ತಿರುಪತಿ ತಿಮ್ಮಪ್ಪನದ ದರ್ಶನಕ್ಕೆ ಬರೋಬ್ಬರಿ 2000 ಕಿ.ಮೀ ಪಾದಯಾತ್ರೆ ನಡೆಸಿದ ಗುಜರಾತಿನ ವೃದ್ಧ ದಂಪತಿ

ದಂಪತಿಗಳಿಗೆ ಈ ತೀರ್ಥ ಯಾತ್ರೆ ಆರಂಭಿಸಿ- ಮುಗಿಸಿ ಮರಳಿ ತಮ್ಮ ಮನೆ ತಲುಪಲು ಬರೊಬ್ಬರಿ 7 ತಿಂಗಳು ಬೇಕಂತೆ.

ದಂಪತಿಗಳಿಗೆ ಈ ತೀರ್ಥ ಯಾತ್ರೆ ಆರಂಭಿಸಿ- ಮುಗಿಸಿ ಮರಳಿ ತಮ್ಮ ಮನೆ ತಲುಪಲು ಬರೊಬ್ಬರಿ 7 ತಿಂಗಳು ಬೇಕಂತೆ.

ದಂಪತಿಗಳಿಗೆ ಈ ತೀರ್ಥ ಯಾತ್ರೆ ಆರಂಭಿಸಿ- ಮುಗಿಸಿ ಮರಳಿ ತಮ್ಮ ಮನೆ ತಲುಪಲು ಬರೊಬ್ಬರಿ 7 ತಿಂಗಳು ಬೇಕಂತೆ.

 • Share this:
  ರಾಯಚೂರು (ಆ. 9 ):  ತಮಗೆ ಇಷ್ಟಾರ್ಥ ಸಿದ್ದಿಸಿದ ದೇವರಿಗೆ ಹರಕೆ ರೂಪದಲ್ಲಿ ಕಾಣಿಕೆ ಸಲ್ಲಿಸುವ ರೂಢಿ ಹಿಂದೂ ಸಂಪ್ರದಾಯದಲ್ಲಿ ಬಹು ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಅದರಂತೆ  ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವೃದ್ಧ ದಂಪತಿಗಳಿಬ್ಬರು ಸರಿ‌ಸುಮಾರು 2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಈ ಮೂಲಕ ಎಲ್ಲರನ್ನು ನಿಬ್ಬೇರಗಾಗಿಸಿದ್ದಾರೆ. 75 ವರ್ಷದ ಇಳಿ ವಯಸ್ಸಿನಲ್ಲಿ ದಂಪತಿಗಳಿಬ್ಬರು ದೂರದ ಗುಜರಾತ್​ನಿಂದ ಆಂಧ್ರ ಪ್ರದೇಶದ ತಿರುಪತಿ ದರ್ಶನಕ್ಕಾಗಿ ಕಾಲ್ನಡಿಗೆ ಮಾಡಿದ್ದಾರೆ.  ತಮಗೆ ಆರೋಗ್ಯ ಕರಣಿಸಿದ ದೇವರ ದರ್ಶನವನ್ನು ಕಾಲ್ನಡಿಗೆಯ ಮೂಲಕ ನಡೆದು ಬಂದು ದರ್ಶನ ಪಡೆದುಕೊಳ್ಳುತ್ತೇವೆ ಎಂದು ಇವರು ಹರಕೆ ಹೊತ್ತಿದ್ದರಂತೆ ಅದರ ಈಡೇರಿಕೆಗಾಗಿ ಈ ಇಳಿ ವಯಸ್ಸಿನಲ್ಲಿ ಸಾವಿರಾರು ಕಿ.ಮೀ ಸಾಗಿ ಹರಕೆ ಈಡೇರಿಸಿದ್ದಾರೆ. 

  ನಗರದ  ಶಕ್ತಿನಗರದ ರಸ್ತೆಯಲ್ಲಿ ಯರಮರಸ್ ಕ್ಯಾಂಪ್ ಬಳಿ ವೃದ್ಧ ದಂಪತಿಗಳು ಈ ರೀತಿ ನಡೆದು ಹೋಗುತ್ತಿರುವುದನ್ನು ಗಮನಿಸಿದ ಮಾಜಿ ವಿಧಾನಪರಿಷತ್ ಸದಸ್ಯ ಪುತ್ರ ರವಿ ಭೋಸರಾಜು ಇವರನ್ನ ಮಾತನಾಡಿಸಿದ್ದಾರೆ. ಮೊದಲಿಗೆ ಇವರಿಗೆ ಅನಾನುಕೂಲತೆ ಇಲ್ಲದೇ ಈ ರೀತಿ ನಡೆಯುತ್ತಿದ್ದಾರೆ ಎಂದು ಭಾವಿಸಲಾಗಿತ್ತಂತೆ. ಬಳಿಕ ಈ ದಂಪತಿಗಳು ತಮ್ಮ ಉದ್ದೇಶದ ಕುರಿತು ತಿಳಿಸಿದ್ದಾರೆ. ಗುಜುರಾತಿನಿಂದ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಕ್ಕೆ ಪಾದಯಾತ್ರೆ ಮೂಲಕ  ಬಂದು ದರ್ಶನ ಪಡೆದು ಮರಳಿ ತಮ್ಮ ಊರಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

  ಇದನ್ನು ಓದಿ: ಸಾಧಿಸುವುದು ಬಹಳಷ್ಟಿದೆ, ನನ್ನ ಜೀವನಾಧರಿತ ಚಿತ್ರ ಈಗಲೇ ಬೇಡ ಎಂದ ಚಿನ್ನದ ಹುಡುಗ ನೀರಜ್​ ಚೋಪ್ರಾ

  ಈ ವೇಳೆ ತಮ್ಮ ಪಾದಯಾತ್ರೆಯ ಕಾರಣವನ್ನು ಬಿಟ್ಟಿದ್ದಾರೆ. ಗುಜರಾತ್​ನ ಪ್ರಕಾಶ್​  ಅವರ ಹೆಂಡತಿಗೆ  5  ಬಾರಿ ಆಪರೇಷನ್ ಆಗಿ ಆಕೆ ಆರೋಗ್ಯ ಚಿಂತಜನಾಕವಾಗಿತ್ತಂತೆ. ಈ ವೇಳೆ ಆಕೆ ಆರೋಗ್ಯಕ್ಕೆ ದೇವರ ಮೊರೆ ಹೋದರಂತೆ ಆದಾದ ಬಳಿಕ ಈ ಇಳಿ ವಯಸ್ಸಿನಲ್ಲೂ ಅವರು ಆರೋಗ್ಯದಿಂದ ಅಷ್ಟು ದೂರು ನಡೆಯುವಷ್ಟು ಶಕ್ತಿ ಪಡೆದಿದ್ದರಂತೆ. ಅಷ್ಟೇ ಅಲ್ಲದೇ,   ನನಗೂ ಕಣ್ಣಿನ ದೃಷ್ಟಿ ಕಡಿಮೆ ಇತ್ತು. ತಿರುಪತಿ ವೆಂಕಟೇಶ್ವರ ದೇವರಿಗೆ  ಬೇಡಿಕೊಂಡ ಮೇಲೆ ಈಗ ನನ್ನ ದೃಷ್ಟಿಯೂ ಚೆನ್ನಾಗಿ ಕಾಣುತ್ತಿದೆ. ಇದಕ್ಕೆಲ್ಲ ಆ ಗೋವಿಂದನ ದಯೆಯೇ ಕಾರಣ. ಹಾಗಾಗಿ ನಾನು ನನ್ನ ಮಡದಿ ಪಾದಯಾತ್ರೆ ಬಂದೆವು ಅಂತಾರೆ ಪ್ರಕಾಶ್.

  ಇವರು ಒಂದು ದಿನಕ್ಕೆ 25 ರಿಂದ 28 ಕಿಲೋಮೀಟರ್ ನಡೆಯುತ್ತಾರಂತೆ .ಗುಜರಾತ್ ನಿಂದ ತಿರುಪತಿ ‌ಗೆ ಸುಮಾರು 2000 ಕಿಲೋಮೀಟರ್ ಅಂತರವಿದೆ. ಇನ್ನು ಈ ದಂಪತಿಗಳು ತಮ್ಮ ಊರು ಬಿಟ್ಟು ತಿರುಪತಿ ತಲುಪಲು 3 ತಿಂಗಳು 17 ದಿನ ವಾಗಿದೆಯಂತೆ. ಈಗ ಮತ್ತೆ ಮರಳಿ ತಮ್ಮ ಊರಿಗೆ ಹೊಗಲು 3 ತಿಂಗಳು ‌ಬೇಕಂತೆ. ಒಟ್ಟಾರೆ ಈ ವೃದ್ಧ ದಂಪತಿಗಳಿಗೆ ಈ ತೀರ್ಥ ಯಾತ್ರೆ ಆರಂಭಿಸಿ- ಮುಗಿಸಿ ಮರಳಿ ತಮ್ಮ ಮನೆ ತಲುಪಲು ಬರೊಬ್ಬರಿ 7 ತಿಂಗಳು ಬೇಕಂತೆ. ಈ ನಡುವೆ ಊಟದ ವ್ಯವಸ್ಥೆಯಲ್ಲಿ ಸಿಕ್ಕ ಕಡೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ  ವರದಿ : ವಿಶ್ವನಾಥ್ ಹೂಗಾರ್ 

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: