ಆನೇಕಲ್​​ನಲ್ಲಿ ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಮಾಲು ವಶ; 56 ಆರೋಪಿಗಳ ಬಂಧನ

ಸುಲಿಗೆ, ಕಳ್ಳತನ ಸೇರಿದಂತೆ 37 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ 1ಕೋಟಿ 74 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.  56 ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಆನೇಕಲ್(ಜು.15): ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಡಕಾಯಿತಿ, ರಾಬರಿ, ಸುಲಿಗೆ ಕಳ್ಳತನ ಸೇರಿದಂತೆ ಸುಮಾರು 37 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಅಂದಾಜು ಒಂದು ಕೋಟಿ ಎಪ್ಪತ್ತಾ ನಾಲ್ಕು ಲಕ್ಷ ಮೌಲ್ಯದ ಮಾಲು ಜಫ್ತಿ ಮಾಡಿ ಬರೋಬ್ಬರಿ 56 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡುವುದರ ಮೂಲಕ ಮತ್ತಷ್ಟು ಉತ್ತಮ ಕಾರ್ಯ ಮಾಡಲು ಅಭಿನಂದಿಸಿದ್ದಾರೆ.  ಜೊತೆಗೆ ವಸ್ತುಗಳನ್ನು ಕಳೆದುಕೊಡ ಮಾಲೀಕರಿಗೆ ಕೇಂದ್ರ ವಲಯ ಐಜಿ ಚಂದ್ರಶೇಖರ್ ರವರು ಹೆಬ್ಬಗೋಡಿ ಸಮೀಪದ ಎಸ್ಎಫ್ಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪ್ರಾಪರ್ಟಿ ಪೆರೇಡ್ ವೇಳೆ ಅವರ ವಸ್ತುಗಳನ್ನು ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ:Gold Price Today: ಸತತ ಏರಿಕೆ ಕಂಡ ಚಿನ್ನದ ಬೆಲೆ; ಇಂದಿನ ದರವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನೂ ಇದೆ ಸಂದರ್ಭದಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾತನಾಡಿ ಆನೇಕಲ್ ಉಪ ವಿಭಾಗದ ಪೊಲೀಸರು ಉತ್ತಮವಾದ ಕೆಲಸ ಮಾಡಿದ್ದಾರೆ. ಸುಲಿಗೆ, ಕಳ್ಳತನ ಸೇರಿದಂತೆ 37 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ 1ಕೋಟಿ 74 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.  56 ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ 25 ದ್ವಿಚಕ್ರವಾಹನ, 3 ಸುಲಿಗೆ, ಮೂರು ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಲಾಗಿದೆ.

ಜಿಗಣಿ ಠಾಣೆಯಲ್ಲಿ 100 ಮೊಬೈಲ್‌  15 ದ್ವಿಚಕ್ರ ವಾಹನ, 2 ಸುಲಿಗೆ, 2 ಡಕಾಯಿತಿ, 2 ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸೂರ್ಯನಗರ  ಪೊಲೀಸ್ ಠಾಣೆಯಲ್ಲಿ 1 ಕೆ.ಜಿ.30 ಗ್ರಾಂ ಚಿನ್ನ ಜಫ್ತಿ ಮಾಡಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ 25 ಮೊಬೈಲ್ , 9 ದ್ವಿಚಕ್ರ ವಾಹನ, 1 ಸುಲಿಗೆ ಪ್ರಕರಣ ಪತ್ತೆಯಾಗಿದೆ ಎಂದ ಅವರು, ರಾಬರಿ, ಡಕಾಯಿತಿಯಂತಹ ಪ್ರಕರಣಗಳು ನಡೆದಾಗ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ನೀಡಲಾಗುತ್ತಿದೆ.

ಇದನ್ನೂ ಓದಿ:Mekedatu Project: ನಾಳೆ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಲಿರುವ ತಮಿಳುನಾಡು ಸರ್ವಪಕ್ಷ ನಿಯೋಗ

ಆದ್ರೆ ಅಂತಹ ಕಷ್ಟಕರ ಪ್ರಕರಣಗಳನ್ನು ಪೊಲೀಸರು ಭೇದಿಸಿದಾಗ ಅಷ್ಟೊಂದು ಪ್ರಾಮುಖ್ಯತೆ ಸಿಗುವುದಿಲ್ಲ. ಹಾಗಾಗಿ ಪೊಲೀಸರ ಶ್ರಮಕ್ಕೆ ಪೂರಕ ಉತ್ತೆಜನ ಪ್ರೋತ್ಸಾಹ ನೀಡುವಂತಾಗಬೇಕು.  ಇತ್ತೀಚಿಗೆ ಮಾದಕ ವ್ಯಸನ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಅಗತ್ಯವಿದೆ. ಅದನ್ನು ಬೆಂಗಳೂರು ಜಿಲ್ಲಾ ಪೊಲೀಸರು ಸಾರ್ವಜನಿಕ ಸ್ನೇಹಿ ಪೊಲೀಸಿಂಗ್ ಮಾಡಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇನ್ನೂ ಕಳೆದುಕೊಂಡ ತಮ್ಮ ವಸ್ತುಗಳನ್ನು ಮರಳಿ ಪಡೆದ ಮಾಲೀಕರು ಪೊಲೀಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಬ್ಯಾಂಕ್ ಮೂಲಕ ಸಾಲ ಪಡೆದು ರಾಯಲ್ ಎನ್ಪಿಲ್ಡ್ ಬೈಕ್ ಖರೀದಿಸಲಾಗಿತ್ತು. ಕೆಲವೇ ದಿನಗಳಲ್ಲಿ ಮನೆಯ ಬಳಿಯಿಂದಲೇ ಕಳುವಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪೊಲೀಸರು ಸಹ ಬೈಕ್ ಪತ್ತೆ ಹಚ್ಚುವುದಾಗಿ ತಿಳಿಸಿದ್ದರು. ಅದರಂತೆ ಬೈಕ್ ಮರಳಿ ಕೊಡಿಸಿದ್ದಾರೆ ಎಂದು ಬೈಕ್ ಮಾಲೀಕ ಪುನಿತ್ ಸಂತಸ ಹಂಚಿಕೊಂಡಿದ್ದಾರೆ.
Published by:Latha CG
First published: