Poshan Abhiyaanaದ ಸೀರೆ ರಿಜೆಕ್ಟ್ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು; 9 ಕೋಟಿಗೂ ಅಧಿಕ ಮೌಲ್ಯದ 2.56 ಲಕ್ಷ ಸೀರೆಗಳು

ಸೌಂದರ್ಯಕ್ಕೆ ಪೂರಕವಾದ ಸೀರೆಗಳನ್ನು ನೀಡಿದ್ರೆ ಮಾತ್ರ ಧರಿಸುತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಕೋಟ್ಯಂತರ ಮೌಲ್ಯದ ಸೀರೆಗಳು ಗೋದಾಮಿನಲ್ಲಿಯೇ ಉಳಿದಿವೆ.

ಪೋಷಣ್ ಅಭಿಯಾನದಡಿ ವಿತರಿಸಿರುವ ಸೀರೆ

ಪೋಷಣ್ ಅಭಿಯಾನದಡಿ ವಿತರಿಸಿರುವ ಸೀರೆ

  • Share this:
ಕೇಂದ್ರ ಸರ್ಕಾರ ಪೋಷಣ್ ಅಭಿಯಾನದಡಿ (Poshan Campaign - National Nutrition Mission) ವಿತರಿಸಲು ಮುಂದಾಗಿರುವ ಸೀರೆ (Saree) ಅಂಗನವಾಡಿ ಕಾರ್ಯಕರ್ತೆಯರಿಂದ (Anganwadi Workers) ತಿರಸ್ಕೃತಗೊಂಡಿದೆ. ಸೀರೆ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕಿದ್ದು, ಸುಮಾರು 2 ಲಕ್ಷಕ್ಕೂ ಸೀರೆಗಳು ಗೋದಾಮಿನಲ್ಲಿ ಇಲಿ, ಹೆಗ್ಗಣಗಳಿಗೆ ಆಹಾರವಾಗುತ್ತಿದೆ. ಗರ್ಭಧಾರಣೆಯಿಂದ ಆರಂಭಿಸಿ ಶಿಶು (Baby) ಮತ್ತು ತಾಯಿಗೆ (Mother) ಒಂದು ಸಾವಿರ ದಿನ ಪೌಷ್ಠಿಕ ಆಹಾರ (Nutritional food) ನೀಡುವ ಉದ್ದೇಶವನ್ನು ಪೋಷಣ್ ಅಭಿಯಾನ ಹೊಂದಿದೆ. ಈ ಅಭಿಯಾನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ಎರಡು ಸೀರೆ ವಿತರಿಸಲು ಸರ್ಕಾರ ಟೆಂಡರ್ ಸಹ ಆಹ್ವಾನಿಸಿದೆ. ಆದರೆ ಇದೀಗ ಈ ಸೀರೆಗಳನ್ನು ಪಡೆಯಲು ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿದ್ದಾರೆ.

ಸೀರೆಯ ಬಣ್ಣ, ಗುಣಮಟ್ಟ, ವಿನ್ಯಾಸ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ಸೀರೆ ಬೆಲೆ 385.75 ರೂ. ನಿಗಧಿ ಮಾಡಿ ಇಲಾಖೆಗೆ ಸೀರೆಗಳನ್ನು ಪೂರೈಕೆ ಸಹ ಮಾಡಲಾಗಿದೆ.

ಪೋಷಣ್ ಅಭಿಯಾನದಡಿ ಬಂದಿರುವ ಸೀರೆಗಳನ್ನು  ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಂದಿಲ್ಲ. ರಾಜ್ಯದ ಎಲ್ಲ ಕಡೆಯೂ ಇದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಪೋಷಣ್ ಅಭಿಯಾನದಡಿ ಬಂದಿರುವ ಸೀರೆಗಳು ಸಿಡಿಪಿ ಕಚೇರಿಯಲ್ಲಿ ಉಳಿದಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತ ಸಿಇಒ ಡಾ.ಕುಮಾರ್ ಹೇಳಿದ್ದಾರೆ.

Anaganwadi workers reject Poshan Abhiyaan Sari mrq
ಪೋಷಣ್ ಅಭಿಯಾನದಡಿ ವಿತರಿಸಿರುವ ಸೀರೆ


ಸೀರೆ ರಿಜೆಕ್ಟ್ ಆಗಿದ್ದೇಕೆ?

ಈ ಸೀರೆಗಳ ಬಾರ್ಡರ್ ನಲ್ಲಿ ಪೋಷಣ್ ಅಭಿಯಾನ ಎಂದು ದೊಡ್ಡದಾಗಿ ಬರೆಯಲಾಗಿದೆ. ಇದರ ಜೊತೆಗೆ ಸೀರೆಯಲ್ಲಿ ಬಣ್ಣ ಬಣ್ಣದ ಬಳ್ಳಿಯ ರೂಪದಲ್ಲಿ ಡಿಸೈನ್ ಸಹ ಮಾಡಲಾಗಿದೆ. ಹಾಗಾಗಿ ಸೀರೆಗಳು ನೋಡಲು ಬ್ಯಾನರ್ ಗಳ ರೀತಿಯಲ್ಲಿ ಕಾಣಿಸುತ್ತಿವೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌಂದರ್ಯಕ್ಕೆ ಪೂರಕವಾದ ಸೀರೆಗಳನ್ನು ನೀಡಿದ್ರೆ ಮಾತ್ರ ಧರಿಸುತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಕೋಟ್ಯಂತರ ಮೌಲ್ಯದ ಸೀರೆಗಳು ಗೋದಾಮಿನಲ್ಲಿಯೇ ಉಳಿದಿವೆ.

Anaganwadi workers reject Poshan Abhiyaan Sari mrq
ಪೋಷಣ್ ಅಭಿಯಾನದಡಿ ವಿತರಿಸಿರುವ ಸೀರೆ


9.91 ಕೋಟಿ ಮೌಲ್ಯದ ಸೀರೆಗಳು

ರಾಜ್ಯದ 204 ವಲಯಗಳಲ್ಲಿ 62,580 ಅಂಗನವಾಡಿ ಕೇಂದ್ರಗಳಿದ್ದು , ಇಲ್ಲಿನ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ  ತಲಾ ಎರಡರಂತೆ ಹಾಗೂ 3,331  ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಇರುವ ಕಾರ್ಯಕರ್ತೆಯರಿಗೂ ತಲಾ ಎರಡರಂತೆ 2,56,982 ಸೀರೆ ಸರಬರಾಜು ಮಾಡಲಾಗಿದೆ. ಇದಕ್ಕಾಗಿ 9.91 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಪಾವತಿಯಾಗದ ಬಿಲ್

ರಾಜ್ಯದ 204 ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಗೆ ಏಳು ತಿಂಗಳ ಹಿಂದೆಯೇ ಸೀರೆಗಳು ತಲುಪಿವೆ. ಆದ್ರೆ ಬಹುತೇಕ ಕಡೆ ಸೀರೆಗಳನ್ನು ಸ್ವೀಕರಿಸದ ಹಿನ್ನೆಲೆ ಬಿಲ್ ಸಹ ಪಾವತಿ ಆಗಿಲ್ಲ.

'ಸಂಸಾರ ಕಲಹ’ದಲ್ಲಿ ಕರುನಾಡೇ ಫಸ್ಟ್

. ಸಂಗಾತಿಗೆ ಹಿಂಸೆ (Spousal Violence) ನೀಡುವ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚು ವರದಿಯಾಗಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಸಮೀಕ್ಷೆಯ ವರದಿ ಪ್ರಕಾರ, ಶೇ.48ರಷ್ಟು ಮಹಿಳೆಯರು ತಮ್ಮ ಸಂಗಾತಿಯಿಂದ ಹಿಂಸೆಗೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಮಹಿಳೆಯರು (Women) ದೈಹಿಕ, ಲೈಂಗಿಕ ಮತ್ತು ಭಾವನಾತ್ಮವಾಗಿ ಕಿರುಕುಳ ಅನುಭವಿಸಿರುವ ಬಗ್ಗೆ ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.

Anaganwadi workers reject Poshan Abhiyaan Sari mrq
ಪೋಷಣ್ ಅಭಿಯಾನದಡಿ ವಿತರಿಸಿರುವ ಸೀರೆ


ಕರ್ನಾಟಕದ ನಂತರ ಬಿಹಾರ ಎರಡನೇ ಸ್ಥಾನದಲ್ಲಿದೆ. ಬಿಹಾರದಲ್ಲಿ (Bihar) ಶೇ.43ರಷ್ಟು ಮಹಿಳೆಯರು ಸಂಗಾತಿಯಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಇನ್ನು ಲಕ್ಷದ್ವೀಪದಲ್ಲಿ (Lakshadweepa) ಅತಿ ಕಡಿಮೆ ವೈವಾಹಿಕ ಹಿಂಸಾಚಾರಗಳು ವರದಿಯಾಗಿದೆ.
Published by:Mahmadrafik K
First published: