ಆಟೋ ಚಾಲಕರಿಗೆ ನೆರಳಾದ ಅವರೇ ಬೆಳಸಿದ ಮರಗಳು ; ಚಿಕ್ಕಮಗಳೂರಲ್ಲೊಂದು ಪರಿಸರ ಪ್ರೇಮಿ ಆಟೋ ನಿಲ್ದಾಣ

ಈ ಆಟೋ ನಿಲ್ದಾಣ ತಂಪನೆ ಗಾಳಿಯಿಂದ ಆಟೋ ಚಾಲಕರಿಗೆ ಎಲ್ಲಾ ಆಯಾಸ ಮಾಯವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 

news18-kannada
Updated:May 7, 2020, 9:54 PM IST
ಆಟೋ ಚಾಲಕರಿಗೆ ನೆರಳಾದ ಅವರೇ ಬೆಳಸಿದ ಮರಗಳು ; ಚಿಕ್ಕಮಗಳೂರಲ್ಲೊಂದು ಪರಿಸರ ಪ್ರೇಮಿ ಆಟೋ ನಿಲ್ದಾಣ
ಪರಿಸರ ಪ್ರೇಮಿ ಆಟೋ ನಿಲ್ದಾಣ
  • Share this:
ಚಿಕ್ಕಮಗಳೂರು(ಮೇ.07): ಮಳೆ ಬಿಸಿಲನ್ನು ಲೆಕ್ಕಿಸದೆ ದಿನನಿತ್ಯ ನಗರದಲ್ಲಿ ಸಂಚರಿಸುವ ಆಟೋ ಚಾಲಕರಿಗೆ ನೆರಳು ನೀಡುವ ಉದ್ದೇಶದಿಂದ ಸರ್ಕಾರ ಆಟೋ ಚಾಲಕರಿಗೆ ಆಟೋ ನಿಲ್ದಾಣಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ, ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ಆಟೋ ನಿಲ್ದಾಣಕ್ಕೆ ಆಟೋ ಚಾಲಕರೆ ಬೆಳೆಸಿದ ಮರಗಳು ನೆರಳು ನೀಡುತ್ತಿದೆ. ಪರಿಸರ ಪ್ರೇಮಿ ಆಟೋ ನಿಲ್ದಾಣವಾಗಿ, ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಆಟೋ ನಿಲ್ದಾಣದಲ್ಲಿ ಸುಮಾರು 7ಕ್ಕೂ ಹೆಚ್ಚು ಹೊಂಗೆ ಮರವನ್ನು ಬೆಳೆಸಲಾಗಿದೆ. ಕಳೆದ 13-14 ವರ್ಷಗಳ ಹಿಂದೆ ಹಾಸನದಿಂದ ಬಂದು ಆಟೋ ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಬೈರೇಗೌಡ ಎಂಬುವರು ಅಲ್ಲೆ ಸಮೀಪದಲ್ಲಿದ್ದ ಹೊಂಗೆ ಮರದ ಬುಡದಲ್ಲಿ ಬೆಳೆದಿದ್ದ ಸಸಿಗಳನ್ನು ತಂದು ನೆಟ್ಟು ಅವುಗಳಿಗೆ ನೀರು ಹಾಕಿ ಪೋಷಿಸಿದ್ದರು. ಆ ಸಸಿಗಳೆ ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತು ಇಲ್ಲಿ ಬಂದು ನಿಲ್ಲುವ ಆಟೋಗಳಿಗೆ ನೆರಳಿನ ಆಶ್ರಯ ನೀಡುತ್ತಿವೆ.

ನೆರಳಿನೊಂದಿಗೆ ಶುದ್ಧವಾದ, ತಂಪಾದ ಗಾಳಿಯನ್ನು ಆಟೋ ಚಾಲಕರಿಗೆ ಉಣಬಡಿಸುವುದರೊಂದಿಗೆ ನೋಡುಗರಿಗೂ ಸೊಬಗು ನೀಡುತ್ತಿದೆ. ಕಬ್ಬಿಣದ ತಗಡು ಹಾಕಿ ಆಟೋ ನಿಲ್ದಾಣವನ್ನು ಸಾವಿರಾರು ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು ಕೂಡ ಆಟೋ ಚಾಲಕರು ವಾತವರಣದ ಉಷ್ಣಾಂಶದಿಂದ ಪರಿತಪಿಸುವುದು ಮಾತ್ರ ತಪ್ಪಿಲ್ಲ, ಆದರೆ, ಈ ಆಟೋ ನಿಲ್ದಾಣ ಹಾಗಲ್ಲ ನಗರದಾದ್ಯಂತ ಆಟೋ ಓಡಿಸಿ ಬಂದು ನಿಲ್ದಾಣದಲ್ಲಿ ಕುಳಿತರೆ ತಂಪನೆ ಗಾಳಿಯಿಂದ ಆಟೋ ಚಾಲಕರಿಗೆ ಎಲ್ಲಾ ಆಯಾಸ ಮಾಯವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಈ ಆಟೋ ನಿಲ್ದಾಣದ ಸಮೀಪ ದೊಡ್ಡ ಗಾತ್ರದ ಹೊಂಗೆ ಮರವಿತ್ತು. ಆ ಮರದ ಬುಡದಲ್ಲಿ ಬೆಳೆದಿದ್ದ ಹೊಂಗೆ ಸಸಿಗಳನ್ನು ತಂದು ನೆಟ್ಟು ಪೋಷಿಸಿದ್ದೆ. ಆ ಸಸಿಗಳು ಬೆಳೆದು ಆಟೋ ನಿಲ್ದಾಣಕ್ಕೆ ನೆರಳು ನೀಡುತ್ತಿದೆ. ಅಂದು ನೆಟ್ಟು ಬೆಳೆಸಿದ ಗಿಡ ಇಂದು ನೆರಳು ನೀಡುತ್ತಿವೆ. ಶಾಸಕರ ಅನುದಾನದಡಿಯಲ್ಲಿ ಆಟೋ ನಿಲ್ದಾಣಕ್ಕಾಗಿ ಅರ್ಜಿಯನ್ನು ಹಾಕಿದ್ದೇವು. ಮರಗಳನ್ನು ತೆರವು ಮಾಡಿ ನಿಲ್ದಾಣ ಮಾಡುವುದಾಗಿ ತಿಳಿಸಿದ್ದರು. ಆದರೆ, ನಾವೇ ಬೇಡ ಎಂದೇವು ಎಂದು ಆಟೋ ಚಾಲಕ ಬೈರೇಗೌಡ ಹೇಳುತ್ತಾರೆ.

ಇದನ್ನೂ ಓದಿ : ಲಾಕ್ ಡೌನ್ ವೇಳೆ ಚುರುಕಾದ ರೈಲ್ವೆ ಕಾಮಗಾರಿಗಳು ; ಶಿವಮೊಗ್ಗದಲ್ಲಿ ರೈಲ್ವೆ ಸೇತುವೆ ಹಳಿಗಳ ಮರು ಜೋಡಣೆ

ಕೆಲ ಆಟೋ ಚಾಲಕರು ತಮ್ಮ ದುಡಿಮೆಯ ನಂತರ ಆಟೋವನ್ನು ಈ ನಿಲ್ದಾಣದಲ್ಲಿ ನಿಲ್ಲಿಸಿಕೊಂಡು ಹಾಯಾಗಿ ಒಂದು ನಿದ್ದೆಗೂ ಜಾರುತ್ತಾರೆ. ಈ ಆಟೋ ನಿಲ್ದಾಣ ನೋಡಲು ಚಂದವಾಗಿ ಕಾಣುವುದರೊಂದಿಗೆ ಪರಿಸರ ಪ್ರೇಮಿ ಆಟೋ ನಿಲ್ದಾಣವಾಗಿ ಮಾರ್ಪಟ್ಟಿದ್ದು ಇದು ಬೇರೆಯವರಿಗೂ ಮಾದರಿಯಾಗಿದೆ.
First published: May 7, 2020, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading