ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ

news18
Updated:August 6, 2018, 1:07 PM IST
ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ
news18
Updated: August 6, 2018, 1:07 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ (ಆಗಸ್ಟ್06) : ನಿರ್ಮಾಪಕ ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಆರಂಭಿಸಿದ್ದು, ಈಗಾಗಲೇ ತನಿಖೆಗೆ ಬೇಕಾಗ ದಾಖಲೆಗಳನ್ನು ಪಡೆದಿಕೊಂಡಿದ್ದು, ಮುಂದಿನ ವಾರ ಬೆಳಗಾವಿಗೆ ಆಗಮಿಸಿ ವಿಚಾರಣೆ ಆರಂಭಿಸಿಲಿದ್ದಾರೆ.

ಸಂಗೊಳ್ಳಿ ರಾಯಣ್ಣ ಸೊಸೈಟಿ, ಭೀಮಾಂಬಿಕಾ ಸೊಸೈಟಿಯಲ್ಲಿ ಮಹಿಳಾ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ 232 ಕೋಟಿ ರೂಪಾಯಿ ಹಣವನ್ನು ಅಪ್ಪುಗೊಳ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ತನಿಖೆಯನ್ನು ಸಿಐಡಿಗೆ ಬೆಳಗಾವಿ ಪೊಲೀಸರು ಹಸ್ತಾಂತರಿಸಿದ್ದರು.

ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭೀಮಾಂಬಿಕ ಸಹಕಾರ ಸಂಘಗಳ 50ಕ್ಕೂ ಅಧಿಕ ಸೊಸೈಟಿಗಳಲ್ಲಿ ಸಾವಿರಾರು ಜನ ಗ್ರಾಹಕರು ನೂರಾರು ಕೋಟಿ ರೂ. ಠೇವಣಿ ಹಣ ಇಟ್ಟಿದ್ದರು. ಠೇವಣಿ ಅವಧಿ ಮುಗಿದರೂ ಸೊಸೈಟಿ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಹಣ ಮರಳಿಸದೇ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.

ಈ ಕುರಿತು ಗ್ರಾಹಕರು ಪ್ರತಿಭಟನೆ ನಡೆಸುತ್ತಲೇ ಇದ್ದು, ಕೆಲ ತಿಂಗಳ ಹಿಂದೆಯಷ್ಟೇ ಮಹಾನಗರ ಪೊಲೀಸರು ತನಿಖೆಯನ್ನು ಸಿಒಡಿಗೆ ಹಸ್ತಾಂತರಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿರುವ ಡಿವೈಎಸ್‍ಪಿ ಪುರಷೋತ್ತಮ ನೇತೃತ್ವದ ತಂಡ ಮುಂದಿನ ವಾರ ಬೆಳಗಾವಿಗೆ ಬರಲಿದೆ. ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಹಾಗೂ ಸೊಸೈಟಿ ನಿರ್ದೇಶಕರನ್ನು ಈ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.

ಇನ್ನೂ ಸೊಸೈಟಿಯಲ್ಲಿ ಠೇವಣಿ ರೂಪದಲ್ಲಿ ಹಣವಿಟ್ಟದ್ದ ನೂರಾರು ಗ್ರಾಹಕರು ಪ್ರತಿಭಟನೆ ನಡೆಸಿದ್ರು ಯಾವುದೇ ಪ್ರಯೋಜವಾಗಿಲ್ಲ. ಇನ್ನಾದರೂ ಇವರಿಗೆ ನ್ಯಾಯ ಸಿಗಲಿದೆಯೆ ಎಂಬುದು ಕಾದು ನೋಡಬೇಕಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ