Kannada Love: ಕೋಲಾರದ ಸರಕಾರಿ ಶಾಲೆಗೆ ಸೇರಿ ಕನ್ನಡ ಪ್ರೀತಿ ಮೆರೆದ ಆಂಧ್ರದ ವಿದ್ಯಾರ್ಥಿಗಳು

ಕನ್ನಡ ಭಾಷೆ ಕಲಿಯಲು ಸುಲಭವಾಗಿದ್ದು ತೆಲುಗು ಭಾಷೆಗಿಂತ ಬೇರೆ ಬೇರೆ ವಿಷಯಗಳನ್ನು ಕನ್ನಡದಲ್ಲಿ ಸುಲಭವಾಗಿ ಕಲಿಯಬಹುದು ಎಂದು ಮಕ್ಕಳು ಹೇಳಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸರಕಾರಿ ಶಾಲೆ (Government schools) ಎಂದರೆ ಮೂಗು ಮುರಿಯುವವರೇ ಹೆಚ್ಚಾಗಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳು ಅದರಲ್ಲೂ ಕನ್ನಡ ಮಾಧ್ಯಮ (Kannada Medium) ಶಾಲೆಗಳೆಂದರೆ ಮಾರುದ್ದ ಸರಿಯುತ್ತಾರೆ. ಉತ್ತಮ (Good Teachers) ಶಿಕ್ಷಕರಿಲ್ಲ, ಶಾಲೆಗಳು ಉತ್ತಮ ಸೌಲಭ್ಯಗಳನ್ನು(Lack Good Facilities) ಹೊಂದಿಲ್ಲ ಮೊದಲಾದ ದೂರುಗಳನ್ನು ಮಕ್ಕಳ ಪೋಷಕರು (Parents) ತಿಳಿಸುತ್ತಲೇ ಇರುತ್ತಾರೆ. ಇದೇ ಕಾರಣಕ್ಕಾಗಿಯೇ ತಾವು ಲಕ್ಷ ಲಕ್ಷ ಡೊನೇಶನ್ ನೀಡಿ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ, ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದಾಗಿ ಅವರು ಹೇಳುತ್ತಾರೆ.

ಕನ್ನಡ ಪ್ರೀತಿ
ಆದರೆ ಈ ಎಲ್ಲಾ ವಿಷಯಗಳಿಗೆ ತದ್ವಿರುದ್ಧವಾಗಿ ಆಂಧ್ರ ಪ್ರದೇಶದ ಹಳ್ಳಿಯಲ್ಲಿರುವ ಮಕ್ಕಳು ಕೋಲಾರ ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಕನ್ನಡ ಪ್ರೀತಿ ಮೆರೆದಿದ್ದಾರೆ.
ಹಳ್ಳಿಯಲ್ಲಿನ ಸುಮಾರು 19 ವಿದ್ಯಾರ್ಥಿಗಳು ಆಂಧ್ರ ಪ್ರದೇಶ ರಾಜ್ಯದ ಗಡಿಯಿಂದ 2 ಕಿ.ಮೀ ದೂರದಲ್ಲಿರುವ ಚಿನ್ನಯ್ಯಗಾರಿಪಲ್ಲಿ ಹಳ್ಳಿಯಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಸರಕಾರಿ ಶಾಲೆಯಲ್ಲಿರುವ ಉತ್ತಮ ವ್ಯವಸ್ಥೆ ಹಾಗೂ ಸರಳವಾಗಿರುವ ಕನ್ನಡ ಭಾಷೆಯಿಂದಾಗಿ ಬೇರೆ ಬೇರೆ ವಿಷಯಗಳನ್ನು ಸುಲಭವಾಗಿ ಕಲಿತುಕೊಳ್ಳಬಹುದು ಎಂಬ ಕಾರಣಕ್ಕೆ ಮಕ್ಕಳು ಇಲ್ಲಿರುವ ಕನ್ನಡ ಶಾಲೆಗೆ ತಪ್ಪದೇ ಕಳೆದ 2 ತಿಂಗಳುಗಳಿಂದ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: School Reopen: ಬಸ್, ಆಟೋ ಯಾಕೆ...JCBಯಲ್ಲೇ ಹೋಗ್ತೀವಿ! ಮಕ್ಕಳನ್ನು ಶಾಲೆಗೆ 'ಡ್ರಾಪ್' ಮಾಡಿದ ಜೆಸಿಬಿ!

ಆಂಧ್ರ ಮಕ್ಕಳ ಕನ್ನಡ ಪ್ರೀತಿ:
ಆಂಧ್ರಪ್ರದೇಶದ 19 ವಿದ್ಯಾರ್ಥಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಿನ್ನಯ್ಯಗಾರಿಪಲ್ಲಿ ಹಳ್ಳಿಯಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರ್ಪಡೆಗೊಂಡಿದ್ದು ಆಂಧ್ರ ಪ್ರದೇಶದ ಗಡಿಯಿಂದ ಹಳ್ಳಿಯು 2 ಕಿ.ಮೀ ಅಂತರದಲ್ಲಿದೆ. ಇನ್ನು ಮಕ್ಕಳು ಶಾಲೆಗೆ ಬರುತ್ತಿರುವುದರ ಕುರಿತು ಕೋಲಾರ ಜಿಲ್ಲೆಯ ಶಿಕ್ಷಣ ಅಧಿಕಾರಿ ಸಿ.ಆರ್ ಅಶೋಕ್ ಸಂತಸ ವ್ಯಕ್ತಪಡಿಸಿದ್ದು, ಈ 19 ವಿದ್ಯಾರ್ಥಿಗಳು 5 ರಿಂದ 8 ನೇ ತರಗತಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು ಕಳೆದ 2 ತಿಂಗಳಿನಿಂದ ತಪ್ಪದೆ ಶಾಲೆಗೆ ಹಾಜರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಾವು ನಿತ್ಯವೂ ಇದೇ ದಾರಿಯಲ್ಲಿ ಕಚೇರಿ ಕೆಲಸಕ್ಕೆ ಪ್ರಯಾಣಿಸುತ್ತಿದ್ದು ಮಕ್ಕಳ ಕನ್ನಡ ಪ್ರೀತಿ ಹಾಗೂ ಶಾಲಾ ಕಲಿಕೆಗೆ ಅವರಿಗಿರುವ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ವಿಷಯಗಳನ್ನು ಅಭ್ಯಸಿಸುತ್ತಿರುವ ಮಕ್ಕಳು:
ಅಲ್ಚೇಪಲ್ಲಿಯ ನಿವಾಸಿಗಳಾಗಿರುವ ಈ ಮಕ್ಕಳು ಒಮ್ಮೊಮ್ಮೆ ನಡೆದು ಶಾಲೆಗೆ ಬರುತ್ತಾರೆ. ಇಲ್ಲದಿದ್ದರೆ ಸೈಕಲ್ ಅಥವಾ ಸಾರ್ವಜನಿಕ ಸಾರಿಗೆ ಅವಲಂಬಿಸಿ ಶಾಲೆಗೆ ಬರುತ್ತಾರೆ. ಆದರೆ ಒಂದು ದಿನವೂ ಶಾಲೆಯನ್ನು ತಪ್ಪಿಸಿಕೊಂಡಿದ್ದನ್ನು ನಾನು ನೋಡಿಲ್ಲ ಎಂಬುದು ಅಶೋಕ್ ಮಾತಾಗಿದೆ.

ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯನ್ನು ಏಕೆ ಆಯ್ದುಕೊಂಡಿದ್ದಾರೆ ಎಂದು ಅವರನ್ನು ಪ್ರಶ್ನಿಸಿದಾಗ ಕನ್ನಡ ಭಾಷೆ ಕಲಿಯಲು ಸುಲಭವಾಗಿದ್ದು ತೆಲುಗು ಭಾಷೆಗಿಂತ ಬೇರೆ ಬೇರೆ ವಿಷಯಗಳನ್ನು ಕನ್ನಡದಲ್ಲಿ ಸುಲಭವಾಗಿ ಕಲಿಯಬಹುದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸರಕಾರಿ ಶಾಲೆಯಲ್ಲಿ ಅವರಿಗೆ ನೀಡಿರುವ ಸೌಲಭ್ಯಗಳು ಕಲಿಕೆಗೆ ಉತ್ಸಾಹವನ್ನುಂಟು ಮಾಡಿದೆ ಎಂಬುದು ಮಕ್ಕಳ ಅಭಿಪ್ರಾಯವಾಗಿದೆ.

ಸರಕಾರಿ ಶಾಲೆಯಲ್ಲಿರುವ ಉತ್ತಮ ಸೌಲಭ್ಯಗಳು:
ಪಕ್ಕದ ಸೋಮಯಾಜಲಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ನಾಗರಾಜ್ ಹೇಳುವಂತೆ ಕರ್ನಾಟಕದಲ್ಲಿರುವ ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳು ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಬರುವಂತೆ ಆಕರ್ಷಿಸುತ್ತಿವೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟ, ಉಚಿತ ಪುಸ್ತಕಗಳು ಹಾಗೂ ಸಮವಸ್ತ್ರಗಳು ಹಾಗೂ ಉತ್ತಮ ಶಿಕ್ಷಕರು ಗಡಿ ಪ್ರದೇಶದ ಶಾಲೆಗಳಲ್ಲಿರುವುದರಿಂದ ಆಂಧ್ರ ಪ್ರದೇಶದಿಂದ ಅನೇಕ ಸ್ಥಳೀಯರು ತಮ್ಮ ವಾರ್ಡ್‌ಗಳನ್ನು ಕರ್ನಾಟಕದಲ್ಲಿರುವ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Back to School: ಈ ಶಾಲೆಗೆ ಸೇರುವ ಪ್ರತೀ ಮಗುವಿಗೂ 1 ಸಾವಿರ ರೂಪಾಯಿ FD: ಹಳೆ ವಿದ್ಯಾರ್ಥಿಗಳ ಹೊಸಾ ಉತ್ಸಾಹ

ಚಿನ್ನಯ್ಯಗಾರಿಪಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌.ಜಿ ಆನಂದಕುಮಾರ್ ತಿಳಿಸಿರುವಂತೆ ಈ ಮಕ್ಕಳು ಸ್ಥಳೀಯ ಮಕ್ಕಳೊಂದಿಗೆ ಆತ್ಮೀಯವಾಗಿ ಹೊಂದಿಕೊಂಡಿದ್ದಾರೆ. ಅದೇ ರೀತಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮಕ್ಕಳನ್ನು ಹೊಗಳಿದ್ದಾರೆ.
Published by:vanithasanjevani vanithasanjevani
First published: