HOME » NEWS » State » ANAND ASNOTIKAR JUSTIFY HIS STATEMENT ON ANATH KUMAR HEGADE HEALTH ISSUE DKK SESR

Anand Asnotikar: ಸಂಸದ ಹೆಗಡೆ ಸಾಯಲಿ ಎಂಬ ಅರ್ಥದಲ್ಲಿ ಹೇಳಿಲ್ಲ; ಆನಂದ್ ಅಸ್ನೋಟಿಕರ್​

ಹೆಗಡೆ, ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿ ಅವರು ಇದ್ದರೇನು, ಹೋದರೇನು ಎಂದಿದ್ದೆ. ಹಾಗೆಂದ ಮಾತ್ರಕ್ಕೆ ಅವರು ಸಾಯಲಿ ಎಂದು ನಾನು ಬಯಸಿಲ್ಲ

news18-kannada
Updated:April 7, 2021, 9:51 PM IST
Anand Asnotikar: ಸಂಸದ ಹೆಗಡೆ ಸಾಯಲಿ ಎಂಬ ಅರ್ಥದಲ್ಲಿ ಹೇಳಿಲ್ಲ; ಆನಂದ್ ಅಸ್ನೋಟಿಕರ್​
ಅಸ್ನೋಟಿಕರ್
  • Share this:
ಕಾರವಾರ (ಏ. 7): ಅನಂತ್ ಕುಮಾರ್ ಹೆಗಡೆ ಬದುಕಿದ್ದರೇನು? ಸತ್ತರೇನು? ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಇದೀಗ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಸಾಯಲಿ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಹೆಗಡೆ ಸಾಯಲಿ ಎಂಬರ್ಥ ನನ್ನದಲ್ಲ. ಈಗಲೂ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಅಸ್ನೋಟಿಕರ್ ಹೇಳಿದ್ದಾರೆ.  ಕಳೆದ ಒಂದು ದಿನದ ಹಿಂದೆ ಮಾಜಿ ಸಚಿವ  ಆನಂದ್ ಅಸ್ನೋಟಿಕರ್, ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಅನಾರೋಗ್ಯವನ್ನ ಟೀಕಿಸಿದ್ದರು.  ಹೆಗಡೆ ಸತ್ತರೇನು ಇದ್ದರೇನು ಎಂದು ಹೇಳಿಕೆ ನೀಡಿದ್ದರು. ಕ್ಷೇತ್ರಕ್ಕೆ ನಿಷ್ಪ್ರಯೋಜಕ ಸಂಸದ ಅನಾರೋಗ್ಯ ವಾಗಿ ಇದ್ದರೂ ಒಂದೇ ಆರೋಗ್ಯವಾಗಿ ಇದ್ದರು ಒಂದೇ ಎನ್ನುವ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. 

ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರು ಬಾರಿ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್ ಹೆಗಡೆ, ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿ ಅವರು ಇದ್ದರೇನು, ಹೋದರೇನು ಎಂದಿದ್ದೆ. ಹಾಗೆಂದ ಮಾತ್ರಕ್ಕೆ ಅವರು ಸಾಯಲಿ ಎಂದು ನಾನು ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು.  ನಾನು ಮೋದಿ ಅಭಿಮಾನಿ, ಸಂಸತ್ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಾಗ ಮೋದಿ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಅನಂತಕುಮಾರ್ ಬಾಯಿಗೆ ಬಂದಂತೆ ಮಾತನಾಡಿ ಮೋದಿಯವರಿಗೆ ಮುಜುಗರ ತಂದಿದ್ದಾರೆ  ಎಂದು ಇದೇ ವೇಳೆ ಟೀಕಿಸಿದರು

ಇದನ್ನು ಓದಿ: ಅನಂತ್​ ಕುಮಾರ್​ ಹೆಗಡೆ ಆರೋಗ್ಯ ಟೀಕಿಸಿ ದ್ವೇಷ ರಾಜಕೀಯ ಇನ್ನೂ ಇದೆ ಎಂದು ತೋರಿಸಿಕೊಟ್ಟ ಅಸ್ನೋಟಿಕರ್

ಹಳೆ ಘಟನೆ ಕೆದಕಿದ ಮಾಜಿ ಸಚಿವರು

ಈ ಹಿಂದೆ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕಾರವಾರದ ಜಗದೀಶ್ ಬಿರ್ಕೋಡಿಕರ್ ಎನ್ನುವವರ ಮೇಲೂ ಅನಂತಕುಮಾರ್ ಹೆಗಡೆ ಹಲ್ಲೆ ಮಾಡಿದ್ದರು ಎಂದು ಹಳೆ ಪ್ರಸಂಗಗಳನ್ನು ಇದೇ ವೇಳೆ ಕೆದಕಿದರು.

ಅನಂತಕುಮಾರ್ ಬಗ್ಗೆ ಮಾತನಾಡಿದೆ ಎಂದು ನನ್ನ ನಡತೆ ಬಗ್ಗೆ ಬಿಜೆಪಿಯ ಕೆಲವು ಮರಿ ಪುಡಾರಿಗಳು ಮಾತನಾಡುತ್ತಾರೆ. ಈ  ಅನಂತಕುಮಾರ್ ನಮ್ಮ ಮೇಲೆ ಹಲ್ಲೆ ಮಾಡಿಲ್ಲವೆಂದು ಈ ಮೂವರು ದೇವರ ಬಳಿ ಬಂದು ಪ್ರಮಾಣ ಮಾಡಲಿ. ಆಗ ಯಾರ ನಡತೆ ಏನು ಎಂದು ಎಲ್ಲರಿಗೂ ಗೊತ್ತಾಗಲಿದೆ ಎಂದು ಸವಾಲು ಹಾಕಿದರು.  ತನ್ನ ತಾಯಿಯ ಚಿಕಿತ್ಸೆಗೆ ಒಂದೈದು ನಿಮಿಷ ತಡವಾಯಿತೆಂದು ಶಿರಸಿ ಟಿಎಸ್‌ ಎಸ್ ಆಸ್ಪತ್ರೆಯ ವೈದ್ಯರಿಗೆ ಅನಂತಕುಮಾರ್ ಹಿಗ್ಗಾಮುಗ್ಗಾ ಹೊಡೆದಿದ್ದರು. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ. ಹೀಗಿರುವಾಗ ಬಿಜೆಪಿ ಮರಿ ಪುಡಾರಿಗಳು ನನ್ನ ವಿರುದ್ದ ಮಾತನಾಡುವ ನೈತಿಕ ಹಕ್ಕು ಇಲ್ಲ. ಮೊದಲು ಬಿಜೆಪಿಯವರು ಅನಂತಕುಮಾರ ಹೆಗಡೆ ತಪ್ಪು ಕಂಡು ಹಿಡಿದು ಅವರನ್ನ ತಿದ್ದಲಿ ಎಂದರು.
Published by: Seema R
First published: April 7, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories