Anand Asnotikar: ಆನಂದ್​ ಅಸ್ನೋಟಿಕರ್​ ಬ್ಯಾಗ್​ನಲ್ಲಿ ಪಿಸ್ತೂ​ಲ್​; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ವಶಕ್ಕೆ

ಆನಂದ್ ಅಸ್ನೋಟಿಕರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ-ಕಾರವಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ವಿರುದ್ಧ ಆನಂದ್ ಸೋತಿದ್ದರು.

ಆನಂದ್ ಅಸ್ನೋಟಿಕರ್

ಆನಂದ್ ಅಸ್ನೋಟಿಕರ್

  • Share this:
    ಬೆಂಗಳೂರು (ಸೆಪ್ಟೆಂಬರ್ 19):  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್​ ಪರಿಶೀಲನೆ ಮಾಡುವ ವೇಳೆ ಮಾಜಿ ಸಚಿವ ಆನಂದ್​ ಅಸ್ನೋಟಿಕರ್​ ಬ್ಯಾಗ್​ನಲ್ಲಿ ಪಿಸ್ತೂಲ್​ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಆನಂದ್ ಅಸ್ನೋಟಿಕರ್​ ಗೋವಾಗೆ ತೆರಳುವವರಿದ್ದರು. 11 ಗಂಟೆಗೆ ವಿಮಾನ ಏರಬೇಕಿತ್ತು. ಆದರೆ ಸಾಮಾನ್ಯ ಭದ್ರತಾ ತಪಾಸಣೆ ವೇಳೆ ಅವರ ಲಗೇಜ್​ನಲ್ಲಿ ಪಿಸ್ತೂಲ್​ ಸಿಕ್ಕಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

    ವಿಮಾನದ ಒಳಗೆ ಗನ್​ಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಮೊದಲು ಆ ಬಗ್ಗೆ ಮೊದಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಸೂಕ್ತ ಕಾರಣ ನೀಡಿ ಒಪ್ಪಿಗೆ ಪಡೆಯಬೇಕು. ಆದರೆ, ಆನಂದ್​ ಅಸ್ನೋಟಿಕರ್​ ಆ ರೀತಿ ಮಾಡಿರಲಿಲ್ಲ ಎನ್ನಲಾಗಿದೆ. ಇನ್ನು, ಅವರು ತೆಗೆದುಕೊಂಡು ಹೋಗುತ್ತಿರುವ ಪಿಸ್ತೂಲ್​ಗೆ ಪರವಾನಗಿ ಇದ್ದು, ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.



    ಆನಂದ್​ ಅಸ್ನೋಟಿಕರ್​ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ-ಕಾರವಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್​  ವಿರುದ್ಧ ಆನಂದ್ ಸೋತಿದ್ದರು.
    Published by:Rajesh Duggumane
    First published: