ವಿಜಯದ ನಗೆ ಬೀರಿದ ಆನಂದ್ ಸಿಂಗ್; ಬಿಜೆಪಿ ಬಂಡಾಯ ಅಭ್ಯರ್ಥಿಗೆ ಸಿಕ್ಕ ಮತಗಳು ಎಷ್ಟು ಗೊತ್ತಾ?

ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು 85477 ಮತಗಳನ್ನು ಪಡೆಯುವುದರ ಮೂಲಕ 30125 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ಅವರನ್ನು ಸೋಲಿಸಿದರು

news18-kannada
Updated:December 9, 2019, 7:14 PM IST
ವಿಜಯದ ನಗೆ ಬೀರಿದ ಆನಂದ್ ಸಿಂಗ್; ಬಿಜೆಪಿ ಬಂಡಾಯ ಅಭ್ಯರ್ಥಿಗೆ ಸಿಕ್ಕ ಮತಗಳು ಎಷ್ಟು ಗೊತ್ತಾ?
ಆನಂದ್ ಸಿಂಗ್​ ಹಾಗೂ ಕವಿರಾಜ್ ಅರಸ್
  • Share this:
ಬಳ್ಳಾರಿ(ಡಿ.09) : ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯಲಕ್ಷ್ಮೀ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರಿಗೆ ಒಲಿದಿದ್ದಾಳೆ. 30125 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.

ಆರಂಭದ ಸುತ್ತಿನಿಂದಿಡಿದು 18ನೇ ಸುತ್ತಿನವರೆಗೆ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು 85477 ಮತಗಳನ್ನು ಪಡೆಯುವುದರ ಮೂಲಕ 30125 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ಅವರನ್ನು ಸೋಲಿಸಿದರು. ಘೋರ್ಪಡೆ ಅವರು 55352 ಮತಗಳು ಪಡೆಯುವುದರ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಎನ್.ಎಂ.ನಬಿ 3885 ಮತಗಳನ್ನು ಎನ್‍ಸಿಪಿಯ ಮಮತಾ 431 ಮತಗಳು, ಕರ್ನಾಟಕ ರಾಷ್ಟ್ರ ಸಮಿತಿಯ ಪ.ಯ.ಗಣೇಶ ಅವರು 433 ಮತಗಳು, ಉತ್ತಮ ಪ್ರಜಾಕೀಯ ಪಕ್ಷದ ಮಹೇಶ ಲಂಬಾಣಿ ಅವರು 430, ಪಕ್ಷೇತರ ಅಭ್ಯರ್ಥಿಗಳಾದ ಅಲಿ ಹೊನ್ನೂರ ಅವರು 303, ಕೆ.ಉಮೇಶ ಅವರು 134, ಕವಿರಾಜ್ ಅರಸ್ 3955, ಕಿಚಡಿ ಕೊಟ್ರೇಶ್ ಅವರು 793, ಕಂಡಕ್ಟರ್ ಪಂಪಾಪತಿ ಅವರು 261, ದೇವರಕೊಂಡಿ ಮಾರ್ಕಂಡಪ್ಪ ನೇಕಾರ್ ಅವರು 655, ಸಿ.ಎಂ.ಮಂಜುನಾಥ ಸ್ವಾಮಿ ಅವರು 307 ಮತಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ  ಓದಿ : ಪುತ್ರ ವಾತ್ಸಲ್ಯಕ್ಕೆ ಬಚ್ಚೇಗೌಡರು ನನ್ನನ್ನು ಸೋಲಿಸಿದರು ; ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​​​​​ ವಾಗ್ದಾಳಿ

1821 ಮತದಾರರು ನೋಟಾಗೆ ಅಸ್ತು ಎಂದಿದ್ದಾರೆ. ಪೊಸ್ಟಲ್ ಬ್ಯಾಲೇಟ್ ಮತ್ತು ಇಟಿಬಿಪಿಎಸ್ (266) ಸೇರಿ 154242 ಮತದಾರರು ಮತದಾನ ಮಾಡಿದ್ದರು. 4 ಪೊಸ್ಟಲ್ ಬ್ಯಾಲೆಟ್ ಮತ್ತು ಇಟಿಬಿಪಿಎಸ್ ಮತಗಳು ತಿರಸ್ಕೃವಾಗಿವೆ.

 
First published: December 9, 2019, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading