Anekal: ಲಾಕ್​ಡೌನ್​ ತೆರವಾದರೂ ಚೇತರಿಕೆ ಕಾಣದ ಪುಷ್ಪೋದ್ಯಮ; ಹೂ ಬೆಳೆಗಾರರ ಸಂಕಷ್ಟ ಕೇಳೋರಿಲ್ಲ..!

ಈಗ ಸಭೆ ಸಮಾರಂಭಗಳು ಸರಳವಾಗಿ ಆಯೋಜನೆಗೊಳ್ಳುತ್ತಿವೆ. ಜೊತೆಗೆ ಆಷಾಢ ಮಾಸ ಇರುವುದರಿಂದ ಯಾವುದೇ ಶುಭ ಸಮಾರಂಭಗಳು ಸಹ ನಡೆಯುತ್ತಿಲ್ಲ. ಇದರಿಂದ ಹೂ ಕೇಳುವವರೆ ಇಲ್ಲದಂತಾಗಿದೆ.

ಜರ್ಬೇರಾ ಹೂ

ಜರ್ಬೇರಾ ಹೂ

  • Share this:
ಆನೇಕಲ್(ಜು.14):  2.0 ಲಾಕ್ ಡೌನ್ ತೆರವು ಬಳಿಕವೂ ಪುಷ್ಪೋದ್ಯಮ ಚೇತರಿಕೆ ಕಾಣುತ್ತಿಲ್ಲ. ಹೌದು, ಮೊದಲ ಅಲೆಯಲ್ಲಿ ಇನ್ನಿಲ್ಲದಂತೆ ಪುಷ್ಪೋದ್ಯಮವನ್ನು ನೆಲ ಕಚ್ಚಿಸಿದ್ದ ಕೊರೋನಾ, ಇದೀಗ ಎರಡನೇ ಅಲೆಯಲ್ಲಿಯೂ ಚೇತರಿಕೆ ಕಾಣದಷ್ಟರ ಮಟ್ಟಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಕಾಡೆ ಮಲಗಿಸಿದೆ. ಇದರ ನಡುವೆ ಸರ್ಕಾರ ಘೋಷಣೆ ಮಾಡಿರುವ ಅಲ್ಪ ಪರಿಹಾರವು ಹೂ ಬೆಳೆಯುವ ರೈತರಿಗೆ ಸಾಲದಾಗಿದೆ. 

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಲಾಕ್ ಡೌನ್ ತೆರವು ಬಳಿಕವೂ ಪುಷ್ಪೋದ್ಯಮದಲ್ಲಿ ಚೇತರಿಕೆ ಕಾಣುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ನೆಲಕಚ್ಚಿದ್ದ ಹೂ ವ್ಯಾಪಾರ ವಹಿವಾಟು ಲಾಕ್ ಡೌನ್ ತೆರವು ಬಳಿಕವೂ ನಿರೀಕ್ಷಿತ ಮಟ್ಟಕ್ಕೆ ವಹಿವಾಟು ನಡೆಯುತ್ತಿಲ್ಲ. ಈಗ ಸಭೆ ಸಮಾರಂಭಗಳು ಸರಳವಾಗಿ ಆಯೋಜನೆಗೊಳ್ಳುತ್ತಿವೆ. ಜೊತೆಗೆ ಆಷಾಢ ಮಾಸ ಇರುವುದರಿಂದ ಯಾವುದೇ ಶುಭ ಸಮಾರಂಭಗಳು ಸಹ ನಡೆಯುತ್ತಿಲ್ಲ. ಇದರಿಂದ ಹೂ ಕೇಳುವವರೆ ಇಲ್ಲದಂತಾಗಿದೆ.

ಇದನ್ನೂ ಓದಿ:Astrology: ಧನು ರಾಶಿಯವರ ಜೀವನದಲ್ಲಿ ಈ ಸೂಚನೆ ಬಂದರೆ ಅದೃಷ್ಟವಂತೆ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಇದರ ನಡುವೆ ಮೂರನೇ ಅಲೆ ಪ್ರಾರಂಭವಾದರೆ ಹೂ ಬೆಳೆಗಾರರು ಬ್ಯಾಂಕ್ ಸಾಲ ಪಾವತಿಸಲಾಗದೆ ಜಮೀನು ಮಾರಾಟ ಮಾಡಿಕೊಳ್ಳಬೇಕಾದ ಸ್ಥಿತಿ ಬರಲಿದೆ. ಸರ್ಕಾರ ಸಹ ಹೆಕ್ಟೇರ್ ಗೆ ಹತ್ತು ಸಾವಿರ ಪರಿಹಾರ ಘೋಷಣೆ ಮಾಡಿರುವುದು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಹೂ ಬೆಳೆಗಾರ ಮಂಜುನಾಥ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇನ್ನು, ಲಾಕ್​​ಡೌನ್​ಗೂ ಮೊದಲು ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಹೂ ಬೆಳೆಯನ್ನು ಬಹು ವಾರ್ಷಿಕ ಬೆಳೆಯಾಗಿ ಬೆಳೆಯುತ್ತಿದ್ದರು. ಆದ್ರೆ ಕೊರೋನಾ ನೀಡಿದ ಹೊಡೆತಕ್ಕೆ ಶೇ 50 ರಷ್ಟು ಮಂದಿ ಹೂ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಅದರಲ್ಲೂ ಬಯಲು ತೋಟದಲ್ಲಿ ಹೂ ಬೆಳೆಯುತ್ತಿದ್ದ ಬಹುತೇಕ ಮಂದಿ ಹೂ ಬದಲು ಸೊಪ್ಪು, ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಗ್ರೀನ್ ಹೌಸ್ ನಲ್ಲಿ ಹೂ ಬೆಳೆಯುವವರು ಮಾತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆವೊಂದಕ್ಕೆ ಗ್ರೀನ್ ನಿರ್ಮಿಸಿ ಹೂ ಬೆಳೆ ನಾಟಿ ಮಾಡಲು 50 ಲಕ್ಷ ಖರ್ಚಾಗುತ್ತದೆ. ಬಹುತೇಕ ಎಲ್ಲಾ ರೈತರು ಬ್ಯಾಂಕ್​ಗಳಿಂದ ಸಾಲ ಪಡೆದಿರುತ್ತಾರೆ. ಇದೀಗ ಹೂವುಗಳಿಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಸರ್ಕಾರ ನೀಡಿದ ಅಲ್ಪ ಪರಿಹಾರವು ಸಾಲದಾಗಿದೆ. ಒಂದು ಕಡೆ ಬೆಳೆಯನ್ನು ಉಳಿಸಿಕೊಳ್ಳಲು ನಿರ್ವಹಣೆ ಮಾಡಬೇಕು. ಜೊತೆಗೆ ಬ್ಯಾಂಕುಗಳಿಗೆ ಕಂತು ಪಾವತಿಸಬೇಕಾಗಿದ್ದು, ಹೂ ಬೆಳೆಯುವ ರೈತರ ಸ್ಥಿತಿ ಅಂತಂತ್ರವಾಗಿದೆ ಎಂದು ಹೂ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:Education: ವಿದ್ಯಾಗಮ 2.0 ಶುರು ಮಾಡಲು ಮುಂದಾದ ಶಿಕ್ಷಣ ಇಲಾಖೆ

ಒಟ್ಟಿನಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಹೂ ಬೆಳೆಗಾರರಿಗೆ ಲಾಕ್​ಡೌನ್​ನಿಂದಾಗಿ ಹತ್ತಾರು ಕೋಟಿ ನಷ್ಟ ಉಂಟಾಗಿದೆ. ಆದ್ರೆ ಸರ್ಕಾರ ಮಾತ್ರ ಅಲ್ಪ ಪ್ರಮಾಣದ ಪರಿಹಾರ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ.  ಹಾಗಾಗಿ ಹೂ ಬೆಳೆಗಾರರ ಬಗ್ಗೆ ಕೃಷಿ ಸಚಿವರು ಗಮನಹರಿಸಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: