News18 India World Cup 2019

ಚುನಾವಣಾ ರಾಜಕಾರಣಕ್ಕೆ ಆನಂದ್ ಸಿಂಗ್ ಗುಡ್ ಬೈ!

news18
Updated:September 5, 2018, 8:35 PM IST
ಚುನಾವಣಾ ರಾಜಕಾರಣಕ್ಕೆ ಆನಂದ್ ಸಿಂಗ್ ಗುಡ್ ಬೈ!
news18
Updated: September 5, 2018, 8:35 PM IST
ಶರಣು ಹಂಪಿ,  ನ್ಯೂಸ್​ 18 ಕನ್ನಡ

ಬಳ್ಳಾರಿ (ಸೆ.05): ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಕುತೂಹಲ ನಡೆ ಮೂಡಿಸಿದ್ದ ವಿಜಯನಗರ ಶಾಸಕ ಆನಂದ್​ ಸಿಂಗ್​ ದಿಢೀರ್​ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಕಾರ್ಯಕರ್ತರಿಗೆ ಶಾಕ್​ ನೀಡಿದ್ದಾರೆ.

ಜನಾರ್ದನಾ ರೆಡ್ಡಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿದ್ದ ಆನಂದ್​ ಸಿಂಗ್​ ಕಳೆದ ಚುನಾವಣೆಯಲ್ಲಿಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ​ ಸೇರಿದ್ದರು. ಕಾಂಗ್ರೆಸ್​ ಸೇರಿದ ಬಳಿಕ ವಿಜಯನಗರ ಶಾಸಕನಾಗಿ ಆಯ್ಕೆಯಾಗಿದ್ದರು.

ಅವರು ಇಂದು ಏಕಾಏಕಿ ಈ ರೀತಿ ಘೋಷಣೆ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ತಾವು ಇನ್ನುಮುಂದೆ ಚುನಾವಣೆಗೆ  ಸ್ಪರ್ಧಿಸುವುದಿಲ್ಲ, ಆದರೆ, ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ಬೇರೆಯವರ ಸ್ಪರ್ಧೆಗೆ ಅವಕಾಶ ನೀಡುವ ದೃಷ್ಟಿಯಿಂದ ಈ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ ಎಂದು ಅವರು ತಿಳಿಸಿದರು.

ಗಣಿಧಣಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಆನಂದ್​ ಸಿಂಗ್  ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಹಂಪಿ ಉತ್ಸವವ ವೇಳೆ ಸಂತೋಷ್​ ಲಾಡ್​ಗೆ ಹೆಚ್ಚು ಆಪ್ತರಾಗಿ ಅವರ ಮೂಲಕ ಸಿದ್ದರಾಮಯ್ಯ ಅವರ ಮನವೊಲಿಸಿ ಕೈ ಹಿಡಿಯುವಲ್ಲಿ ಸಫಲರಾಗಿದ್ದರು.

ತಮ್ಮ ವಿರುದ್ಧ ಬಿಜೆಪಿ ನಾಯಕರು ಪರ್ಯಾಯ ನಾಯಕರನ್ನು ಬೆಳೆಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ಕಮಲ ಪಾಳೆಯವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದರು.
Loading...

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಾಗ ನಡೆದ ಹೈಡ್ರಾಮಾ ವೇಳೆ ಆನಂದ್​ ಸಿಂಗ್​ ಕಣ್ಮರೆಯಾಗಿ ಆತಂಕ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ  ಅಪರೇಷನ್​ ಕಮಲ ನಡೆಯದಂತೆ  ಡಿಕೆ ಶಿವಕುಮಾರ್​ ಕಡೆಯವರೆಗೂ ಆನಂದ್​ ಸಿಂಗ್​ ರಕ್ಷಿಸಿದ್ದರು.

ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ನಡೆಯುತ್ತಿದ್ದ ಸಿಬಿಐ ದಾಳಿ ಕೂಡ ಆನಂದ್​ ಸಿಂಗ್​ ಅವರನ್ನು ಟಾರ್ಗೆಟ್​ ಮಾಡಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಚುನಾವಣೆಗೆ ಗುಡ್​ ಬೈ ಹೇಳಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...