ಮೈಸೂರಿಗೆ ಬಂದ ಮರುದಿನವೇ ಆಧುನಿಕ ಶ್ರವಣಕುಮಾರನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಮಹೀಂದ್ರಾ ಕಂಪನಿ

ಆಧುನಿಕ ಶ್ರವಣ ಕುಮಾರನ ಬಗ್ಗೆ ಮಾಹಿತಿ ಪಡೆದಿದ್ದ ಮಹೀಂದ್ರ ಕಂಪನಿ ಮಾಲೀಕ ಆನಂದ್‌ ಮಹೀಂದ್ರ ಇದೊಂದು ಅಪರೂಪದ ಕಥೆಯಾಗಿದೆ. ಈ ಕಥೆ ನಿಜಕ್ಕು ಚೆನ್ನಾಗಿದ್ದು ಇವರಿಗೆ ನಮ್ಮ ಕಂಪನಿ ಕಾರು ನೀಡುವುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.


Updated:September 19, 2020, 2:39 PM IST
ಮೈಸೂರಿಗೆ ಬಂದ ಮರುದಿನವೇ ಆಧುನಿಕ ಶ್ರವಣಕುಮಾರನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಮಹೀಂದ್ರಾ ಕಂಪನಿ
ಆನಂದ್ ಮಹೀಂದ್ರ
  • Share this:
ಮೈಸೂರು (ಸೆಪ್ಟೆಂಬರ್ 19): ತಂದೆ ಕೊಡಿಸಿದ ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿದ್ದ ಆಧುನಿಕ ಶ್ರವಣಕುಮಾರ ಎಂದೆ ಖ್ಯಾತಿ ಗಳಿಸಿರುವ ಮೈಸೂರಿನ ಕೃಷ್ಣಕುಮಾರ್‌ ಅವರಿಗೆ ಪ್ರೀತಿಯ ಉಡುಗೊರೆ ಸಿಕ್ಕಿದೆ. ಮೈಸೂರಿಗೆ ಬಂದ ಮರುದಿನವೇ ಮಹೀಂದ್ರ ಕಂಪನಿ ತನ್ನ ಸಂಸ್ಥೆಯ ಹೊಸ ಕಾರೊಂದನ್ನ ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿದ್ದ ಕೃಷ್ಣಕುಮಾರ್‌ಗೆ ನೀಡಿದೆ. ನಿರಂತರವಾಗಿ 6 ತಿಂಗಳಿನಿಂದ ಕೃಷ್ಣಕುಮಾರ್ ಸಂಪರ್ಕದಲ್ಲಿದ್ದ ಕಂಪನಿಯ ಸಿಬ್ಬಂದಿಗಳು ಮೈಸೂರು ತಲುಪಿದ ಎರಡೇ ದಿನಕ್ಕೆ ಮೈಸೂರಿನ ಮಹೀಂದ್ರ ಶೋರೂಂಗೆ ಕರೆಸಿ ಕಾರು ನೀಡಿದ್ದಾರೆ. ಕಂಪನಿ ಮಾಲೀಕ ಆನಂದ್ ಮಹೀಂದ್ರ ಟ್ಬಿಟ್ನನಲ್ಲಿಯೇ ಕಾರು ಉಡುಗೊರೆ ಕೊಡುವುದಾಗಿ ಹೇಳಿದ್ದರು, ಅವರು ಬಯಸಿದರೆ ಅವರ ಮುಂದಿನ ಯಾತ್ರೆಯನ್ನ ನಮ್ಮ ಕಾರಿನಲ್ಲೆ ಮುಂದುವರೆಸಬಹುದು ಎಂದು ಬರೆದುಕೊಂಡಿದ್ದರು. ತೀರ್ಥಯಾತ್ರೆ ಮುಗಿಸಿ ಮೊನ್ನೆಯಷ್ಟೆ ಮೈಸೂರಿಗೆ ಬಂದಿದ್ದ ಕೃಷ್ಣಕುಮಾರ್ ಹಾಗೂ ಅವರ ತಾಯಿಯನ್ನ ಸಂಪರ್ಕಿಸಿದ ಕಂಪನಿಯ ಸಿಬ್ಬಂದಿ ಮಹೀಂದ್ರ  kuv100 ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ. 

ಕೃಷ್ಣಕುಮಾರ್ ಹಾಗೂ ಅವರ ಚೂಡಮಣಿಯವರ 2018 ಜನವರಿಯಲ್ಲಿ ಮೈಸೂರಿನಿಂದ ಪ್ರಯಾಣ ಆರಂಭಿಸಿದ್ದರು. ಅವರ ತಂದೆ ಕೊಡಿಸಿದ್ದ 20 ವರ್ಷದ ಹಳೆ ಬಜಾಜ್‌ ಸ್ಕೂಟರ್‌ನಲ್ಲಿ ಮೈಸೂರಿನ ಚಾಮುಂಡಿಬೆಟ್ಟದಿಂದ ಆರಂಭವಾದ ಈ ಯಾತ್ರೆ ಮೊದಲು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕರ್ನಾಟಕ, ಅರುಣಾಚಲ ಪ್ರದೇಶ,ಛತ್ತಿಸ್‌ಗಡ್, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಭಾರತದ 20ಕ್ಕು ಹೆಚ್ಚು ರಾಜ್ಯಗಳಲ್ಲಿ ಹಾಗೂ ನೆರೆ ರಾಷ್ಟ್ರಗಳಾದ ಮಾಯ್ಮಾರ್‌,ನೇಪಾಳ ಹಾಗೂ ಭೂತಾನ್‌ ನಲ್ಲಿ ಸಾಗಿ ಬಂದಿದೆ. ನಿತ್ಯ ಎರಡು ಹೊತ್ತು ಊಟ, ಸರಾಸರಿ ಪ್ರಯಾಣ ಮಾಡುತ್ತಿದ್ದ ಅಮ್ಮ ಮಗ, ಆಶ್ರಮ, ಮಠ,ಕುಟಿರ ಅಥವ ವೃದ್ದಾಶ್ರಮ, ಸೇವಾಶ್ರಮಗಳಲ್ಲಿನ ವಾಸ್ತವ್ಯ ಹೂಡುತ್ತಿದ್ದರು. ಇಡೀ ಯಾತ್ರೆಯಲ್ಲಿ ಯಾರ ಬಳಿಯೂ ಯಾವ ಸಹಾಯವನ್ನು ಪಡೆಯದ ಕೃಷ್ಣಕುಮಾರ್ ತಾನು ಸಂಪಾದಿಸಿ ಉಳಸಿದ್ದ 6 ಲಕ್ಷದ 80 ಸಾವಿರ ಹಣ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣಕುಮಾರ; ತಾಯಿ ಆಸೆ ಪೂರೈಸಲು ಹಳೇ ಸ್ಕೂಟರ್​​​​ನಲ್ಲೇ ತೀರ್ಥಯಾತ್ರೆ ಮಾಡಿಸಿದ ಮಗ

2 ವರ್ಷದ 9 ತಿಂಗಳ ಪ್ರಯಾಣದಲ್ಲಿ ಎಲ್ಲಿಯೂ ಆರೋಗ್ಯ ಹಾಳು ಮಾಡಿಕೊಳ್ಳದೆ ಹಿತಮಿತ ಜೀವನ ನಡೆಸಿದ್ದ ಇವರ ಮಾಹಿತಿ ಪಡೆದಿದ್ದ ಮಹೀಂದ್ರ ಕಂಪನಿ ಮಾಲೀಕ ಆನಂದ್‌ ಮಹೀಂದ್ರ ಇದೊಂದು ಅಪರೂಪದ ಕಥೆಯಾಗಿದೆ. ಈ ಕಥೆ ನಿಜಕ್ಕು ಚೆನ್ನಾಗಿದ್ದು ಇವರಿಗೆ ನಮ್ಮ ಕಂಪನಿ ಕಾರು ನೀಡುವುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಹೇಳಿದಂತೆ ಯಾತ್ರೆ ಮುಗಿಸಿದ ಕೃಷ್ಣಕುಮಾರ್ ಅವರು ಅವರ ತಾಯಿ ಚೂಡಾಮಣಿಯವರಿಗೆ ಹೊಸ ಕಾರೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ.

ಮಹೀಂದ್ರ kuv100 ಕಾರು ಸರಿಸುಮಾರು 9 ಲಕ್ಷ ವೆಚ್ಚದ್ದಾಗಿದ್ದು ಮಂಡ್ಯ ರಿಜಿಸ್ಟರ್ ಕಚೇರಿಯಲ್ಲಿ ಕೃಷ್ಣಕುಮಾರ್ ಹೆಸರಿಗೆ ರಿಜಿಸ್ಟರ್ ಆಗಿದೆ. ಮೈಸೂರಿನ ಮಹೀಂದ್ರ ಶೋರಂನಲ್ಲಿ ಕೃಷ್ಣಕುಮಾರ್ ಹಾಗೂ ಅವರು ತಾಯಿ ಚೂಡಾಮಣಿಯವರಿಗೆ ಸನ್ಮಾನವನ್ನು ಮಾಡಿರುವ ಕಂಪನಿಯ ಸಿಬ್ಬಂದಿಗಳು, ನಂತರ ಕಾರು ಹಸ್ತಾಂತರಿಸಿ ಶುಭಕೋರಿದ್ದಾರೆ.
Published by: Rajesh Duggumane
First published: September 19, 2020, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading