಂದ್ರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ