ಬೆಂಗಳೂರು: ನಗರದ ಸಲೂನ್ನಲ್ಲಿ (Salon) ಅಸಿಸ್ಟೆಂಟ್ ಮ್ಯಾನೇಜರ್ (Assistant Manager) ಆಗಿ ಕೆಲಸ ಮಾಡುತ್ತಿದ್ದ ಯುವತಿ (Woman) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ (Bengaluru) ಜಯನಗರದಲ್ಲಿ ನಡೆದಿದೆ. ಸಲೂನ್ ಮಾಲೀಕರ ಸಂಬಂಧಿ ರವೀಂದ್ರ ಶೆಟ್ಟಿ ಎಂಬುವರು ಕೃತ್ಯ ಎಸಗಿದ್ದು, ಜಯನಗರ ಪೊಲೀಸರು (Jayanagar Police Station ) ಆರೋಪಿಯನ್ನ ಬಂಧಿಸಿದ್ದಾರೆ. ನೊಂದ ಯುವತಿ ಕೆಲವು ತಿಂಗಳಿಂದ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಆಗಾಗ ಪಾರ್ಲರ್‌ಗೆ ಬಂದು ಮಸಾಜ್ (Massage) ಮಾಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇದೇ ತಿಂಗಳ ಫೆಬ್ರವರಿ 14 ರಂದು ಮಸಾಜ್ ಪಾರ್ಲರ್‌ಗೆ ಬಂದಿದ್ದ ಆರೋಪಿ, ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿಯಿಂದ ತಪ್ಪಿಸಿಕೊಂಡ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Rohini Sindhuri Vs D Roopa: ರೂಪಾಗೆ ಸಿಂಧೂರಿ ನೋಟಿಸ್, 1 ಕೋಟಿ ಮಾನನಷ್ಟ ಮೊಕದ್ದಮೆ ಎಚ್ಚರಿಕೆ!
ಘಟನೆ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ದಕ್ಷಿಣ ವಿಭಾಗ ಪಿ. ಕೃಷ್ಣಕಾಂತ್, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್ 376 ಅಡಿ ಹಾಗೂ ಅಟ್ರಾಸಿಟಿ ಕಾಯ್ದೆ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಸಲೂನ್ಗೆ ಬಂದಿದ್ದ ಮುಖ್ಯ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆತನನ್ನು ಬಂಧನ ಮಾಡಿದ್ದು, ಸಲೂನ್ ಮಾಲೀಕನ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತೆ ಹೆಡ್ ಮಾಸಾಜ್ ಮಾಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಒಂದಲ್ಲ ಎರಡಲ್ಲ ಮೂರು ಚಿರತೆ; ರಾಜಧಾನಿ ಬೆಂಗಳೂರಲ್ಲಿ ಮತ್ತೆ ಚಿರತೆ ಭಯ!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಸುತ್ತಮುತ್ತ ಚಿರತೆ (Leopard) ಹಾವಳಿ ಹೆಚ್ಚಾಗಿದೆ. ಚಿರತೆ ಬಂತು ಚಿರತೆ ಅಂತ ಹೆದರಿರುವ ಜನರಿಗೆ ಇದೀಗ ಯಾವ ಚಿರತೆಯೂ ಸಿಕ್ಕಿಲ್ಲ. ರಾಮಾಂಜನೇಯ ಲೇಔಟ್ನಲ್ಲಿ (Ramanjaneya Layout) ಇನ್ನೂ ಚಿರತೆಗಳು ಓಡಾಟ ನಡೆಸುತ್ತಿದ್ದು, ಜನರು ಮನೆಯಿಂದ (Home) ಹೊರ ಬರಲು ಹೆದರುತ್ತಿದ್ದಾರೆ.
ಸ್ಥಳೀಯ ನಿವಾಸಿಗಳಿಗೆ ಚಿರತೆ ಆತಂಕ ಬೆಂಬಿಡದೇ ಕಾಡುತ್ತಿದೆ. ತುರಹಳ್ಳಿ, ಉತ್ತರಹಳ್ಳಿ ಬಳಿಕ ಈಗ ಯಲಹಂಕ, ರಾಮಾಂಜನೇಯ ಲೇಔಟ್ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಚಿರತೆ ಪ್ರತ್ಯಕ್ಷವಾಗಿದೆಯಂತೆ. ಬೆಳಗ್ಗೆ ವಾಕಿಂಗ್ ಹೊರಟವರು ಚಿರತೆಯನ್ನು ನೋಡಿದ್ದಾರಂತೆ. ಚಿರತೆ ಸಂಚಾರದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಕಿಂಗ್ ಬಂದ್, ಚಿರತೆ ಸೆರೆಗೆ ಸ್ಥಳೀಯರ ಒತ್ತಾಯ!
ಚಿರತೆ ಆತಂಕದಿಂದ ಜನರು ಮಾರ್ನಿಂಗ್ ವಾಕಿಂಗ್ ಮಾಡುವುದನ್ನು ನಿಲ್ಲಿಸಿದ್ದಾರಂತೆ. ವಿಚಾರ ತಿಳಿದ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಮಾಡುತ್ತಿದ್ದು, ಬೋನ್ ಇಟ್ಟಿದ್ದಾರೆ.
ಬೋನ್ನಲ್ಲಿ ಒಂದು ಮೇಕೆಯನ್ನ ಕಟ್ಟಿ ಹಾಕಿದ್ದಾರಂತೆ. ಆದರೆ ಮೂರು ಚಿರತೆಗೆ ಒಂದು ಬೋನ್ ಸಾಕಾ ಅಂತಿದ್ದಾರೆ ಇಲ್ಲಿನ ಜನ. ಈ ಮಧ್ಯೆ ನೆಲಮಂಗಲದಲ್ಲಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಕಾಟದಿಂದ ಬೇಸತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದೆಡೆ ಚಿರತೆ ಕಾಣಿಸಿಕೊಂಡಿರುವ ಕಾರಣ ಆತಂಕಗೊಂಡಿರುವ ಜನರು ಅದಷ್ಟು ಬೇಗ ಚಿರತೆ ಬೋನಿಗೆ ಬಿದ್ದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ