Athlete Death: ತೀವ್ರ ಜ್ವರಕ್ಕೆ ಬಲಿಯಾದ ಕ್ರೀಡಾಪಟು, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಪ್ರತಿಭಾವಂತ ನಿಧನ

ಖೋ ಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ವಿನಯ್, ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನಯ್ ಸಾವನ್ನಪ್ಪಿದ್ದಾರೆ.  

ಪ್ರತಿಭಾನ್ವಿತ ಕ್ರೀಡಾಪಟು ನಿಧನ

ಪ್ರತಿಭಾನ್ವಿತ ಕ್ರೀಡಾಪಟು ನಿಧನ

  • Share this:
ಶಿವಮೊಗ್ಗ: ರಾಜ್ಯದ ಮಲೆನಾಡು (Malenadu), ಕರಾವಳಿ (Coastal), ಬಯಲುಸೀಮೆ ಸೇರಿದಂತೆ ಹಲವೆಡೆ ಮಳೆ (Rain) ಅಬ್ಬರ ಜೋರಾಗಿದೆ. ಭಾರೀ ಮಳೆಯ ಜೊತೆಗೆ ಹಲವು ರೀತಿಯ ರೋಗಗಳೂ (disease) ಕೂಡ ಜಾಸ್ತಿಯಾಗುತ್ತಿವೆ. ಅದರಲ್ಲೂ ವಿವಿಧ ರೀತಿಯ ಜ್ವರಗಳಂತೂ (Fever) ತಾಂಡವವಾಡುತ್ತಿದೆ. ಇದೀಗ ತೀವ್ರ ಜ್ವರಕ್ಕೆ ಶಿವಮೊಗ್ಗ (Shivamogga) ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುವೊಬ್ಬರು (Athlete) ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (Tirthahalli) ತಾಲೂಕಿನ ನಿವಾಸಿ ವಿನಯ್ ಸೀಬಿಕೆರೆ ಎಂಬುವರೇ ತೀವ್ರ ಜ್ವರಕ್ಕೆ ಬಲಿಯಾದ ಪ್ರತಿಭಾನ್ವಿತ ಕ್ರೀಡಾಪಟು. ಖೋ ಖೋ ಕ್ರೀಡೆಯಲ್ಲಿ (Kho Kho Sports) ರಾಜ್ಯವನ್ನು ಪ್ರತಿನಿಧಿಸಿದ್ದ ವಿನಯ್, ರಾಷ್ಟ್ರಮಟ್ಟದಲ್ಲಿ (National Level) ಸಾಕಷ್ಟು ಹೆಸರು ಮಾಡಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನಯ್ ಸಾವನ್ನಪ್ಪಿದ್ದಾರೆ.  

ಯಾರು ಈ ವಿನಯ್ ಸೀಬಿಕೆರೆ?

ವಿನಯ್ ಸೀಬಿಕೆರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಖೋ ಖೋ ಕ್ರೀಡೆಯಲ್ಲಿ ವಿನಯ್ ಸಾಕಷ್ಟು ಹೆಸರು ಮಾಡಿದ್ದರು. ಇವರು ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್​​ನಿಂದ ಹೊರಹೊಮ್ಮಿದ ಪ್ರತಿಭೆಯಾಗಿದ್ದಾರೆ. ವಿನಯ್ ರಾಜ್ಯ ಖೋ ಖೋ ತಂಡವನ್ನು ಪ್ರತಿನಿಧಿಸುತ್ತಿದ್ದರು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಾರಿ ರಾಜ್ಯವನ್ನು ಪ್ರತಿನಿಧಿಸಿ, ಬಹುಮಾನ ಗೆದ್ದಿದ್ದರು.

ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ವಿನಯ್

ವಿನಯ್ ಸೀಬಿಕೆರೆ ಅವರು ಖೋ ಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾಗಿದ್ದ ಇವರು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಖೋ ಖೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ: Bengaluru: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವೈರಲ್ ಸೋಂಕುಗಳು: ವೈದ್ಯರು ಹೇಳುವುದೇನು ನೋಡಿ

ತೀವ್ರ ಜ್ವರಕ್ಕೆ ಬಲಿಯಾದ ಪ್ರತಿಭಾನ್ವಿತ ಕ್ರೀಡಾಪಟು

ವಿನಯ್ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಮೊದಲಿಗೆ  ವಿನಯ್ ಅವರನ್ನು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜ್ವರ ಇನ್ನಷ್ಟು ಹೆಚ್ಚಾದಾಗ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಜ್ವರ ನಿಯಂತ್ರಣಕ್ಕೆ ಬಾರದೇ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.‌

ವಿನಯ್ ಸೀಬಿಕೆರೆ ನಿಧನಕ್ಕೆ ಕ್ರೀಡಾಭಿಮಾನಿಗಳ ಕಂಬನಿ

ಇನ್ನು ವಿನಯ್ ಅಂತಿಮ ದರ್ಶನಕ್ಕೆ ತೀರ್ಥಹಳ್ಳಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿನಯ್ ನಿಧನಕ್ಕೆ ಕ್ರೀಡಾ ಪ್ರೇಮಿಗಳು, ತೀರ್ಥಹಳ್ಳಿಯ ರಾಜಕೀಯ ಮುಖಂಡರು, ಸ್ಥಳೀಯರು, ಗ್ರಾಮಸ್ಥರೆಲ್ಲ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: Covid 19: ಕರ್ನಾಟಕದಲ್ಲಿ ಹೆಚ್ಚಾಗುತ್ತಾ ಕೋವಿಡ್ ಅಬ್ಬರ? 7 ರಾಜ್ಯಗಳಿಗೆ ಕೇಂದ್ರದಿಂದ ಎಚ್ಚರಿಕೆ!

ಕಂಬನಿ ಮಿಡಿದ ಸ್ನೇಹಿತರು

ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ವಿನಯ್ ಸೀಬಿಕೆರೆ ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ವಿನಯ್ ನಿಧನಕ್ಕೆ ಸ್ನೇಹಿತರು ಕಂಬನಿ ಮಿಡಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿನಯ್‌ ಸೀಬಿಕೆರೆ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಛೇ ನಂಬಲಾಗುತ್ತಿಲ್ಲ. ನಗು ಮುಖದ ಗೆಳೆಯ ವಿನಯ್ ಸೀಬಿನಕೆರೆ…  ತೀರ್ಥಹಳ್ಳಿ ಏಕಲವ್ಯ ಸ್ಪೋರ್ಟ್ ಕ್ಲಬ್ ಇಂದ ಹೊರಹೊಮ್ಮಿದ್ದ ಕರ್ನಾಟಕ ರಾಜ್ಯದ ಶ್ರೇಷ್ಠ ಖೋಖೋ ಆಟಗಾರ. ನಗುಮುಖದ ಗೆಳೆಯ ಇನ್ನಿಲ್ಲ ಅನ್ನೊ ಸುದ್ದಿ ಅರುಗಿಸಿಕೊಳ್ಳೊಕೆ ಆಗ್ತಿಲ್ಲ.. ಮತ್ತೆ ಹುಟ್ಟಿ ಬಾ ಗೆಳೆಯ ಅಂತ ಸ್ಟೇಟಸ್ ಹಾಕಿ, ಸಂತಾಪ ಸೂಚಿಸಿದ್ದಾರೆ. ಇನ್ನು ವಿನಯ್ ಅಂತಿಮ ದರ್ಶನಕ್ಕೆ ತೀರ್ಥಹಳ್ಳಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
Published by:Annappa Achari
First published: