HOME » NEWS » State » ANAND ASNOTIKAR HATE POLITICS ON ANANTH KUMAR HEGDE DKK SESR

Anand Asnotikar: ಅನಂತ್​ ಕುಮಾರ್​ ಹೆಗಡೆ ಆರೋಗ್ಯ ಟೀಕಿಸಿ ದ್ವೇಷ ರಾಜಕೀಯ ಇನ್ನೂ ಇದೆ ಎಂದು ತೋರಿಸಿಕೊಟ್ಟ ಅಸ್ನೋಟಿಕರ್

ಸಂಸದ ಹೆಗಡೆ ಅನಾರೋಗ್ಯವನ್ನು ಟೀಕಿಸಿದ ಅಸ್ನೋಟಿಕರ್​​, ಅವರ ಇದ್ದರೆಷ್ಟು ಹೋದರೆಷ್ಟು ಎಂದು ಹೇಳುವ‌ ಮೂಲಕ ಇಬ್ಬರ ನಡುವೆ ದ್ವೇಷ ಇನ್ನೂ ಇದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.

news18-kannada
Updated:April 5, 2021, 7:01 PM IST
Anand Asnotikar: ಅನಂತ್​ ಕುಮಾರ್​ ಹೆಗಡೆ ಆರೋಗ್ಯ ಟೀಕಿಸಿ ದ್ವೇಷ ರಾಜಕೀಯ ಇನ್ನೂ ಇದೆ ಎಂದು ತೋರಿಸಿಕೊಟ್ಟ ಅಸ್ನೋಟಿಕರ್
ಅಸ್ನೋಟಿಕರ್
  • Share this:
ಕಾರವಾರ (ಏ. 5): ಸಂಸದ  ಅನಂತಕುಮಾರ ಹೆಗಡೆ ಸತ್ರೇನು, ಬದುಕಿದ್ರೇನು... ಏನೂ ಲೆಕ್ಕಕ್ಕಿಲ್ಲ. ಹೇಗೋ ಅವನು ಐದು ವರ್ಷ ನಮ್ಮ ದೃಷ್ಟಿಯಲ್ಲೇ ಇರಲ್ಲ. ಹೀಗಾಗಿ ಅವನ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವನಿಗೆ ಅನಾರೋಗ್ಯ ಆಗಿದಕ್ಕೆ ನನ್ನ ಒಂದಿಷ್ಟು ಸ್ನೇಹಿತರು ಬಂದು ನನಗೆ ಬಿಜೆಪಿ ಹೋಗಿ ಎಂ.ಪಿ ಸೀಟ್ ಗೆ ಪ್ರಯತ್ನ ಮಾಡಿ ಎಂದರು. ನಾನು ಕೂಡಾ ಮನಸ್ಸು ಮಾಡಿದ್ದೆ ಆದರೆ, ಈಗ ಹೆಗಡೆ ಗಟ್ಟಿ ಆಗಿಬಿಟ್ಟಿದ್ದಾನೆ ಎಂದು ಸಂಸದ ಅನಂತಕುಮಾರ ಹೆಗಡೆಯವರ ಕುರಿತು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ.  ಮಾಧ್ಯಮದೆದುರು ಮಾತನಾಡಿರುವ ಅವರು, ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಅಂದು ಹಿಂದುತ್ವದ ಅಲೆ ಇದ್ದಿದ್ದರಿಂದ ಗೆಲುವು ಕಷ್ಟವಾಯಿತು. ಇದೀಗ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿ‌ ಇರಲಿಲ್ಲ. ಶಸ್ತ್ರಚಿಕಿತ್ಸೆ ಆಗಿದೆ. ಗಂಭೀರ ಇದ್ದಾರೆ. ಮುಂದಿನ ರಾಜಕೀಯ ಜೀವನ ಕಷ್ಟ ಇದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಗೆ ಪ್ರಯತ್ನಿಸಿ ಎಂದು ಕೆಲವರು ನನಗೆ ಸಲಹೆ ನೀಡಿದ್ದರು. ಆದರೆ  ಅವರು ಗಟ್ಟಿಯೇ ಇದ್ದಾರೆ. ಹಾಗಾಗಿ ಈ ಸಲಹೆ ಕಷ್ಟ ಎಂದು  ಹೆಗಡೆ ಅನಾರೋಗ್ಯವನ್ನು ಟೀಕಿಸಿದರು.

ಹೇಗೂ ಆತ ಐದು ವರ್ಷ ಜನರಿಗೆ ಮುಖ ಕಾಣಿಸಲ್ಲ. ಬೋನ್ ಕ್ಯಾನ್ಸರ್ ಆಗಿದೆ ಎಂದು‌ ಕೆಲವರು ಹೇಳುತ್ತಿದ್ದರು. ಎಲ್ಲಾದರೂ ಹಿಂದು- ಮುಸ್ಲಿಂ ಗಲಾಟೆ ಆಗಬೇಕು. ಯಾರಾದರೂ ಹಿಂದು ಸಾಯ್ಬೇಕು. ಯಾರಾದರೂ ಮೀನುಗಾರ ಯುವಕ ಸಾಯ್ಬೇಕು, ಅಂಥ ಪ್ರಸಂಗದಲ್ಲಿ ಮಾತ್ರ ಅವನನ್ನು ಕಾಣಬಹುದು‌. ಹಾಗಾಗಿ ಅವನು ಸತ್ರೇನು, ಬದುಕಿದ್ರೇನು?  ಅವನ ಆರೋಗ್ಯ ಹೇಗಿದ್ಯೋ ಏನೋ, ನನಗ್ಯಾಕೆ ಬೇಕು? ಜನ ಹೇಳಿದ್ದನ್ನು ಹೇಳಿದ್ದೀನಿ ಎಂದು ಏಕವಚನದಲ್ಲೇ ಹೆಗಡೆ ವಿರುದ್ಧ ಹರಿಹಾಯ್ದರು

ಸಂಸದ ಹೆಗಡೆ ರಾಜಕೀಯ ಸನ್ಯಾಸತ್ವ ಕೇವಲ ಸಿಂಪತಿ ಕ್ರಿಯೇಟ್ ಮಾಡಲು

ಸಂಸದ ಹೆಗಡೆ ಅವರ ರಾಜಕೀಯ ನಿವೃತ್ತಿ ಹೇಳಿಕೆ ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕಾಗಿ ನೀಡಲಾಗಿದೆ. ಅವರ ನಿವೃತ್ತಿ ಸಾಧ್ಯವೇ ಇಲ್ಲ‌. ಮುಂದೆಯೂ ಅವರೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜನರ ಬೆಂಬಲ ಇದ್ದರೆ ಪುನಃ ಗೆಲ್ಲುತ್ತಾರೆ. ಇಲ್ಲ ಎಂದರೆ ಚುನಾವಣೆ ಸಮಯದಲ್ಲಿ ಎಲ್ಲಾದ್ರು ಹಿಂದು ಹುಡುಗ ಅನುಮಾನವಾಗಿ ಸತ್ತರೆ ಅದಕ್ಕೆ ಬಣ್ಣ ಕಟ್ಟಿ ಕೋಮು ಗಲಭೆ ಎಬ್ಬಿಸಿ ಮತ್ತೆನಾದರೂ ಹವಾ ಸೃಷ್ಟಿ ಮಾಡುತ್ತಾರೆ ಎಂದರು.

ಇದನ್ನು ಓದಿ: ರಮೇಶ್​ ಜಾರಕಿಹೊಳಿ ಗೋಕಾಕ್​ ಐಸಿಯುನಲ್ಲಿಲ್ಲ; ಸಂತ್ರಸ್ತೆ ಪರ ವಕೀಲ ಜಗದೀಶ್​ ಆರೋಪ

ಅವರು ಚುನಾವಣೆಗೆ ನಿಲ್ಲುವ ಮೊದಲು ಅಂಥದ್ದೇನಾದರೂ ಗೆಲ್ಲುವ ಸನ್ನಿವೇಶ ಬರುತ್ತದೆ. ಮೋದಿ ಅಥವಾ ಇನ್ಯಾವುದಾದರೂ ಅನುಕಂಪದ ಅಲೆ ಇರುತ್ತದೆ. ಮೊದಲ ಚುನಾವಣೆಗೆ ಸ್ಪರ್ಧಿಸಿದಾಗಲೂ ಚಿತ್ತರಂಜನ್ ಅವರ ಹತ್ಯೆ ಆಯಿತು. ಅದರ ನಂತರ ಇನ್ನೊಂದು, ಮತ್ತೊಂದು ಅಲೆ ಬಂತು. ಯಾವತ್ತೂ ಒಳ್ಳೆಯ ಸಮಯವೇ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು

ಕರಾವಳಿಯಲ್ಲಿ ಹಿಂದುತ್ವ ನಡೆಯುತ್ತದೆ. ಹಿಂದುತ್ವದ ಶಕ್ತಿ ಬಹಳ ದೊಡ್ಡದಿದೆ. ಇದನ್ನ ನಾನೂ ಒಪ್ಪಿದ್ದೇನೆ. ಇಂದು ಕೋಮಿನಲ್ಲೇ ರಾಜಕೀಯ ನಡೆಯುವುದು. ಇಲ್ಲಿ ಬಾಕಿ ಅಭಿವೃದ್ಧಿಗಳ ಬಗ್ಗೆ ಮಾತೇ ಇಲ್ಲ‌ ಎಂದರು.ಹಿಂದಿನಿಂದಲೂ ದ್ವೇಷ

ಆನಂದ್ ಮತ್ತು ಸಂಸದ ಹೆಗಡೆ ನಡುವೆ ಕೇವಲ ರಾಜಕೀಯದಲ್ಲಿ ಮಾತ್ರ ವೈಷಮ್ಯ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ನೇರವಾಗಿ ಸಂಸದ ಹೆಗಡೆ ಅನಾರೋಗ್ಯವನ್ನು ಟೀಕಿಸಿದ ಅಸ್ನೋಟಿಕರ್​​, ಅವರ ಇದ್ದರೆಷ್ಟು ಹೋದರೆಷ್ಟು ಎಂದು ಹೇಳುವ‌ ಮೂಲಕ ಇಬ್ಬರ ನಡುವೆ ದ್ವೇಷ ಇನ್ನೂ ಇದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.
Published by: Seema R
First published: April 5, 2021, 6:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories