HOME » NEWS » State » AN INNOVATIVE EFFORT FROM THE MANDYA DIET CENTER YOUTUBE LAUNCHES FOR GOVERNMENT SCHOOL CHILDREN SESR RGM

ಮಂಡ್ಯದ ಡಯಟ್ ಕೇಂದ್ರದಿಂದ ವಿನೂತನ ಪ್ರಯತ್ನ; ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಯೂಟ್ಯೂಬ್ ಚಾನಲ್​ ಆರಂಭ

ಜಿಲ್ಲೆಯ ಡಯಟ್ ತನ್ನದೇ ಹೊಸ ವಿನೂತನ ಯೋಜನೆ ಮೂಲಕ ಸವಿ ಮಂಡ್ಯ ಎಂಬ ಹೆಸರಿನ  ಹೊಸದೊಂದು ಯೂ ಟ್ಯೂಬ್ ಚಾನೆಲ್ ತೆರೆದು ಆ ಮೂಲಕ ಮಕ್ಕಳಿಗೆ ಪಾಠ  ನೀಡಲು ಮುಂದಾಗಿದೆ.

news18-kannada
Updated:November 30, 2020, 10:14 PM IST
ಮಂಡ್ಯದ ಡಯಟ್ ಕೇಂದ್ರದಿಂದ ವಿನೂತನ ಪ್ರಯತ್ನ; ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಯೂಟ್ಯೂಬ್ ಚಾನಲ್​ ಆರಂಭ
ಸವಿ ಮಂಡ್ಯ ಯೂ ಟ್ಯೂಬ್​ ಚಾನಲ್​
  • Share this:
ಮಂಡ್ಯ(ನ.30): ಜಿಲ್ಲೆಯ  ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್ ಕೇಂದ್ರ ಇದೀಗ  ಹೊಸ ರೂಪ ಪಡೆದು ಕೊಂಡಿದೆ. ವಿದ್ಯಾಗಮ‌ ಯೋಜನೆ ಸ್ಥಗಿತವಾದ ಬಳಿಕ ಜಿಲ್ಲೆ ಯ ಸರ್ಕಾರಿ‌ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದೆಂದು ಇದೀಗ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ತನ್ನದೆ ಸ್ವಂತ ಯೂ ಟ್ಯೂಬ್ ಚಾನೆಲ್ ಆರಂಭಿಸಿ ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ. ರಾಜ್ಯದಲ್ಲಿ ವಿದ್ಯಾಗಮ ಶಿಕ್ಷಣ ಆರಂಭಿಸಿತ್ತು. ಆದರೆ, ಇದರಿಂದ ಮಕ್ಕಳು ಮತ್ತು ಶಿಕ್ಷಕರಿಗೆ ಸೋಂಕು ತಗುಲುತ್ತಿದ್ದ ಹಿನ್ನಲೆ ಇದನ್ನು ಸ್ಥಗಿತಗೊಳಿಸಿತು. ಈ ವರ್ಷ ಬಹುತೇಕ ಸರ್ಕಾರಿ ಶಾಲೆ ಆರಂಭವಾಗುವ ಲಕ್ಷಣ ಕಾಣದ ವಿದ್ಯಾರ್ಥಿಗಳು ಕಂಗಾಲಾಗಿದ್ದರು. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ  ಆನ್ಲೈನ್  ಶಿಕ್ಷಣ ದೊರಕುತ್ತಿದ್ದರೂ ಸರ್ಕಾರಿ ಶಾಲೆಗಳ ಮಕ್ಕಳು‌ ಶಿಕ್ಷಣ ವಂಚಿತರಾದರು. ರಾಜ್ಯ ಸರ್ಕಾರ ದೂರದರ್ಶನದ ಚಂದನ ವಾಹಿನಿ ಮೂಲಕ  8 ರಿಂದ 10 ನೇ ತರಗತಿ ಮಕ್ಕಳಿ ಪಾಠ‌ ಆರಂಭಿಸಿದರು. ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಿಕ್ಷಣ ದೊರಯದ  ಕಾರಣ ಇದೀಗ ಜಿಲ್ಲೆಯ ಡಯಟ್ ತನ್ನದೇ ಹೊಸ ವಿನೂತನ ಯೋಜನೆ ಮೂಲಕ 'ಸವಿ ಮಂಡ್ಯ' ಎಂಬ ಹೆಸರಿನ  ಹೊಸದೊಂದು ಯೂ ಟ್ಯೂಬ್ ಚಾನೆಲ್ ತೆರೆದು ಆ ಮೂಲಕ ಮಕ್ಕಳಿಗೆ ಪಾಠ  ನೀಡಲು ಮುಂದಾಗಿದೆ.

ಇನ್ನುಈ ವಿನೂತನ ಶಿಕ್ಷಣಕ್ಕಾಗಿ ಡಯಟ್ ನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಡಯಟ್ ಕೇಂದ್ರದಲ್ಲಿ  ಕ್ಯಾಮರಾ, ಪ್ರೊಜೆಕ್ಟರ್, ಲೈಟ್ಸ್, ಕಂಪ್ಯೂಟರ್ ಸೇರಿ ಚಿಕ್ಕದಾದ ರೀತಿಯಲ್ಲಿ ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಕೊಠಡಿಯೊಂದರಲ್ಲಿ ಅಚ್ಚು ಕಟ್ಟಾಗಿ ಸ್ಟುಡಿಯೋ ನಿರ್ಮಿಸಿಕೊಳ್ಳಲಾಗಿದೆ. ಅಲ್ಲಿ ಗ್ರೀನ್ ಮ್ಯಾಟ್ ಅಳವಡಿಸಿದ್ದು, ಆ ಗ್ರೀನ್ ಮ್ಯಾಟ್ ಸ್ಡುಡಿಯೋ ಕೊಠಡಿಯಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನದ ಪಾಠ ಪ್ರವಚನದ ಮೂಲಕ ವ್ಯವಸ್ಥೆ ನಡೆಸಲಾಗಿದೆ.‌ಈ ಸ್ಟುಡಿಯೋದಲ್ಲಿ ಚಿತ್ರೀಕರಿಸಿದ ಪಾಠದ ವಿಡಿಯೋವನ್ನು  ಎಲ್ಲ ಪರೀಶೀಲಿಸಿದ ಬಳಿಕ ತಮ್ಮದೆ 'ಸವಿ ಮಂಡ್ಯ' ಹೆಸರಿನ‌ ಯ್ಯೂ ಟೂಬ್ ಚಾನೆಲ್ ಅಪ್ಲೋಡ್ ಮಾಡುತ್ತಿದ್ದಾರೆ. ಈ ರೀತಿ ಅಪ್ಲೋಡ್ ಮಾಡಿದ ವಿಡಿಯೋ ಯ್ಯೂಟ್ಯೂಬ್ ನಲ್ಲಿ  ಸಿಗಲಿದ್ದು ವಿದ್ಯಾರ್ಥಿ ಗಳು ಈ ಮೂಲಕ ಪಾಠ ಪ್ರವಚನ ಕಲಿಯಲಿದ್ದಾರೆ. ಈಗಾಗಲೇ ಆರಂಭಿಸಿರುವ ಡಯಟ್ ನ ಈ ಹೊಸ ಚಾನೆಲ್ ಗೆ ಸುಮಾರು 33 ಸಾವಿರಕ್ಕೂ ಹೆಚ್ಚಿನ ವೀವರ್ಸ್ ಸ್ಟೂಡೆಂಟ್ಸ್ ಗಳಿದ್ದು, ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಈ ಶಿಕ್ಷಣ ಇಲಾಖೆಗೆ ಹೊಸ  ಚಾನೆಲ್ ಗೆ ಚಂದಾದಾರರಾಗಿದ್ದಾರೆ. ಈ ವಿನೂತನ ಪದ್ದತಿಗೆ ಶಿಕ್ಷಕರು ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ, ಇದರ ತಾಂತ್ರಿಕ ನಿರ್ವಹಣಾ ಮಂಡಳಿ ಶ್ರಮ ಕೂಡ ಸಾಕಷ್ಟಿದೆ.

ಒಟ್ಟಾರೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್ ನ ಈ ವಿನೂತನ ಪ್ರಯತ್ನ ಇಡೀ ರಾಜ್ಯ ದಲ್ಲಿ ಮೊದಲನೆದ್ದಾಗಿದ್ದು, ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ‌. ಇನ್ನು ವಿದ್ಯಾಗಮಕ್ಕೆ ಪರ್ಯಾಯವಾಗಿ  ಯಾವುದೇ ತೊಂದರೆಯಾಗದಂತೆ ಈ ಪರಿಚಯಿಸಿರುವ ಈ ವಿನೂತನ ಶಿಕ್ಷಣ ಪಾಠದ ಪದ್ದತಿ ಮತ್ತಷ್ಟು ಪರಿ ಣಾಮಕಾರಿಯಾಗಲು ಹೊಸ ಸಿದ್ದತೆ ಸೇರಿದಂತೆ ಹೊಸ ಹೊಸ ಪ್ರಯತ್ನ ಮೂಡಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ
Published by: Seema R
First published: November 30, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories