Ananth Kumar Hegde: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಅನಂತ್ ಕುಮಾರ್ ಹೆಗಡೆ? ಶುರುವಾಗಿದೆ ಹೊಸ ಚರ್ಚೆ!

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದವರು. ಆದರೆ ಅವರು ಮುಂಬರಲಿರುವ ಸಂಸತ್ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎನ್ನುವ ಮಾತು ಕೇಳಿಬಂದಿದೆ.

ಅನಂತಕುಮಾರ್ ಹೆಗಡೆ

ಅನಂತಕುಮಾರ್ ಹೆಗಡೆ

  • Share this:
ಉತ್ತರ ಕನ್ನಡ: ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದಿಂದ (Lok Sabha constituency) ಸತತ ಆರು ಬಾರಿ ಸಂಸತ್ (Parliament) ಪ್ರವೇಶ ಮಾಡಿರುವ, ‘ಹಿಂದೂ ಫೈರ್ ಬ್ರಾಂಡ್’ (Hindu Fire Brand) ಖ್ಯಾತಿಯ ಸಂಸದ (MP) ಅನಂತಕುಮಾರ್ ಹೆಗಡೆ (Ananthkumar Hegde) ಮುಂದಿನ ಲೋಕಸಭಾ ಚುನಾವಣೆಯಲ್ಲಿ (Election) ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಈ ನಡುವೆ ಕೇಂದ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ (State Politics) ಅವರು ಮುಖ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಉತ್ತರ ಕನ್ನಡ ಬಿಜೆಪಿ (BJP) ಮಟ್ಟಿಗೆ ಸಂಸದ ಅನಂತಕುಮಾರ್ ಹೆಗಡೆ ಹೈಕಮಾಂಡ್ ಇದ್ದಂತೆ. ತಮ್ಮ ಪ್ರಖರ ಭಾಷಣದ ಮೂಲಕವೇ ಜನರ ಮೆಚ್ಚುಗೆ ಗಳಿಸಿ ಸತತ ಆರು ಬಾರಿ ಬಿಜೆಪಿಯಿಂದ ಸಂಸತ್ ಪ್ರವೇಶ ಮಾಡಿರುವ ಅನಂತಕುಮಾರ್, ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದು ಅನುಮಾನ

ಆದರೆ ಮುಂಬರಲಿರುವ ಸಂಸತ್ ಚುನಾವಣೆಗೆ ಅನಂತಕುಮಾರ್ ಹೆಗಡೆ ಸ್ಪರ್ಧಿಸುವುದು ಅನುಮಾನ ಎನ್ನುವ ಮಾತು ಕೇಳಿಬಂದಿದೆ. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದ ನಂತರ ಹೆಗಡೆ ಕೆಲ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ನಿಲ್ಲುವ ಅನುಮಾನ ವ್ಯಕ್ತಪಡಿಸಿದ್ದರು. 2019ರಲ್ಲಿ ಮತ್ತೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಅನಂತ್ ಭರ್ಜರಿ ಗೆಲುವು ಗಳಿಸಿದ್ದರು.

ಕೈಕೊಟ್ಟಿದ್ದ ಅನಂತಕುಮಾರ್ ಆರೋಗ್ಯ

ಚುನಾವಣೆಯ ಗೆಲುವಿನ ನಂತರ ಅನೇಕ ಕಡೆಗಳಲ್ಲಿ ರಾಜಕೀಯ ವೈರಾಗ್ಯದ ಕುರಿತಾಗಿ ಅವರು ಮಾತನಾಡಿದ್ದರು.  ಅಲ್ಲದೇ, ಕೆಲ ಸಮಯದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ಅವರು ಮುಂಬರುವ ಚುನಾವಣೆಗೆ ಸ್ಪರ್ಧಿಸಲ್ಲ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಸಂಸದ ಹೆಗಡೆಗೆ ರಾಜ್ಯ ರಾಜಕಾರಣದತ್ತ ಮುಖ ಮಾಡುವ ಆಸಕ್ತಿ ಇದೆ ಎನ್ನಲಾಗಿದ್ದು, ಇದಕ್ಕಾಗಿ ಜಿಲ್ಲೆಯ ಯಾವುದಾದರು ಒಂದು ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಹೀಗೆ ಬಿಜೆಪಿ ಕಾರ್ಯಕರ್ತರೆ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಂಜೀವಿನಿ ಸರಸ್​ ಮೇಳ ಉದ್ಘಾಟನೆ ಬಳಿಕ ಹೆಂಡತಿಗೆ ಸೀರೆ ಖರೀದಿಸಿ ಗಮನಸೆಳೆದ CM Bommai

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಪ್ಲಾನ್

ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬೇಕು ಎಂದು ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು, ಈ ಬಾರಿ ಗೆಲುವಿಗಾಗಿ ಹೊಸ ಪ್ಲ್ಯಾನ್ ಹೆಣೆಯುತ್ತಿದೆ. ಸತತ ಮೂರು ಬಾರಿ ಒಂದೇ ಕ್ಷೇತ್ರದಿಂದ ಆಯ್ಕೆಯಾದವರಿಗೆ ಬೇರೆ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಿಂದ ಅನಂತ್ ಸ್ಪರ್ಧೆ?

ಈ ಹಿನ್ನಲೆಯಲ್ಲಿ ಶಿರಸಿ ಕ್ಷೇತ್ರದಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಲವು ಬಾರಿ ಶಾಸಕರಾಗಿದ್ದು, ಈ ಬಾರಿ ಅವರ ಬದಲು ಅನಂತಕುಮಾರ್ ಹೆಗಡೆಗೆ ಅವಕಾಶ ನೀಡಿ ಕಾಗೇರಿಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಹಳಿಯಾಳ ಕ್ಷೇತ್ರಕ್ಕೂ ಅನಂತಕುಮಾರ್ ಹೆಗಡೆ ಹೆಸರು ಕೇಳಿ ಬರುತ್ತಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸ್ತಾರಾ ವಿಶ್ವೇಶ್ವರ ಹೆಗಡೆ ಕಾಗೇರಿ?

ಅನಂತಕುಮಾರ್ ಹೆಗಡೆ ಕಣಕ್ಕೆ ಇಳಿದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿಯಿಂದ ಸಂಸತ್ ಟಿಕೇಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಕಾರವಾರ- ಅಂಕೋಲಾ ಕ್ಷೇತ್ರದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸಹ ಬಿಜೆಪಿಗೆ ಸೇರ್ಪಡೆಯಾಗಿ ಒಂದೊಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೇಟ್ ಸಿಗದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆಯುವ ನಿರೀಕ್ಷೆಯನ್ನ ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಕೆಲಸ ಮಾಡುವ ಬಸವಣ್ಣ: ವಿಪಕ್ಷಗಳ ಹೇಳಿಕೆಗೆ MP Pratap Simha ತಿರುಗೇಟು

ಹಿಂದೂ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್

ಸದ್ಯ ರಾಜ್ಯದಲ್ಲಿ ಬಿಜೆಪಿಯನ್ನ ಸಮರ್ಥವಾಗಿ ತೆಗೆದುಕೊಂಡು ಹೋಗಲು ಪ್ರಭಾವಿ ನಾಯಕರ ಕೊರತೆ ಇರುವ ಹಿನ್ನಲೆಯಲ್ಲಿ ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಪ್ರಸಿದ್ಧಿಯಾಗಿರುವ ಅನಂತಕುಮಾರ್ ಹೆಗಡೆಗೆ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟು, ಹಿಂದುತ್ವದ ಮತಗಳನ್ನ ಹೆಚ್ಚಾಗಿ ಗಳಿಸುವ ಪ್ಲ್ಯಾನ್ ಸಹ ಬಿಜೆಪಿ ಮಾಡಿದೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನ ಚುನಾವಣೆಯವರೆಗೂ ಕಾದುನೋಡಬೇಕಿದೆ.
Published by:Annappa Achari
First published: