ಬೆಂಗಳೂರು: ಶುಕ್ರವಾರ ಮಧ್ಯರಾತ್ರಿ ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋರಮಂಗಲದ (Koramanagal, Bengaluru) ಎಂಟನೇ ಬ್ಲಾಕ್ನಲ್ಲಿ ನಡೆದಿದೆ. ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿಯಿಂದ ಯುವತಿ (Young Girl) ಬಿದ್ದು ಸಾವನ್ನಪ್ಪಿರೋದು, ಇದು ಆತ್ಮಹತ್ಯೆಯೋ? ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 28 ವರ್ಷದ ಅರ್ಚನಾ ಧೀಮನ್ ಸಾವನ್ನಪ್ಪಿದ ಯುವತಿ. ದುಬೈನ (Dubai) ಖಾಸಗಿ ಏರ್ಲೈನ್ಸ್ನಲ್ಲಿ (Airlines) ಕೆಲಸ ಮಾಡಿಕೊಂಡಿದ್ದ ಅರ್ಚನಾ, ಕೋರಮಂಗಲದಲ್ಲಿರುವ ಗೆಳೆಯನ ಭೇಟಿಗೆ ಬಂದಿದ್ದರು. ಅರ್ಚನಾ ಗೆಳೆಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ (Private Company) ಕೆಲಸ ಮಾಡಿಕೊಂಡಿದ್ದು, ಕೋರಮಂಗಲದ ರೇಣುಕಾ ರೆಸಿಡೆನ್ಸಿಯಲ್ಲಿ ವಾಸವಾಗಿದ್ದನು. ಮೃತ ಅರ್ಚನಾ ಧೀಮನ್ ಮೂಲತಃ ಹಿಮಾಚಲ ಪ್ರದೇಶದವರು (Himachal Pradesh) ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ಸುಮಾರು 12 ಗಂಟೆಗೆ ಅರ್ಚನಾ ಧೀಮನ್ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಶವವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿರಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಗೆಳೆಯನ ಸುತ್ತ ಅನುಮಾನದ ಹುತ್ತ
ಇನ್ನು ಅರ್ಚನಾ ಗೆಳೆಯ ಆದೀಶ್ ಸುತ್ತ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಅರ್ಚನಾ ಗೆಳೆಯ ಆದೀಶ್ನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಕಳೆದ ಕೆಲ ವರ್ಷಗಳಿಂದ ಅರ್ಚನಾ ಮತ್ತು ಆದೀಶ್ ಪ್ರೀತಿಸುತ್ತಿದ್ರು. ಇದೀಗ ಗೆಳೆಯನ ಭೇಟಿಗೆ ಬಂದ ಅರ್ಚನಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದೀಶ್ ಕೇರಳ ಮೂಲದವನು ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಇಬ್ಬರ ಮಧ್ಯೆ ಏನಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದು ಅರ್ಚನಾಳನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಲಾಗಿದೆಯಾ ಎಂಬ ಆಯಾಮಾದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಅಪಾರ್ಟ್ಮೆಂಟ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.
700 ಕೆಜಿ ಗೋಮಾಂಸ ವಶ
ಒಂದು ಲಕ್ಷ ನಲವತ್ತು ಸಾವಿರ ಮೌಲ್ಯದ 700 ಕೆಜಿ ಗೋಮಾಂಸವನ್ನ ವಶಪಡಿಸಿಕೊಂಡಿರೋ ಘಟನೆ ಭಟ್ಕಳದ ಡೊಂಗರಪಟ್ಟಿ ಕ್ರಾಸ್ ಬಳಿ ನಡೆದಿದೆ. ಗೋಮಾಂಸ ಸಾಗಾಟಕ್ಕೆ ಬಳಿಸಿದ್ದ ವಾಹನವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಲ್ಡಿಂಗ್ ಮೇಲಿಂದ ಬಿದ್ದು ತಲೆಗೆ ಗಾಯ
ಆಟವಾಡುತ್ತಾ ಅಪಾರ್ಟ್‌ಮೆಂಟ್ ಮೇಲಿಂದ ಮಗು ಬಿದ್ದಿರುವ ಘಟನೆ ಬೆಂಗಳೂರಿನ ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟವಾಡುತ್ತಾ ರಾಹುಲ್ ಎಂಬ ಬಾಲಕ ಮೇಲಿಂದ ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡ್ತಿದ್ರು. ತಂದೆ- ತಾಯಿ ಮನೆಯಲ್ಲಿದ್ದಾಗಲೇ ಘಟನೆ ನಡೆದಿದೆ. ತಾಯಿ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದಾಗ ಮನೆಯ ಮುಂದೆ ಹಾಕಿದ್ದ ಚೇರ್ ಹತ್ತಿ ಮಗು ಆಯತಪ್ಪಿ ಬಿದ್ದಿದೆ.
ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್ ಅಂದರ್
ಯುವತಿಯರನ್ನು (Women) ಮುಂದಿಟ್ಟುಕೊಂಡು ಅಮಾಯಕರನ್ನು ಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು (Gang) ಪೊಲೀಸರು (Police) ಬಲೆಗೆ ಕೆಡವಿದ್ದಾರೆ. ಯುವತಿಯರ ಅರೆ ನಗ್ನ ಫೋಟೋ (Photo) ಕಳಿಸಿ ಅಮಾಯಕರನ್ನು ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ಅನ್ನು ಬೇಗೂರು ಪೊಲೀಸರು (Begur Police) ಕಾರ್ಯಚರಣೆ ನಡೆಸಿ ಬಂಧನ ಮಾಡಿದ್ದಾರೆ.
ಇದನ್ನೂ ಓದಿ: Robbery Case: ಬೆಂಗಳೂರಿನ ಉದ್ಯಮಿಯ ಮನೆ ದೋಚಿ ಒಡಿಶಾದಲ್ಲಿ ಬಂಗಲೆ ಕಟ್ಟುತ್ತಿದ್ದ ಖದೀಮರ ಬಂಧನ
ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಬಡೋ ಅಂಡ್ ಟ್ಯಾಗಡ್ ವೆಬ್ ಸೈಟ್ ಮೂಲಕ ಗಿರಾಕಿಗಳನ್ನ ಬಲೆಗೆ ಬೀಳಿಸಿಕೊಳ್ಳಲುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ