HOME » NEWS » State » ANEKAL POLICE OFFICERS GIVING RATION FOOD TO CORONA WARRIORS AT ANEKAL AMID LOCKDOWN CANK LG

ಆನೇಕಲ್​: ಕೊರೋನಾ ವಾರಿಯರ್ಸ್​​ಗೆ‌ ದಿನಸಿ ಕಿಟ್​ ವಿತರಿಸಿದ ಪೊಲೀಸರು

ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ದಾದಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ.

news18-kannada
Updated:May 18, 2021, 8:46 AM IST
ಆನೇಕಲ್​: ಕೊರೋನಾ ವಾರಿಯರ್ಸ್​​ಗೆ‌ ದಿನಸಿ ಕಿಟ್​ ವಿತರಿಸಿದ ಪೊಲೀಸರು
ಕೊರೋನಾ ವಾರಿಯರ್ಸ್​​ಗೆ ದಿನಸಿ ಹಂಚುತ್ತಿರುವ ಪೊಲೀಸರು
  • Share this:
ಆನೇಕಲ್(ಮೇ 18): ಪೊಲೀಸರು ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಅಮಾಯಕರ ಮೇಲೆ ಲಾಠಿ ಬೀಸುತ್ತಾರೆ ಎಂಬುದು ಪದೇ ಪದೇ ಕೇಳಿ ಬರುತ್ತಿರುವ ಆರೋಪ‌. ಆದ್ರೆ ಅದೇ ಪೊಲೀಸರು ಕೊರೊನಾ ವಾರಿಯರ್ಸ್‌ಗೆ ಅಗತ್ಯ ವಸ್ತುಗಳ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದಾರೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಠಾಣೆ ಪೊಲೀಸರು ಕೊರೋನಾ ವಾರಿಯರ್ಸ್‌ಗಳಾಗಿ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ದಾದಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ.

PM Narendra Modi: ಕೊರೋನಾ ಹೆಚ್ಚಳ ಹಿನ್ನೆಲೆ; ಇಂದು ಡಿಸಿಗಳ ಜೊತೆ ಸಭೆ ನಡೆಸಲಿರುವ ಪ್ರಧಾನಿ ಮೋದಿ

ಅತ್ತಿಬೆಲೆ ಹೋಬಳಿ ವ್ಯಾಪ್ತಿಯ ಸುಮಾರು ನೂರೈವತ್ತಕ್ಕೂ ಅಧಿಕ ಮಂದಿಗೆ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮಹಾದೇವಪ್ಪ ಮತ್ತು ಅತ್ತಿಬೆಲೆ ಸರ್ಕಲ್ ಇನ್ಸ್ಪೆಕ್ಟರ್ ವಿಶ್ವನಾಥ್ ದಿನಸಿ ಕಿಟ್ ವಿತರಿಸಿದ್ದಾರೆ. ಅಕ್ಕಿ , ಉಪ್ಪು , ಆಡುಗೆ ಎಣ್ಣೆ , ಮಸಾಲೆ ಮತ್ತು ದಿನಸಿ ಪದಾರ್ಥಗಳನ್ನು ಕಿಟ್ನಲ್ಲಿದ್ದು, ಕನಿಷ್ಠ ಹತ್ತರಿಂದ ಹದಿನೈದು ದಿನಕ್ಕೆ ಆಗುವಷ್ಟು ದಿನಸಿ ವಿತರಣೆ ಮಾಡಲಾಗಿದೆ.
Youtube Video

ಇನ್ನು, ಕೊರೊನಾ ಸೋಂಕಿನ ಬಗ್ಗೆ ಭಯ ಬೇಡ. ಆದರೆ ವ್ಯಾಕ್ಸಿನ್ ಪಡೆದುಕೊಳ್ಳುವುದು, ಮಾಸ್ಕ್, ಸ್ಯಾನಿಟರೈಸ್ ಬಳಕೆ ಮಾಡುವುದು ಮತ್ತು ಸ್ವಚ್ಚತೆ ಕಪಾಡಬೇಕೆಂದು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಹಾದೇವಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Published by: Latha CG
First published: May 18, 2021, 8:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories