ನಾಳೆ ಮಂಡ್ಯಕ್ಕೆ ಆಂಧ್ರ ಸಿಎಂ: ನಾಯ್ಡು ಮತ ಓಲೈಕೆಗೆ ಕುಮಾರಸ್ವಾಮಿ ಹೊಸ ತಂತ್ರ?

ಈ ಹಿಂದೆ 'ನಾಯ್ಡುಗಳ ಕೈಯಲ್ಲಿ ಅಧಿಕಾರ ಕೊಟ್ಟರೆ ಗೌಡರ ಕಥೆ ಏನು?' ಎಂದು ಶಿವರಾಮೇಗೌಡ  ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಇದು ತಮಗೆ ಹೊಡೆತ ಬೀಳಲಿದೆ ಎಂದ ಅರಿತ ಸಿಎಂ ಈಗ ಚಂದ್ರಬಾಬು ನಾಯ್ಡು ಅವರನ್ನು ಕರೆಸುವ ಮೂಲಕ ನಾಯ್ಡು ಮತಗಳ ಓಲೈಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Seema.R | news18
Updated:April 14, 2019, 1:31 PM IST
ನಾಳೆ ಮಂಡ್ಯಕ್ಕೆ ಆಂಧ್ರ ಸಿಎಂ: ನಾಯ್ಡು ಮತ ಓಲೈಕೆಗೆ ಕುಮಾರಸ್ವಾಮಿ ಹೊಸ ತಂತ್ರ?
ಚಂದ್ರಬಾಬು ನಾಯ್ಡು
Seema.R | news18
Updated: April 14, 2019, 1:31 PM IST
ಶ್ರೀನಿವಾಸ್​ ಹಳಕಟ್ಟಿ

ಮಂಡ್ಯ (ಏ.14): ಹೈ ವೋಲ್ಟೆಜ್​ ಕಣವಾಗಿರುವ ಮಂಡ್ಯದಲ್ಲಿ ಮಗನನ್ನು ಗೆಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಸಿಎಂ ಕುಮಾರಸ್ವಾಮಿ, ಅದಕ್ಕಾಗಿ ಕಾಂಗ್ರೆಸ್​ ಘಟಾನುಘಟಿಗಳಾದ ಸಿದ್ದರಾಮಯ್ಯ, ರಾಹುಲ್​ ಗಾಂಧಿಯಿಂದ ಪ್ರಚಾರ ನಡೆಸಿದ್ದಾರೆ. ಇದೀಗ ಅವರು, ನೆರೆ ರಾಜ್ಯವಾದ ಆಂಧ್ರಪ್ರದೇಶದ ಸಿಎಂ ಅವರನ್ನು ಕೂಡ ಪ್ರಚಾರಕ್ಕೆ ಆಹ್ವಾನಿಸಿದ್ದು, ನಾಳೆ ಸಿಎಂ ಚಂದ್ರಬಾಬು ನಾಯ್ಡು ನಿಖಿಲ್​ ಪರ ಪ್ರಚಾರಕ್ಕಾಗಿ ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಈ ಕುರಿತು ನ್ಯೂಸ್​ 18ಗೆ ಮಾಹಿತಿ ನೀಡಿರುವ ಸಿಎಂ ಕುಮಾರಸ್ವಾಮಿ, ಹೌದು ನಾಳೆ ಮೇಲುಕೋಟೆ, ಪಾಂಡವಪುರದಲ್ಲಿ ಚಂದ್ರಬಾಬು ನಾಯ್ಡು ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಲತಾ- ನಿಖಿಲ್​ ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿ ಕಣವಾಗಿರುವ ಮಂಡ್ಯದಲ್ಲಿ ಒಂದು ಕಡೆ ಸಿನಿಮಾ ಘಟಾನುಘಟಿಗಳು ಪ್ರಚಾರ ಮಾಡುತ್ತಿದ್ದರೆ, ಇತ್ತ ರಾಜಕೀಯ ಘಟಾನುಘಟಿಗಳು ನಿಖಿಲ್​ ಪರ ಮತಯಾಚಿಸುತ್ತಿದ್ದಾರೆ. ಚುನಾವಣೆಗೆ ಇನ್ನೇನು ನಾಲ್ಕು ದಿನ ಬಾಕಿಯಿದ್ದು, ಮಂಡ್ಯ ಕಣ ರಂಗೇರಿದೆ. ಈಗಾಗಲೇ ನಿಖಿಲ್​ ಪರ ರಾಜಕೀಯ ದಿಗ್ಗಜರು ಸಿಎಂ ಪುತ್ರನ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇನ್ನು ಸುಮಲತಾ ನಾಯ್ಡು ಸಮುದಾಯಕ್ಕೆ ಸೇರಿದ್ದು, ಅವರ  ಮತಗಳನ್ನು ಸೆಳೆಯಲು ಆಂಧ್ರ ಸಿಎಂ ಅವರನ್ನು ಉದ್ದೇಶ ಪೂರ್ವಕವಾಗಿ ಆಹ್ವಾನಿಸಲಾಗಿದೆ. ಈ ಮೂಲಕ ಮಗನ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ  ಎಂಬ ಮಾತುಗಳು ಕೇಳಿ ಬಂದಿದೆ.

ನಾಯ್ಡುಗಳ ಓಲೈಕೆ ಮುಂದಾದ ಎಚ್​ಡಿಕೆ
Loading...

ಈ ಹಿಂದೆ 'ನಾಯ್ಡುಗಳ ಕೈಯಲ್ಲಿ ಅಧಿಕಾರ ಕೊಟ್ಟರೆ ಗೌಡರ ಕಥೆ ಏನು?' ಎಂದು ಶಿವರಾಮೇಗೌಡ  ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಸುಮಲತಾ ಬೆಂಬಲಕ್ಕೆ ನಿಂತಿರುವವರೆಲ್ಲಾ ನಾಯ್ಡುಗಳೇ. ಗೌಡರು ಅವರನ್ನು ಸೋಲಿಸಬೇಕು ಎಂದು  ಸುಮಲತಾ ಮೂಲ ಕೆದಕಿದ್ದ ಕುರಿತು ನಾಯ್ಡು ಸಮುದಾಯ ಸೇರಿದಂತೆ ಸುಮಲತಾ ಬೆಂಬಲಿಗರು ವಿರೋಧಿಸಿದ್ದರು. ಸುಮಲತಾ ಯಾವುದೇ ಜಾತಿ ಇದ್ದರೂ ಅವರು ಮಂಡ್ಯ ಸೊಸೆ ಎಂಬ ಮಾತನ್ನು ರಾಜಕೀಯ ನಾಯಕರು ಕೂಡ  ಹೇಳಿದ್ದರು.

ಸುಮಲತಾ ಮೂಲತಃ ಆಂಧ್ರ ಮೂಲದವರಾಗಿದ್ದು, ಅವರ ಜಾತಿ ಪ್ರಶ್ನೆ ಮಾಡಿರುವುದರಿಂದ ಕ್ಷೇತ್ರದಲ್ಲಿರುವ ನಾಯ್ಡು ಮತಗಳ ಹೊಡೆತ ಬೀಳಲಿದೆ.  ಇದು ಕೇವಲ ಕ್ಷೇತ್ರದಲ್ಲಿ ಅಲ್ಲದೇ ಅವರ ಈ ಮಾತು ರಾಜ್ಯದಲ್ಲಿರುವ ನಾಯ್ಡು ಮತಗಳ ಮೇಲೆ ಪ್ರಭಾವ ಬೀರಲಿದೆ. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ನಾಯ್ಡುಗಳಿದ್ದು, ಇದು ತಮಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ನಡೆಸಿರುವ ಸಿಎಂ ಈಗ ಅವರ ಓಲೈಕೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ತಮ್ಮ ಪಕ್ಷದ ನಾಯಕರು ಮಾಡಿದ ಎಡವಟ್ಟನ್ನು ಸರಿಪಡಿಸುವ ಜೊತೆಗೆ ಅವರ ಮತ ಸೆಳೆಯಲು ತಂತ್ರ ಹೂಡಿದ್ದಾರೆ.  ಅಲ್ಲದೇ, ಚಂದ್ರ ಬಾಬು ಆಗಮನದಿಂದ ನಾಯ್ಡುಗಳ ವಿರೋಧಿ ನಾವಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಮತದಾನದ ಹಕ್ಕಿನಿಂದ ವಂಚಿತರಾದ ಚುನಾವಣಾ ರಾಯಭಾರಿ; ಈ ಬಾರಿ ರಾಹುಲ್​ ದ್ರಾವಿಡ್​ ಓಟ್​ ಮಾಡುವಂತಿಲ್ಲ

ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್​ ಮಾಡಿಕೊಂಡಿರುವ ಚಂದ್ರಬಾಬು ನಾಯ್ಡು, ಇತ್ತೀಚೆಗಷ್ಟೇ ದೇವೇಗೌಡ ಅವರು ಪ್ರಧಾನಿಯಾಗಬಲ್ಲ ಸಮರ್ಥ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಈ ಹಿಂದೆ ಕುಮಾರಸ್ವಾಮಿ ಪ್ರಮಾಣ ವಚನದಲ್ಲಿ ಭಾಗಿಯಾಗಿದ್ದು, ಸಿಎಂಗೆ ಬೆಂಬಲವಾಗಿ ನಿಂತಿದ್ದರು. ಕಳೆದ ನವೆಂಬರ್​ನಲ್ಲಿ ಕೂಡ ದೇವೇಗೌಡ ಅವರ ಮನೆಗೆ ಆಗಮಿಸಿದ್ದ ನಾಯ್ಡು, ಮೋದಿಗೆ ಪರ್ಯಾಯ ಶಕ್ತಿಯಾಗಿ ಪ್ರಾದೇಶಿಕ ಪಕ್ಷಗಳು ಬೆಳೆಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು.

ಆಂಧ್ರ ಪ್ರದೇಶದಲ್ಲಿ ಈಗಾಗಲೇ ಚುನಾವಣೆ ಮುಗಿದಿದ್ದು, ನಾಳೆ ಚಂದ್ರಬಾಬು ನಾಯ್ಡು ಬಾಬು ಕರ್ನಾಟಕದಲ್ಲಿ ಪ್ರಚಾರಕ್ಕೆ ಮುಂದಾಗಲಿದ್ದಾರೆ. ಮಂಡ್ಯದಲ್ಲಿನ ಅವರ ಪ್ರಚಾರ ನಿಖಿಲ್​ಗೆ ಎಷ್ಟು ಪೂರಕವಾಗಲಿದೆಯೋ ಎಂಬುದು ತಿಳಿಯದು. ಆದರೆ, ನೆರೆ ರಾಜ್ಯದ ಸಿಎಂ ಕರೆತಂದರೆ ಅದು ನಮಗೆ ಸಕರಾತ್ಮಕವಾಗಿ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಕುಮಾರಸ್ವಾಮಿಗೆ ಇದ್ದಂತೆ ಕಾಣುತ್ತಿದೆ.

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626