ಆನೇಕಲ್(ಮೇ 30): ಮಹಾಮಾರಿ ಕೊರೋನಾ ಎರಡನೇ ಅಲೆ ಇಡೀ ದೇಶವಾಸಿಗಳನ್ನೇ ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ರೈತಾಪಿ ವರ್ಗ ಕೊರೋನಾ ಏಟಿಗೆ ನಲುಗಿ ಹೋಗಿದ್ದಾರೆ. ಹೌದು, ಕೊರೋನಾ ಹರಡದಂತೆ ಸರ್ಕಾರವೇನೋ ಲಾಕ್ ಡೌನ್ ಘೋಷಣೆ ಮಾಡಿದೆ. ಆದ್ರೆ ಇದರಿಂದ ರೈತ ಸಮೂಹ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜರ್ಬೇರಾ ಹೂ ಬೆಳೆಗಾರರು ಲಾಕ್ಡೌನ್ನಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಜರ್ಬೇರಾ ಹೂ ಬೆಳೆದಿದ್ದಾರೆ. ಕೋಟ್ಯಾಂತರ ರೂಪಾಯಿ ಬ್ಯಾಂಕುಗಳಿಂದ ಸಾಲ ಪಡೆದು ಗ್ರೀನ್ ಹೌಸ್ಗಳಲ್ಲಿ ತಾಲ್ಲೂಕಿನ ರೈತರು ತರಹೆವಾರಿ ಜರ್ಬೇರಾ ಹೂಗಳನ್ನು ಬೆಳೆದು ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ವಿಶೇಷವಾಗಿ ಮೇ ಮತ್ತು ಜೂನ್ ಹಾಗೂ ನವೆಂಬರ್ ತಿಂಗಳಿನಲ್ಲಿ ಜರ್ಬೇರಾ ಹೂವಿಗೆ ಭರ್ಜರಿ ಬೇಡಿಕೆ ಇರುತ್ತಿತ್ತು. ಲಕ್ಷಾಂತರ ಲಾಭ ಸಹ ಗಳಿಸಲಾಗುತ್ತಿತ್ತು. ಆದ್ರೆ ಈ ಬಾರಿ ಕೊರೋನಾ ವಕ್ಕರಿಸಿದೆ. ಪರಿಣಾಮವಾಗಿ ಎಲ್ಲಾ ಮಾರುಕಟ್ಟೆಗಳು ಬಂದ್ ಆಗಿದ್ದು, ಹೂ ಕೇಳುವವರು ಇಲ್ಲದಂತಾಗಿದೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ದೊಡ್ಡ ಹಾಗಡೆ ಸುಬ್ಬಣನವರು ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:Bellary Couple: ಬಳ್ಳಾರಿಯಲ್ಲಿ ಮಾದರಿ ಜೋಡಿ; ಬದುಕು ಗೆದ್ದವರಿಗೆ ಕೊರೋನಾ ಯಾವ ಲೆಕ್ಕ?
ಇನ್ನು ಕೋಟ್ಯಾಂತರ ರೂಪಾಯಿ ಸಾಲ ಪಡೆದು ಸುಮಾರು 10 ಎಕರೆ ಪ್ರದೇಶದಲ್ಲಿ ಜರ್ಬೆರಾ ಹೂ ಬೆಳೆಯಲಾಗಿದ್ದು, ಉತ್ತಮ ಫಸಲು ಸಹ ಬಂದಿತ್ತು. ಆದ್ರೆ ಕೊರೋನಾ ಹಾವಳಿಯಿಂದ ಇಡೀ ಪುಷ್ಪೋದ್ಯಮ ನೆಲಕಚ್ಚಿದೆ. ಮಾರುಕಟ್ಟೆ ಬಂದ್ ಆಗಿದೆ. ಹಾಗಾಗಿ ಹೊರ ರಾಜ್ಯಗಳಿಗೆ ರಫ್ತು ಮಾಡಲಾಗದೇ ಹೂ ತೋಟಗಳಲ್ಲಿಯೇ ಕೊಳೆಯುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹಾಗಾಗಿ ಸರ್ಕಾರ ನೆರವು ನೀಡಬೇಕು ಎಂದು ನೊಂದ ರೈತರು ಒತ್ತಾಯಿಸಿದ್ದಾರೆ.
ಇನ್ನೂ ಕೊರೋನಾ ಹೆಮ್ಮಾರಿ ವಕ್ಕರಿಸುವ ಮುನ್ನ ಆನೇಕಲ್ ತಾಲ್ಲೂಕಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಹೂ ಬೆಳೆಯನ್ನು ಬಹು ವಾರ್ಷಿಕ ಬೆಳೆಯಾಗಿ ಬೆಳೆಯುತ್ತಿದ್ದರು. ಆದ್ರೆ ಕಳೆದ ವರ್ಷ ಕೊರೊನಾ ನೀಡಿದ ಹೊಡೆತಕ್ಕೆ ಶೇ 50 ರಷ್ಟು ಮಂದಿ ಹೂ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಅದರಲ್ಲೂ ಬಯಲು ತೋಟದಲ್ಲಿ ಹೂ ಬೆಳೆಯುತ್ತಿದ್ದ ಬಹುತೇಕ ಮಂದಿ ಹೂ ಬದಲು ಸೊಪ್ಪು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಇದನ್ನೂ ಓದಿ:Boris Johnson: ರಹಸ್ಯವಾಗಿ ಮದುವೆಯಾದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್..!; ಹುಡುಗಿ ಯಾರು ಗೊತ್ತಾ?
ಇನ್ನೂ ಗ್ರೀನ್ ಹೌಸ್ ನಲ್ಲಿ ಹೂ ಬೆಳೆಯುವವರು ಮಾತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆವೊಂದಕ್ಕೆ ಗ್ರೀನ್ ನಿರ್ಮಿಸಿ ಹೂ ಬೆಳೆ ನಾಟಿ ಮಾಡಲು 50 ಲಕ್ಷ ಖರ್ಚಾಗುತ್ತದೆ. ಬಹುತೇಕ ಎಲ್ಲಾ ರೈತರು ಬ್ಯಾಂಕ್ಗಳಿಂದ ಸಾಲ ಪಡೆದಿರುತ್ತಾರೆ. ಇದೀಗ ಜರ್ಬೇರಾ ಹೂವುಗಳಿಗೆ ಬೇಡಿಕೆ ಇಲ್ಲ. ಆದರೂ ಜರ್ಬೇರಾ ಹೂ ಬೆಳೆಯನ್ನು ಉಳಿಸಿಕೊಳ್ಳಲು ನಿರ್ವಹಣೆ ಮಾಡಬೇಕು. ಜೊತೆಗೆ ಬ್ಯಾಂಕುಗಳಿಗೆ ಕಂತು ಪಾವತಿಸಬೇಕಾಗಿದ್ದು, ಹೂ ಬೆಳೆಯುವ ರೈತರು ಸ್ಥಿತಿ ಅಂತಂತ್ರವಾಗಿದೆ ಎಂದು ರೈತ ವೆಂಕಟೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ