• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ಅವನ ಪತ್ನಿ ಮೇಲೆ ಇವನಿಗೆ ಲವ್, ಕೋಮುಗಲಭೆ ಪ್ಲಾನ್ ಮಾಡಿ ಶಿವಮೊಗ್ಗಕ್ಕೇ ಬೆಂಕಿ ಹಚ್ಚೋ ಸಂಚು!

Shivamogga: ಅವನ ಪತ್ನಿ ಮೇಲೆ ಇವನಿಗೆ ಲವ್, ಕೋಮುಗಲಭೆ ಪ್ಲಾನ್ ಮಾಡಿ ಶಿವಮೊಗ್ಗಕ್ಕೇ ಬೆಂಕಿ ಹಚ್ಚೋ ಸಂಚು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕ ಪ್ರಶಾಂತ್ ಎಂಬವರಿಗೆ ಬಾಗಿಲು ಮುಚ್ಚುವ ವೇಳೆ ಖಾಕಿ ಬಣ್ಣದ ಕವರ್ ಕಾಣಿಸಿದೆ. ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರ ಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂಬ ಒಕ್ಕಣಿಕೆ ಬರೆಯಲಾಗಿತ್ತು.

  • Share this:

ಶಿವಮೊಗ್ಗದಲ್ಲಿ (Shivamogga) ಬೆಚ್ಚಿಬೀಳಿಸುವ ಪತ್ರ ಪತ್ತೆಯಾಗಿತ್ತು. ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ಗಂಗಾಪರಮೇಶ್ವರಿ ದೇಗುಲ (Ganga Parameshwari Temple) ಬಳಿ ಈ  ಅನಾಮಧೇಯ ಪತ್ರ ಪತ್ತೆಯಾಗಿದ್ದು, ಗಣಪತಿ ಹಬ್ಬಕ್ಕೆ ಮೂವರು ಕೊಲೆಗೆ ಸಂಚು ಎಂದು ಉಲ್ಲೇಖ ಮಾಡಲಾಗಿತ್ತು. ಪತ್ರ ಸಿಕ್ಕಿದ ವ್ಯಕ್ತಿ ಪ್ರಶಾಂತ್ ಎಂಬವರು ಕೋಟೆ ಪೊಲೀಸರಿಗೆ (Police) ಈ ಸಂಬಂಧ ದೂರು ನೀಡಿದ್ದಾರೆ. ಪತ್ರ ಬರೆದ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಪ್ರಶಾಂತ್ ಮನವಿ ಮಾಡಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ರ ಬರೆದಿದ್ದ ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸಿದ್ದಾರೆ.  ಫೈಜಲ್ ಪತ್ನಿಯೊಂದಿಗೆ ಅಯೂಬ್ ನಂಟು (Relationship) ಹೊಂದಿದ್ದನು. ಹೀಗಾಗಿ ಫೈಜಲ್​ನ್ನು ಜೈಲಿಗೆ ಕಳುಹಿಸಿ ಪತ್ನಿ ಜೊತೆಗಿರಲು ಅಯೂಬ್ ಪ್ಲ್ಯಾನ್ ಮಾಡಿಕೊಂಡು ಪತ್ರ ಬರೆದಿದ್ದನು ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ (Police Investigation) ತಿಳಿದು ಬಂದಿದೆ.


ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಯೂಬ್


ಫೈಜಲ್ ಪತ್ನಿ ಜೊತೆ ಸುಖವಾಗಿರಬೇಕೆಂಬ ದುರುದ್ದೇಶದಿಂದ ಪತ್ರ ಬರೆದಿರೋದಾಗಿ ಪೊಲೀಸ್ ವಿಚಾರಣೆ ವೇಳೆ ಆಯೂಬ್ ಬಾಯ್ಬಿಟ್ಟಿದ್ದಾನೆ. ಪತ್ರ ಪತ್ತೆಯಾದ 24 ಗಂಟೆಯೊಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.


ಇದನ್ನೂ ಓದಿ:  Kidnap Case: 4 ಕೋಟಿ ಕೊಡು, ಇಲ್ಲಾಂದ್ರೆ ರೇಪ್ ಕೇಸ್ ಹಾಕ್ತೀನಿ; ಉದ್ಯಮಿ ಮಗನನ್ನ ಅಪಹರಿಸಿದ ಲೇಡಿ ಗ್ಯಾಂಗ್


ಪೊಲೀಸರಿಗೆ ಪತ್ರ ತಲುಪಿಸಿ


ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕ ಪ್ರಶಾಂತ್ ಎಂಬವರಿಗೆ ಬಾಗಿಲು ಮುಚ್ಚುವ ವೇಳೆ ಖಾಕಿ ಬಣ್ಣದ ಕವರ್ ಕಾಣಿಸಿದೆ. ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರ ಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂಬ ಒಕ್ಕಣಿಕೆ ಬರೆಯಲಾಗಿತ್ತು.


Honour killing Parents kill daughters in piriyapattana mysuru mrq
ಸಾಂದರ್ಭಿಕ ಚಿತ್ರ


ಪತ್ರದಲ್ಲಿ ಏನು ಬರೆಯಲಾಗಿತ್ತು?


ಓರ್ವ ಮಾರ್ವಾಡಿಯನ್ನ ಅರ್ಧಂಬರ್ಧ ಕೊಲೆ ಮಾಡಲಾಗಿದೆ ಆತನನ್ನ ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ, ಉದ್ದಿಮೆದಾರ ಹಾಗೂ ಹರ್ಷನ ಸಹಚರನನ್ನ ಕೊಲೆಯಾಗಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುವರು ಈ ಬಗ್ಗೆ ಮಾತನಾಡಿಕೊಂಡಿರುವುದನ್ನ ಕೇಳಿಸಿಕೊಂಡು ಭಯಭೀತಿಯಾಗಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.


ಈ ಕಾರ್ಯಕ್ಕೆ ಮೂವರನ್ನ ಮಂಗಳೂರಿನಿಂದ ಕರೆಸಬೇಕು ಎಂದು ಮಾತನಾಡಿಕೊಂಡಿದ್ದಾರೆ. ಅವರು ಮೊಬೈಲ್ ಫೋನ್ ಬಳಸಬಾರದು. ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೇನೆ ಈ ಹಬ್ಬ ಆಚರಣೆ ತಡೆಯೋಕಾಗೋದು ಎಂದು ಮೂವರು ಯುವಕರು ಮಾತನಾಡಿಕೊಂಡಿರೋದನ್ನು ಕೇಳಿಸಿಕೊಂಡಿರುವ ಬಗ್ಗೆ ಪತ್ರದಲ್ಲಿ ತಿಳಿಸಲಾಗಿತ್ತು.


ಭಯಭೀತನಾಗಿ ಪತ್ರ ಬರೆದಂತೆ ಡ್ರಾಮಾ


ಇಬ್ಬರು ಯುವಕರು ಮಾತನಾಡುತ್ತಿರುವುದನ್ನು ಅಪರಿಚಿತ ಕೇಳಿಸಿಕೊಂಡು ಭಯಭೀತನಾಗಿ ಬರೆದಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರಲ್ಲಿ ಓರ್ವ ಮೊಹ್ಮದ್ ಫೈಜಲ್ ಎಂಬಾತನನ್ನು ಅಪರಿಚಿತ ಗುರುತಿಸಿದ್ದಾನೆ. ಈತ ಗಾಂಜಾ ಮಾರುವುದು, ಗಾಂಜಾ ಸೇವನೆಯನ್ನೂ ಮಾಡುತ್ತಾನೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈತ ಆಜಾದ್ ನಗರದಲ್ಲಿ ರೌಡಿ ತರಹ ವರ್ತಿಸುತ್ತಾನೆ. ಆದಷ್ಟು ಬೇಗ ಫೈಜಲ್​ನನ್ನ ಪೊಲೀಸರು ವಿಚಾರ ಮಾಡಬೇಕು ಮತ್ತು ಮಂದಾಗಬಹುದಾದ ಗಲಭೆ ನಿಲ್ಲಿಸಿ ಎಂದು ಪತ್ರದಲ್ಲಿ ಬರೆಯಲಾಗಿತ್ತು.


ಕೊಡಗಿನಲ್ಲಿ ನಿಷೇಧಾಜ್ಞೆ


ಇಂದು ಬೆಳಗ್ಗೆ 6 ಗಂಟೆಯಿಂದ ಆಗಸ್ಟ್​ 27ರ‌ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊಡಗಿನಲ್ಲಿ 3 ದಿನ ಮದ್ಯ ಮಾರಾಟಕ್ಕೂ ನಿಷೇಧ (Liquor Sale Ban) ಹಾಕಲಾಗಿದೆ.


ಇದನ್ನೂ ಓದಿ:  KPTCL ಕಿರಿಯ ಸಹಾಯಕ ಪರೀಕ್ಷೆ ಗೋಲ್ಮಾಲ್: 9 ಜನ ಅರೆಸ್ಟ್, ತೋಟದ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್


ಕೊಡಗು ಜಿಲ್ಲೆಗೆ PFI ಎಂಟ್ರಿಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆಯಂತೆ. ಈಗಾಗಲೇ PFI ಸದಸ್ಯರು (PFI Activist) ಬಂದು ತಂಗಿರುವ ಬಗ್ಗೆಯೂ ಮಾಹಿತಿ ಸಿಕ್ಕಿರುವ ಹಿನ್ನೆಲೆ ಮೂರು ದಿನ ನಿಷೇಧಾಜ್ಞೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎರಡೂ ಪಕ್ಷಗಳ ಕಾರ್ಯಕ್ರಮ ರದ್ದು ಮಾಡುವಂತೆ ಸಲಹೆ ನೀಡಲಾಗಿದೆ. ನಿಷೇಧಾಜ್ಞೆ ಹಿನ್ನೆಲೆ ಕಾಂಗ್ರೆಸ್ ತನ್ನ ಮಡಿಕೇರಿ ಚಲೋ ಪ್ರತಿಭಟನೆಯನ್ನು ರದ್ದುಗೊಳಿಸಿದೆ.

Published by:Mahmadrafik K
First published: