• Home
  • »
  • News
  • »
  • state
  • »
  • ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆ ಬಂದ್?; 79 ಶಾಲೆಗಳಿಗೆ ಡಿಕ್ಲರೇಷನ್ ಪತ್ರ ಕಳಿಸಿರುವ ಜಗನ್​ಮೋಹನ್ ಸರ್ಕಾರ

ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆ ಬಂದ್?; 79 ಶಾಲೆಗಳಿಗೆ ಡಿಕ್ಲರೇಷನ್ ಪತ್ರ ಕಳಿಸಿರುವ ಜಗನ್​ಮೋಹನ್ ಸರ್ಕಾರ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿದರೆ, ಅಥವಾ ಕನ್ನಡ ಮಕ್ಕಳು ತೆಲುಗು ಇಲ್ಲವೇ ಆಂಗ್ಲ ಭಾಷೆಯಲ್ಲಿ ಮಾತ್ರ ಓದಬೇಕು ಎಂಬುದನ್ನು ಆಂಧ್ರ ಸರ್ಕಾರ ನಿರ್ಧರಿಸಿದರೆ ಮುಂದಿನ ಶೈಕ್ಷಣಿಕ ವರುಷದಿಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಗತಿಯೇನು? ಎಂಬುದು ಇದೀಗ ಗಡಿನಾಡು ಕನ್ನಡಿಗರಲ್ಲಿ ಮೂಡಿರುವ ಬಹುದೊಡ್ದ ಪ್ರಶ್ನೆ.

ಮುಂದೆ ಓದಿ ...
  • Share this:

ಬಳ್ಳಾರಿ - ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ಕನ್ನಡ ಪ್ರೀತಿಯೇನೋ ಇದೆ. ಆದರೆ, ಅಲ್ಲಿಯ ಕನ್ನಡ ಮಾಧ್ಯಮ ಶಾಲೆ ಮುಚ್ಚಲು ನೆರೆಯ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಕಳೆದೊಂದು ತಿಂಗಳ ಹಿಂದೆಯೇ ಈ ಬಗ್ಗೆ ಮುನ್ಸೂಚನೆ ನೀಡಿದರೂ ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಕನ್ನಡ ಮಾಧ್ಯಮ ಶಾಲೆಗಳಿಗೆ ಡಿಕ್ಲರೇಷನ್ ಪತ್ರ ಕಳುಹಿಸಲಾಗಿದೆ. ಆಂಗ್ಲ ಅಥವಾ ತೆಲುಗು ಭಾಷೆಯನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಇಷ್ಟಾದರೂ ನಮ್ಮ ಸರ್ಕಾರ ಮಾತ್ರ ಗಾಢನಿದ್ರೆಯಿಂದ ಎದ್ದಂತೆ ಕಂಡು ಬರುತ್ತಿಲ್ಲ.


ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿದರೆ, ಅಥವಾ ಕನ್ನಡ ಮಕ್ಕಳು ತೆಲುಗು ಇಲ್ಲವೇ ಆಂಗ್ಲ ಭಾಷೆಯಲ್ಲಿ ಮಾತ್ರ ಓದಬೇಕು ಎಂಬುದನ್ನು ಆಂಧ್ರ ಸರ್ಕಾರ ನಿರ್ಧರಿಸಿದರೆ ಮುಂದಿನ ಶೈಕ್ಷಣಿಕ ವರುಷದಿಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಗತಿಯೇನು? ಎಂಬುದು ಇದೀಗ ಗಡಿನಾಡು ಕನ್ನಡಿಗರಲ್ಲಿ ಮೂಡಿರುವ ಬಹುದೊಡ್ದ ಪ್ರಶ್ನೆ.


ಇಂಥದೊಂದು ಪ್ರಶ್ನೆ ಗಡಿಭಾಗದ ಆಂಧ್ರದಲ್ಲಿ ಮಾತೃಭಾಷೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದೆ. ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ ಒಟ್ಟು 79 ಕನ್ನಡ ಮಾಧ್ಯಮದ ಶಾಲೆಗಳಿವೆ. ಈ ಪೈಕಿ 20ಕ್ಕೂ ಹೆಚ್ಚು ಶಾಲೆಗಳು  ಶತಮಾನೋತ್ಸವ ಆಚರಿಸಿವೆ. ತೆಲಂಗಾಣದಲ್ಲಿ 26 ಕನ್ನಡ ಮಾಧ್ಯಮದ ಶಾಲೆಗಳಿವೆ. ಆಂಧ್ರದ ಅನಂತಪುರ, ಕರ್ನೂಲು ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಶಾಲೆಗಳಿದ್ದು, ಇಲ್ಲಿ ಕನ್ನಡ ಮಾಧ್ಯಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಲು ಅವಕಾಶವಿದೆ.


ಆದರೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಧ್ರದಲ್ಲಿ ಪ್ರಾಥಮಿಕ ಹಂತದಲ್ಲಿ ಆಂಗ್ಲ ಅಥವಾ ತೆಲುಗು ಮಾಧ್ಯಮಗಳಾಗಿ ಶಾಲೆಗಳು ಕಾರ್ಯನಿರ್ವಹಿಸಬೇಕು ಎಂದು ಸಿಎಂ ಜಗನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿಗಷ್ಟೆ ಸರ್ಕಾರ ಬಿಇಓ ಮೂಲಕ ಡಿಕ್ಲರೇಷನ್ ಪತ್ರವನ್ನು ಆಯಾ ಗ್ರಾಪಂ, ಎಸ್ ಡಿ ಎಂಸಿ ಹಾಗೂ ಪಾಲಕರಿಗೆ ಕಳುಹಿಸಿದೆ.


ಈ ಪತ್ರದಲ್ಲಿ ಆಂಧ್ರ ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳು ತೆಲುಗು ಭಾಷೆಯಾಗಿ ಇಲ್ಲವೇ, ಇಂಗ್ಲಿಷ್ ಮಾಧ್ಯಮವಾಗಿ ನಡೆಸಲು ಅರ್ಜಿ ತುಂಬಿ ಕಳುಹಿಸಬೇಕು. ಯಾವುದಕ್ಕೆ‌ ಹೆಚ್ಚು ಒಮ್ಮತ ಬರುತ್ತೋ ಅಲ್ಲಿ ತೆಲುಗು ಇಲ್ಲವೇ ಇಂಗ್ಲಿಷ್ ಮಾಧ್ಯಮ ಶುರುವಾಗುತ್ತೆ ಎಂದು ಉಲ್ಲೇಖಿಸಿದೆ.


ಈ ಕೂಡಲೇ ರಾಜ್ಯ ಸರ್ಕಾರ ನೆರೆಯ ಆಂಧ್ರ ಸರ್ಕಾರದ ಜೊತೆ ಮಾತಾಡಿ ಕನ್ನಡ ಶಾಲೆ ಉಳಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಒತ್ತಾಯಿಸಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗುತ್ತಾ? ಗಡಿ ಭಾಗದ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುತ್ತಾ? ಎಂಬುದು ಇದೀಗ ಎಲ್ಲರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.


ಇದನ್ನೂ ಓದಿ : ಬಿಎಸ್​ವೈ ಸಂಪುಟ ಸಂಕಟ; ಮಂತ್ರಿ ಮಂಡಲ ವಿಸ್ತರಣೆ ಬೆನ್ನಿಗೆ ಕಮಲ ಪಾಳಯದಲ್ಲಿ ಶುರುವಾಯ್ತು ಲಾಬಿ ರಾಜಕಾರಣ

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು