• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Roopa Shashidhar: ಈ ಬಾರಿ ಅವಳನ್ನು ಸೋಲಿಸಿ ನಿಮ್ಗೆ ಕೈ ಮುಗಿತೀನಿ; ಶಾಸಕಿ ಪತಿಯದ್ದು ಎನ್ನಲಾದ ಆಡಿಯೋ ವೈರಲ್!

Roopa Shashidhar: ಈ ಬಾರಿ ಅವಳನ್ನು ಸೋಲಿಸಿ ನಿಮ್ಗೆ ಕೈ ಮುಗಿತೀನಿ; ಶಾಸಕಿ ಪತಿಯದ್ದು ಎನ್ನಲಾದ ಆಡಿಯೋ ವೈರಲ್!

ಆಡಿಯೋ ಕ್ಲಿಪ್ ವೈರಲ್

ಆಡಿಯೋ ಕ್ಲಿಪ್ ವೈರಲ್

ಆಡಿಯೋ ಕ್ಲಿಪ್​ನಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಎಂಬವರ ಜೊತೆ ರೂಪಕಲಾ ಅವರಿಗೆ ಬೇರೆ ಅರ್ಥ ಕಲ್ಪಿಸಿ ಮಾತನಾಡಲಾಗಿದೆ.

  • Share this:

ಬೆಂಗಳೂರು: ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ (MLA Roopa Shashidhar) ಅವರ ಕುಟುಂಬಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್ (Audio Clip) ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಆಡಿಯೋ ವೈರಲ್ ಬೆನ್ನಲ್ಲೇ ಶಾಸಕಿ ರೂಪಾ ಅವರ ಪತಿ ಶಶಿಧರ್ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚುನಾವಣೆ ಸಮಯದಲ್ಲಿ ರೂಪಾ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ. ಈ ಆಡಿಯೋ ಕ್ಲಿಪ್ ಬಗ್ಗೆ ತನಿಖೆ ನಡೆಸಬೇಕು ಎಂದು ಶಶಿಧರ್ ದೂರಿನಲ್ಲಿ ತಿಳಿಸಿದ್ದಾರೆ.


ದೂರಿನ ಅನ್ವಯ ಪೊಲೀಸರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಐಪಿಸಿ 120B, 171G,465, ಹಾಗೂ 469 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಶಶಿಧರ್ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್​ನಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಎಂಬವರ ಜೊತೆ ರೂಪಕಲಾ ಅವರಿಗೆ ಬೇರೆ ಅರ್ಥ ಕಲ್ಪಿಸಿ ಮಾತನಾಡಲಾಗಿದೆ.


ವೈರಲ್ ಆಗಿರುವ ಆಡಿಯೋ ಕ್ಲಿಪ್​ನಲ್ಲಿದೆ?


ಕಾಂಗ್ರೆಸ್ ಕಾರ್ಯಕರ್ತ: ಏನ್ ಶಶಿ ಸರ್. ಆರಾಮ?


ಶಶಿ: ಏನ್ ಆರಾಮ್ ರೆಡ್ಡಿ ಅವರೇ? ಹೇಗೆ ನಡೆಯುತ್ತಿದೆ ಪೆಟ್ರೋಲ್ ಬಂಕ್?


ಕಾಂಗ್ರೆಸ್ ಕಾರ್ಯಕರ್ತ: ಪರವಾಗಿಲ್ಲ ಸರ್. ಯಾಕೆ ಏನಾಯ್ತು ?




ಶಶಿ: 2018ರಲ್ಲಿ ನನ್ನ ಮನೆ ಬಾಗಿಲಿಗೆ ಬಂದು ನನ್ನನ್ನು ಕನ್ವೀನ್ಸ್ ಮಾಡಿ ಕರ್ಕೊಂಡು ಹೋದ್ರಿ. ಆದರೆ ಈಗ ಗೋವಿಂದೇಗೌಡನ ಜೊತೆ ಸೇರಿ ಮಕ್ಕಳನ್ನು ಮಡಿಕೇರಿಗೆ ಹಾಕಿದ್ದಾಳೆ.


ಇದನ್ನೂ ಓದಿ:  Kusuma H: ಸಚಿವ ಮುನಿರತ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗಂಭೀರ ಆರೋಪ; ದೂರು ದಾಖಲು

top videos


    ನಮ್ಮ ಮಾವ ದೇವರಂಥ ಮನುಷ್ಯ. ಗೋವಿಂದೇಗೌಡನ ವಿಚಾರ ಎತ್ತಿದ್ರೆ ಸಾಕು ಊಟಕ್ಕೆ ವಿಷ ಹಾಕಿ ಸಾಯಿಸ್ತೀನಿ ಅಂತಾಳೆ. ಕೈ ಮುಗಿತಿನಿ ರೆಡ್ಡಿ ಅವರೇ, ಈ ಬಾರಿ ಅವಳನ್ನು ಸೋಲಿಸಿ ನಮ್ಮ ಮನೆಗೆ ಕಳುಹಿಸಿಕೊಡಿ. ಹೇಗೋ ನನ್ನ ಸಂಸಾರವನ್ನು ಉಳಿಸಿಕೊಳ್ಳುತ್ತೇನೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು