ಮಂಡ್ಯ (ಡಿ.11): ಸಕ್ಕರೆ ನಾಡಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ (Assembly Election) ಭರ್ಜರಿ ತಯಾರಿ ನಡೆದಿದ್ದು, ಕೇಸರಿ ಕಹಳೆ ಮೊಳಗಿದೆ. ಹಳೆ ಮೈಸೂರು (Old Mysuru) ಭಾಗವನ್ನ ಟಾರ್ಗೆಟ್ ಮಾಡಿರೋ ಬಿಜೆಪಿ, ಮದ್ದೂರಿನ ಜನಾಭಿನಂದನ ಕಾರ್ಯಕ್ರಮಕ್ಕೆ ಆಯೋಜನೆ ಮಾಡಿದ್ರು. ಕಾರ್ಯಕ್ರಮಕ್ಕೆ ಸಚಿವ ಅಶ್ವತ್ಥ ನಾರಾಯಣ (Ashwath Narayana) ಆಗಮಿಸಿದ್ರು. ಈ ವೇಳೆ ಬಿಜೆಪಿ ಕಾರ್ಯಕರ್ತರು (BJP Activist) ಪಟಾಕಿ ಸಿಡಿಸಿ ಬೃಹದಾಕಾರದ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ತೆರೆದ ವಾಹನದಲ್ಲಿ ಸಚಿವರ ಮೆರವಣಿಗೆ ಮಾಡಿದ್ರು. ಈ ವೇಳೆ ಮಾತಾಡಿದ ಸಚಿವ ಅಶ್ವತ್ಥ ನಾರಾಯಣ, ಅಂಬೇಡ್ಕರ್ ತೀರಿಕೊಂಡಾಗ ಕಾಂಗ್ರೆಸ್ ಪಕ್ಷ (Congess Party) ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎಂದು ಆರೋಪ ಮಾಡಿದೆ. ಇನ್ನು ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಕೂಡ ಮಾತಾಡಿದ್ದಾರೆ.
ಸಮಾಧಿ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿಲ್ಲ
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಾತಾಡಿದ ಸಚಿವ ಅಶ್ವತ್ಥ್ ನಾರಾಯಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪರವಾಗಿ ಬಿಜೆಪಿ ಕೆಲಸ ಮಾಡಿದೆ. ಅಂಬೇಡ್ಕರ್ ಪರವಾಗಿದ್ದು ಬಿಜೆಪಿ ಪಕ್ಷ, ಅವರನ್ನ ರಾಜ್ಯಸಭಾ ಮೆಂಬರ್ ಮಾಡಿದ್ದು ನಮ್ಮ ಭಾರತೀಯ ಜನತಾ ಪಕ್ಷ ಎಂದ್ರು. ಇನ್ನು ಅಂಬೇಡ್ಕರ್ ತೀರಿಕೊಂಡಾಗ ಅವರಿಗೆ ಸಮಾಧಿ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಡಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಯಾಕೆ ನಿಮ್ಮ ಪಕ್ಷ ಅಂಬೇಡ್ಕರ್ ಅವರ ಸಮಾಧಿ ಮಾಡಲು ಅವಕಾಶ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರನ್ನ ಮಾಧ್ಯಮದವ್ರು ಪ್ರಶ್ನೆ ಮಾಡಬೇಕಿದೆ. ಸಿದ್ದರಾಮಯ್ಯ ಅವರಿಗೆ ಧೈರ್ಯ, ಸ್ಥೈರ್ಯ ಇದ್ದರೆ ಈ ಪ್ರಶ್ನೆಗೆ ಉತ್ತರಿಸಲಿ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಸುಮಲತಾ ಅವರಿಗೆ ಪಕ್ಷದಿಂದ ಮುಕ್ತ ಆಹ್ವಾನ
ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಮಾತಾಡಿದ ಸಚಿವ ಅಶ್ವತ್ಥ್ ನಾರಾಯಣ, ಸುಮಲತಾ ಅವರಿಗೆ ಒಳ್ಳೆಯ ಹೆಸರಿದೆ. ಹೀಗಾಗಿ ಅವರನ್ನ ಪಕ್ಷಕ್ಕೆ ಮುಕ್ತವಾಗಿ ಆಹ್ವಾನಿಸಿದ್ದೇವೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಒಳ್ಳೆಯದು, ಹೀಗಾಗಿ ಅವರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡಲಿದ್ದಾರೆ. ಸುಮಲತಾ ಸ್ವತಂತ್ರವಾಗಿ ಆಯ್ಕೆ ಆಗಿದ್ದಾರೆ. ಪಕ್ಷಕ್ಕೆ ಬರಲು ಅವರಿಗೆ ಕಾನೂನಿನ ನಿಬಂಧನೆಗಳಿರುತ್ತವೆ. ಅವರ ಇಚ್ಚೆ, ಅವರ ಆಸಕ್ತಿ ಏನಿದೆಯೋ ಕಾದು ನೋಡೋಣ. ಪಕ್ಷಕ್ಕೆ ಸೇರಿದ ಬಳಿಕ ಸುಮಲತಾಎಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ಬಗ್ಗೆ ಯೋಚಿಸೋಣ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಅಶ್ವತ್ಥ ನಾರಾಯಣಗೆ ಜಯವಾಗಲಿ
ಮಂಡ್ಯದಲ್ಲಿ ಸಚಿವ ಅಶ್ವತ್ಥ ನಾರಾಯಣ ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಗಾದಿಗೆ ತಾನು ಕೂಡ ಆಕಾಂಕ್ಷಿ ಎಂದು ಸಚಿವರು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಸಚಿವರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಎಂದು ಕೂಗಿದ್ರು. ಸಚಿವರನ್ನ ಸ್ವಾಗತಿಸಿ ಮುಂದಿನ ಮುಖ್ಯಮಂತ್ರಿ ಅಶ್ವತ್ಥ ನಾರಯಣಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: Srirangapatna | Jamia Masjid: ಹಸಿರು ಬಾವುಟ ಕಿತ್ತ ಪ್ರಕರಣ; ಮುಸ್ಲಿಮರ ಪರವಾಗಿ ಪೊಲೀಸರ ಬೆದರಿಕೆ ಆರೋಪ, ಎಫ್ಐಆರ್ ದಾಖಲು
ಹಳ್ಳಿಹಕ್ಕಿ ವಿಶ್ವನಾಥ್ ನಮ್ಮ ಪಕ್ಷದ ನಾಯಕರು
ಹಳ್ಳಿಹಕ್ಕಿ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಭೇಟಿ ಬಗ್ಗೆಯೂ ಮಾತಾಡಿದ ಸಚಿವರು, ಸಿದ್ದರಾಮಯ್ಯ, ವಿಶ್ವನಾಥ್ ಅವರ ನಡುವೆ ವ್ಯತ್ಯಾಸವಿದೆ ಎಂದ್ರು. ಸಿದ್ದರಾಮಯ್ಯ, ವಿಶ್ವನಾಥ್ ಅವರ ವೈಯಕ್ತಿಕ ಸಂಬಂಧಗಳು ಏನು ಅಂತ ಗೊತ್ತಿಲ್ಲ. ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ. ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಹೋಗಿದ್ರು. ಈಗ ಬಿಜೆಪಿಗೆ ಆಗಮಿಸಿದ್ರು. ಈಗ ನಮ್ಮ ನಾಯಕರಾಗಿ ನಮ್ಮ ಪಕ್ಷದಲ್ಲಿದ್ದಾರೆ. ಅದಕ್ಕೆ ಹೆಚ್ಚಿನ ರಾಜಕೀಯ ಬಣ್ಣ ಕೊಡೋದು ಬೇಡ. ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ಈಗ ಅವರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮ ಪಕ್ಷದ ಸಿದ್ದಾಂತಕ್ಕೆ ಸಂಪೂರ್ಣ ಬದ್ಧರಾಗಿರ್ತಾರೆ ಎಂದು ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ