ದಾವಣಗೆರೆ: ಅದು ಆಗ ತಾನೆ ಅಮ್ಮನ (Mother) ಹೊಟ್ಟೆಯಿಂದ ಭೂಮಿಗೆ ಬಂದ ಹಸುಗೂಸು (New Born Baby). ಇನ್ನೇನು ಕಣ್ಣು ಬಿಟ್ಟು ಅಮ್ಮನನ್ನು ನೋಡಬೇಕು, ಅಮ್ಮನ ಮೂಲಕ ಜಗತ್ತನ್ನು (World) ನೋಡಬೇಕು ಅಂದುಕೊಂಡಿತ್ತು. ಆದರೆ ಅಮ್ಮನನ್ನು ನೋಡುವ ಮುನ್ನ, ಅಮ್ಮನ ಸ್ಪರ್ಶ (Touch) ಸುಖ ಅನುಭವಿಸಿ, ಆಕೆಯ ಎದೆ ಹಾಲು (Breast milk) ಕುಡಿದು, ಆಕೆ ಮಡಿಲಲ್ಲಿ ಮಲಗುವ ಮುನ್ನ ಇನ್ಯಾರದ್ದೋ ಕೈ ಸೇರಿ ಬಿಟ್ಟಿತ್ತು. ಯಾಕೆಂದ್ರೆ ಆ ಪುಟ್ಟ ಕಂದಮ್ಮ ಅದಾಗಲೇ ಮಾರಾಟವಾಗಿತ್ತು (Sale). ಅದನ್ನು ಮಾರಿದ್ದ ಬೇರೆ ಯಾರೋ ಪಾಪಿಗಳಲ್ಲ, ಆ ಮಗುವಿನ ಸ್ವಂತ ಅಜ್ಜ (Grand Father). 60 ಸಾವಿರಕ್ಕೆ ಆ ತನ್ನ ಮೊಮ್ಮಗುವನ್ನು ಆ ಪಾಪಿ ಅಜ್ಜ ಮಾರಾಟ ಮಾಡಿದ್ದ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ? ಇಲ್ಲಿ ಮೊಮ್ಮಗು ಮಾರಾಟ ಮಾಡಿದ ಅಜ್ಜ ಯಾರು? ಈ ರೀತಿ ಕ್ರೂರ ನಿರ್ಧಾರ ಕೈಗೊಳ್ಳೋಕೆ ಕಾರಣವೇನು? ಮಗು ಕಳೆದುಕೊಂಡ ತಾಯಿ ಸ್ಥಿತಿ ಏನಾಯ್ತು? ಕೊನೆಗೆ ಆ ಪುಟ್ಟ ಕಂದಮ್ಮ ಮರಳಿ ಅಮ್ಮನ ಮಡಿಲು ಸೇರಿತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…
ಹಸುಗೂಸನ್ನು ಮಾರಾಟ ಮಾಡಿದ ಅಜ್ಜ
ದಾವಣಗೆರೆ ಶಾಮನೂರು ಬಡಾವಣೆಯಲ್ಲಿ ತಮ್ಮ ಮಗಳ ಮಗು ಅಂದರೆ ಮೊಮ್ಮಗುವನ್ನು ಅಜ್ಜನೊಬ್ಬ ಮಾರಾಟ ಮಾಡಿದ್ದಾನೆ. ಬಸಣ್ಣ ಎಂಬ ವೃದ್ಧ ಆಗತಾನೇ ಜನಿಸಿದ ನವಜಾತ ಶಿಶುವನ್ನು 60 ಸಾವಿರಕ್ಕೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಗು ಕಾಣೆಯಾಗಿ 24 ಗಂಟೆಯಲ್ಲೇ ಪೊಲೀಸರು ಆ ಮಗುವನ್ನು ಮರಳಿ ತಾಯಿ ಮಡಿಲು ಸೇರಿಸಿದ್ದಾರೆ.
ಬುದ್ಧಿಮಾಂಧ್ಯ ಮಗಳಿಗೆ ಜನಿಸಿದ ಮಗು
ಬಸಪ್ಪನ ಮಗಳು ಬುದ್ಧಿಮಾಂಧ್ಯಳಾಗಿದ್ದಳು. ಹೀಗಾಗಿ ಮಗು ಹುಟ್ಟಿದರೆ ಅದನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ ಅಂತ ಬಸಪ್ಪ ತಿಳಿದಿದ್ದ. ಇದೇ ಕಾರಣಕ್ಕೆ ಆಗ ತಾನೇ ಹುಟ್ಟಿದ ಮಗುವನ್ನು ಮಾರಾಟ ಮಾಡಿದ್ದಾನೆ.
ಇದನ್ನೂ ಓದಿ: Hubballi: ಆಯತಪ್ಪಿ ಬೀಳ್ತಿದ್ದವನ ರಕ್ಷಿಸೋಕೆ ಹೋದವನೇ ಸತ್ತು ಹೋದ! ಇದು ಕೊಲೆಯೋ? ಆಕಸ್ಮಿಕವೋ?
60 ಸಾವಿರಕ್ಕೆ ಸೇಲ್ ಆಯ್ತು ನವಜಾತ ಶಿಶು
ಬಸಪ್ಪ ಮನೆಯಲ್ಲಿ ಬಡತನವಿದ್ದರೂ ಕುಡಿತದ ಚಟ ಅಂಟಿಸಿಕೊಂಡಿದ್ದ. ಇದಕ್ಕಾಗೇ ಹಲವು ಕಡೆ ಸಾಲ ಮಾಡಿದ್ದ. ಈ ಸಾಲ ತೀರಿಸಲು ಮಗುವನ್ನು ಮಾರಾಟ ಮಾಡೋದಕ್ಕೆ ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಹಡಗಲಿ ಸೇರಿತ್ತು ನವಜಾತ ಶಿಶು
ಹಡಗಲಿ ಮೂಲದ ಹಾಲೆಶಪ್ಪ ಎಂಬುವರು ಮಗುವನ್ನು ಖರೀದಿಸಿದ್ದರು. ಇವರಿಗೆ ಹಲವು ವರ್ಷ ಕಳೆದ್ರು ಮಕ್ಕಳಿರಲಿಲ್ಲ. ಹೀಗಾಗಿ ಮಕ್ಕಳನ್ನು ಸಾಕಬೇಕು ಅಂತ ಪರುಶರಾಮ್ ಎಂಬುವರನ್ನು ಸಂಪರ್ಕಿಸಿದ್ದಾರೆ. ಈತ ಬಸಪ್ಪನಿಗೆ ಪರಿಚಯ ಮಾಡಿಸಿ ವ್ಯವಹಾರ ಮಾಡಿದ್ದಾನೆ. 60 ಸಾವಿರ ಪಡೆದು ಮೊಮ್ಮಗುವನ್ನು ಅವರಿಗೆ ಕೊಟ್ಟಿದ್ದಾನೆ.
ಮಗು ಸತ್ತಿದೆ ಅಂತ ಮಗಳಿಗೆ ಸುಳ್ಳು ಹೇಳಿದ್ದ ಪಾಪಿ
ಇತ್ತ ಮಗುವನ್ನು ಕಾಣದೇ ಬಸಪ್ಪನ ಮಗಳು ಕಂಗಾಲಾಗಿದ್ದಾಳೆ. ಆಗ ಮಗುವನ್ನು ಕಳೆದುಕೊಂಡ ತಾಯಿಗೆ ಮಗು ಸಾವನ್ನಪ್ಪಿದೆ ಎಂದು ಬಸಪ್ಪ ಕಥೆ ಹೇಳಿದ್ದಾನೆ. ಮಗುವಿನ ತಾಯಿ ಗೋಳಾಡುತ್ತ, ಕಣ್ಣೀರಿಟ್ಟಿದ್ದಾಳೆ.
ಮನೆಯವರಿಂದ ಪೊಲೀಸರಿಗೆ ದೂರು‘
ಮನೆಯವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗ ಕಾರ್ಯಪ್ರವೃತ್ತರಾದ ಮಹಿಳಾ ಠಾಣೆ ಸಿಬ್ಬಂದಿ ಬಸಪ್ಪನನ್ನು ವಶಕ್ಕೆ ಪಡೆದು ವಿಚಾರಸಿದ್ದಾರೆ. ಆಗ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದಾನೆ. ಆತ ಕೊಟ್ಟ ಮಾಹಿತಿಯಿಂದ ಮಗು ಇರುವ ಮನೆಯನ್ನ ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: Love Breakup: ಪ್ರೀತ್ಸೇ ಅಂದವನು ಪ್ರಾಣ ತೆಗೆಯೋಕೆ ಬಂದ! ಪಾಗಲ್ ಪ್ರೇಮಿ ಗತಿ ಏನಾಯ್ತು ಗೊತ್ತಾ?
ದುಡ್ಡಿನ ದುರಾಸೆಗೆ ಬಿದ್ದು ಮಗು ಮಾರಾಟ ಮಾಡಿದ ಮಗುವಿನ ಅಜ್ಜ ಸೇರಿದಂತೆ ಎಲ್ಲಾ ಅರೋಪಿಗಳನ್ನು ದಾವಣಗೆರೆ ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಪುಟ್ಟ ಕಂದಮ್ಮ ಮರಳಿ ತಾಯಿ ಮಡಿಲು ಸೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ