Ancient Building: ರಾಮನಗರದಲ್ಲಿ ಪತ್ತೆಯಾಗಿದೆ ಟಿಪ್ಪು ಕಾಲದ ನೆಲಮಾಳಿಗೆ

ದಾಖಲೆಗಳನ್ನ ಪರಿಶೀಲನೆ ಮಾಡಿದ ತಹಶೀಲ್ದಾರ್ ವಿಜಯ್ ಕುಮಾರ್ ಇಲ್ಲಿ ನೆಲಮಾಳಿಗೆ ಪತ್ತೆಯಾಗಿದೆ ದಾಖಲೆಗಳನ್ನ ಪರಿಶೀಲನೆ ಮಾಡಿದ್ದೇವೆ. ಇದು 100 ವರ್ಷದ ಹಳೇ ಕಟ್ಟಡದ ರೀತಿ ಕಾಣುತ್ತಿದೆ.

ಪುರಾತನ ಕಟ್ಟಡ

ಪುರಾತನ ಕಟ್ಟಡ

  • Share this:

ರಾಮನಗರ (ಜು.7): ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ (UCO Bank) ಸಮೀಪ ಹಳೆಯ ನಿವೇಶನವೊಂದರಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡವೊಂದು (Ancient Building) ಪತ್ತೆಯಾಗಿದೆ. ಎಂ.ಜಿ. ರಸ್ತೆಯಲ್ಲಿ ನೆಲಮಾಳಿಗೆ ಪತ್ತೆ ಸ್ಥಳಕ್ಕೆ ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್, ನಗರಸಭೆ ಪೌರಾಯುಕ್ತ ನಂದಕುಮಾರ್ (Nandakumar) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದ ಮಾಲೀಕ ನವಾಜ್ ಅಹಮದ್ ರಿಂದ ಮಾಹಿತಿ ಪಡೆದ ಅಧಿಕಾರಿಗಳ ವರ್ಗ ಜಾಗದ ದಾಖಲೆ ಪರಿಶೀಲನೆ ಮಾಡಿದರು.


ನೆಲಮಾಳಿಗೆ ಪತ್ತೆ, ದಾಖಲೆಗಳ ಪರಿಶೀಲನೆ

ದಾಖಲೆಗಳನ್ನ ಪರಿಶೀಲನೆ ಮಾಡಿದ ತಹಶೀಲ್ದಾರ್ ವಿಜಯ್ ಕುಮಾರ್ ಇಲ್ಲಿ ನೆಲಮಾಳಿಗೆ ಪತ್ತೆಯಾಗಿದೆ ದಾಖಲೆಗಳನ್ನ ಪರಿಶೀಲನೆ ಮಾಡಿದ್ದೇವೆ. ಇದು 100 ವರ್ಷದ ಹಳೇ ಕಟ್ಟಡದ ರೀತಿ ಕಾಣುತ್ತಿದೆ. ಪುರಾತತ್ವ ಇಲಾಖೆ ಮೈಸೂರಿನಲ್ಲಿದೆ ಈಗ ಅವರಿಗೆ ಪತ್ರ ಬರೆಯುತ್ತೇವೆ. ಅವರು ಬಂದು ಪರಿಶೀಲನೆ ಮಾಡಿದ ಬಳಿಕ ಪೂರ್ಣ ಮಾಹಿತಿ ತಿಳಿಯಲಿದೆ ಎಂದು  ತಹಶೀಲ್ದಾರ್ ವಿಜಯ್ ಕುಮಾರ್ ಹೇಳಿಕೆ ನೀಡಿದರು. ಇನ್ನು ಇಲ್ಲಿ ಕುದುರೆ ಕಟ್ಟುತ್ತಿದ್ದರು, ನೀರಿನ‌ ಪೂರೈಕೆಗೆ ಟ್ಯಾಂಕ್ ಇತ್ತು ಅಂತಾರೆ ಆದರೆ ನಮಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಸ್ಥಳ ಮಾಲೀಕ ನವಾಜ್ ಅಹಮದ್ ನ್ಯೂಸ್ 18 ಗೆ ಹೇಳಿಕೆ ನೀಡಿದರು.


ನಗರದ ಜನರಲ್ಲಿ ಮೂಡಿದ ಕುತೂಹಲ, ಹಲವು ಊಹಾಪೋಹ :


ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಸಮೀಪ ಹಳೆಯ ನಿವೇಶನವೊಂದರಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡವೊಂದು ಪತ್ತೆಯಾಗಿದೆ.
ನವಾಜ್ ಅಹಮದ್ ಎಂಬುವವರ ಮಾಲೀಕತ್ವದ ಖಾಲಿ ನಿವೇಶನದಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ಕಟ್ಟಡ ಕಂಡುಬಂದಿದೆ. ಬಹಳ ಪುರಾತನ ಕಟ್ಟಡವಾಗಿದ್ದು, ಬಹಳ ಗಟ್ಟಿಮುಟ್ಟಾಗಿದ್ದು, ಒಳ ಭಾಗದಲ್ಲಿ ಗಾರೆ ಹಾಕಲಾಗಿದೆ.


ಇದನ್ನೂ ಓದಿ: Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಭೀತಿ; ವರುಣನ ಆರ್ಭಟಕ್ಕೆ ತತ್ತರಿಸಿದ ಜನ

ಹಲವಾರು ವರ್ಷ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದರೂ ಗೋಡೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ.ಇದು ತುಂಬಾ ಹಳೇ ಕಟ್ಟಡ. ಈ ಹಿಂದೆ ನಾವು ಬೇರೊಬ್ಬರ ಬಳಿ ಖರೀದಿ ಮಾಡಿದ್ದೆವು. ಆದರೆ, ಈಗ ಅಂಗಡಿ ನಿರ್ಮಾಣ ಮಾಡಲು ಪಾಯ ತೆಗೆಸುವಾಗ ಸಣ್ಣ ಕಿಂಡಿ ಕಂಡು ಬಂತು. ಆಗ ಇದು ಬೆಳಕಿಗೆ ಬಂದಿದೆ. ನಮಗೆ ಇದರಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ ಮಾಲೀಕರು.


ಸುಮಾರು 1930 ರಲ್ಲಿ ನಗರಸಭೆಯ ನೀರಿನ ಟ್ಯಾಂಕ್​ನ್ನು ಇಲ್ಲಿ ನಿರ್ಮಾಣ ಮಾಡಿದ್ದರು ಎಂದು ಕೆಲವರು ನಮಗೆ ತಿಳಿಸಿದ್ದರು. ನಂತರ 1960 ರಲ್ಲಿ ಈ ಜಾಗ ಅಬ್ದುಲ್ ಅಜೀಂ ಎನ್ನುವರು ನಗರಸಭೆಯ ಹರಾಜಿನಲ್ಲಿ ತೆಗೆದುಕೊಂಡಿದ್ದರು ತದ ನಂತರ ತಮ್ಮ ಸಂಬಂಧಿಗೆ ಗಿಫ್ಟ್‌ ಡೀಡ್ ಮಾಡಿದ್ದರು. ಈ ಜಾಗವನ್ನು ನಾವು 2009 ರಲ್ಲಿ ಖರೀದಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಟಿಪ್ಪು ಕಾಲದ ಶಸ್ತ್ರಗಾರ ?


ನೆಲದಾಳದಲ್ಲಿ ಪತ್ತೆಯಾಗಿರುವ ಕಟ್ಟಡ ಯಾವುದು ಎಂಬುದು ಇನ್ನೂ ನಿಖರವಾಗಿಲ್ಲದಿದ್ದರೂ ಕಟ್ಟಡ ರೂಪುರೇಷೆ ಗಮನಿಸಿದರೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್​ ಕಾಲದ ಮದ್ದಿನ ಮನೆಯ ರೀತಿ ಗೋಚರಿಸುತ್ತಿದೆ. ಅಲ್ಲದೇ ಈ ಭಾಗದಲ್ಲಿ ಟಿಪ್ಪು ಅಳ್ವಿಕೆಯ ಕುರುಹು ಇರುವುದರಿಂದ ಬಹುತೇಕ ಟಿಪ್ಪು ಕಾಲದ ಶಸ್ತ್ರಗಾರ ಇರಬೇಕು ಎನ್ನಲಾಗುತ್ತಿದೆ.


ಇದನ್ನೂ ಓದಿ: Dakshina Kannada Rains: ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ರಜೆ ಮುಂದುವರಿಕೆ

ರಾಮನಗರ ಪ್ರದೇಶವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ಯಾರಿ ಕ್ಲೂಸ್ ಆಳ್ವಿಕೆ ನಡೆಸಿದ ಹಿನ್ನೆಲೆಯಲ್ಲಿ ಕ್ಲೂಸ್ ಪೇಟೆ ಎಂಬ ಹೆಸರು ಇತ್ತು. ಅದಕ್ಕೆ ಸಾಕ್ಷಿಯಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶಾಸನವು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದ್ದು, ಅದನ್ನು ಸಂರಕ್ಷಣೆ ಮಾಡಬೇಕಾಗಿದೆ. ಇಂದು ಪತ್ತೆಯಾಗಿರುವ ಕಟ್ಟಡ ರಾಮನಗರದ ಇತಿಹಾಸವನ್ನು ಮತ್ತೆ ಕೆದಕಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಅಧಿಕಾರಿಗಳ ವರ್ಗ ಈ ವಿಚಾರವಾಗಿ ಗಂಭೀರವಾಗಿ ಕ್ರಮವಹಿಸಬೇಕಿದೆ.


ವರದಿ- ಎ.ಟಿ ವೆಂಕಟೇಶ್

Published by:Pavana HS
First published: