ಆನೇಕಲ್​ನಲ್ಲಿ ಕಾನೂನಿಗೆ ಕಿಂಚಿತ್ತೂ ಬೆಲೆ ಇಲ್ವಾ?; ಇಲ್ಲಿನ ಫಲವತ್ತಾದ ಕೃಷಿ ಜಮೀನಿನಲ್ಲಿ ದಂಧೆಕೋರರು ಏನ್ ಮಾಡ್ತಾ ಇದಾರೆ ಗೊತ್ತಾ?

ಅನಧಿಕೃತ ಇಟ್ಟಿಗೆ ತಯಾರಿಕಾ ಘಟಕಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಕೃಷಿ ಉದ್ದೇಶಿತ ಜಮೀನುಗಳಲ್ಲಿ ಕೃಷಿಯೇತರ ಚಟುವಟಿಕೆ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ನೀರಪೇಕ್ಷಣಾ ಪತ್ರ ಪಡೆಯಬೇಕು. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಸರ್ಕಾರಕ್ಕೆ ಕಂದಾಯ ಪಾವತಿಸಬೇಕು. ಇಲ್ಲವಾದರೆ ಅಂತಹ ಘಟಕಗಳನ್ನು ಕಾನೂನು ಬಾಹಿರ ಎಂದು ಉಲ್ಲೇಖಿಸಲಾಗುತ್ತದೆ.

MAshok Kumar | news18-kannada
Updated:January 11, 2020, 8:01 PM IST
ಆನೇಕಲ್​ನಲ್ಲಿ ಕಾನೂನಿಗೆ ಕಿಂಚಿತ್ತೂ ಬೆಲೆ ಇಲ್ವಾ?; ಇಲ್ಲಿನ ಫಲವತ್ತಾದ ಕೃಷಿ ಜಮೀನಿನಲ್ಲಿ ದಂಧೆಕೋರರು ಏನ್ ಮಾಡ್ತಾ ಇದಾರೆ ಗೊತ್ತಾ?
ಆನೇಕಲ್​ನಲ್ಲಿ ಕೃಷಿ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಟ್ಟಿಗೆ ಘಟಕ.
  • Share this:
ಆನೇಕಲ್ (ಜನವರಿ 11) :ಅದು ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಕೃಷಿ ಉದ್ದೇಶಿತ ಜಮೀನು. ಅಪರೂಪದ ಕೆಂಪು ಮಿಶ್ರಿತ ಮಣ್ಣು ಇಲ್ಲಿ ಹೇರಳವಾಗಿ ದೊರೆಯುತ್ತದೆ. ಕೃಷಿಯ ಹೊರತು ಈ ಭೂಮಿಯನ್ನು ಬೇರೆ ಯಾವುದೇ ಕೆಲಸಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲ. ಆದರೆ, ಕೆಲವು ದಂಧೆಕೋರರು ಈ ಪ್ರದೇಶದಲ್ಲಿ ಆಕ್ರಮವಾಗಿ ಇಟ್ಟಿಗೆ ಘಟಕಗಳನ್ನು ಸ್ಥಾಪಿಸಿಕೊಂಡಿದ್ದು, ಫಲವತ್ತಾದ ಮಣ್ಣನ್ನು ಅವ್ಯಾಹತವಾಗಿ ಲೂಟಿ ಹೊಡೆಯುತ್ತಿದ್ದಾರೆ. ವಿಷಯ ತಿಳಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಮೀನುಗಳಲ್ಲಿ ಯತೇಚ್ಚವಾಗಿ ದೊರೆಯುವ ಕೆಂಪು ಮಿಶ್ರಿತ ಜೇಡಿ ಮಣ್ಣು ಇಟ್ಟಿಗೆ ತಯಾರಿಕೆಗೆ ಹೇಳಿ ಮಾಡಿಸಿದಂತಹ ಮಣ್ಣು. ಈ ಮಣ್ಣಿನಲ್ಲಿ ತಯಾರಿಸಿದ ಇಟ್ಟಿಗೆ ಕೆಂಪು ಮತ್ತು ಗಟ್ಟಿಯಾಗಿರುವ ಕಾರಣ ಅತಿ ಹೆಚ್ಚು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹೊರ ರಾಜ್ಯದ ಅಕ್ರಮ ಇಟ್ಟಿಗೆ ದಂಗೆಕೋರರು ರಾಜ್ಯದ ಗಡಿ ಹಳ್ಳಿಗಳ ರೈತರ ಹೊಲಗಳಲ್ಲಿ ಅನಧಿಕೃತವಾಗಿ ಇಟ್ಟಿಗೆ ಘಟಕಗಳನ್ನು ಸ್ಥಾಪಿಸಿದ್ದು, ಇಲ್ಲಿ ತಯಾರಾದ ಇಟ್ಟಿಗೆಗಳನ್ನು ದುಬಾರಿ ಬೆಲೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆಕ್ರೊಶ.

ಇನ್ನೂ ಅನಧಿಕೃತ ಇಟ್ಟಿಗೆ ತಯಾರಿಕಾ ಘಟಕಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಕೃಷಿ ಉದ್ದೇಶಿತ ಜಮೀನುಗಳಲ್ಲಿ ಕೃಷಿಯೇತರ ಚಟುವಟಿಕೆ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ನೀರಪೇಕ್ಷಣಾ ಪತ್ರ ಪಡೆಯಬೇಕು. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಸರ್ಕಾರಕ್ಕೆ ಕಂದಾಯ ಪಾವತಿಸಬೇಕು. ಇಲ್ಲವಾದರೆ ಅಂತಹ ಘಟಕಗಳನ್ನು ಕಾನೂನು ಬಾಹಿರ ಎಂದು ಉಲ್ಲೇಖಿಸಲಾಗುತ್ತದೆ.

ತಾಲ್ಲೂಕು ಆಡಳಿತದಿಂದ ಇಲ್ಲಿನ ಯಾವುದೇ ಇಟ್ಟಿಗೆ ತಯಾರಿಕಾ ಘಟಕಗಳು ಪರವಾನಗಿ ಪಡೆದಿಲ್ಲ. ಹಾಗಾಗಿ ಸ್ಥಳೀಯ ಕಂದಾಯ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ಆನೇಕಲ್ ತಹಶೀಲ್ದಾರ್ ಮಹಾದೇವಯ್ಯ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಆಶಯ.

(ವರದಿ: ಆದೂರು ಚಂದ್ರು)

ಇದನ್ನೂ ಓದಿ : ನೆರೆ ಸಂತ್ರಸ್ತರಿಗೆ ನೀಡಿದ್ದ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ ರಾಯಚೂರು ಶಾಲಾ ಮುಖ್ಯ ಶಿಕ್ಷಕ; ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನೊಟೀಸ್
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ