Monkeypox: ಬೆಂಗಳೂರಿಗೂ ಕಾಲಿಟ್ಟಿತೇ ಮಂಕಿಪಾಕ್ಸ್? ಶಂಕಿತ ರೋಗ ಲಕ್ಷಣವಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು!

ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಶಂಕಿತ ರೋಗಲಕ್ಷಣ ಕಂಡು ಬಂದಿದೆ ಎನ್ನಲಾಗಿದೆ. ಶಂಕಿತ ರೋಗ ಲಕ್ಷಣ ಕಂಡು ಬಂದ ಆಫ್ರಿಕನ್ ಪ್ರಜೆಯೊಬ್ಬರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

  • Share this:
ಬೆಂಗಳೂರು: ಇಡೀ ವಿಶ್ವದಾದ್ಯಂತ ಮಂಕಿಪಾಕ್ಸ್ ಕಾಯಿಲೆಯ (Monkeypox disease) ಅಬ್ಬರ ಜೋರಾಗುತ್ತಿದೆ. ಇದುವರೆಗೂ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಮಂಕಿಪಾಕ್ಸ್ ಸೋಂಕಿಗೆ (Infection) ತುತ್ತಾಗಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ (World Health Organization) ವರದಿ (Report) ಹೇಳಿದೆ. ಅಮೆರಿಕಾ, ಆಫ್ರಿಕಾ, ಯುರೋಪ್, ಪೂರ್ವ ಮೆಡಿಟರೇನಿಯನ್ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳು ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯ 42 ಸದಸ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಭಾರತದಲ್ಲೂ (India) 4 ಮಂಕಿಪಾಕ್ಸ್ ಕೇಸ್‌ಗಳು ಪತ್ತೆಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಲ್ಲೂ (Bengaluru) ಈಗ ಮಂಕಿಪಾಕ್ಸ್ ಟೆನ್ಶನ್ ಶುರುವಾಗಿದೆ. ಬೆಂಗಳೂರಿನಲ್ಲಿದ್ದ ಆಫ್ರಿಕಾ (Africa) ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡು ಬಂದಿದೆ ಅಂತ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವರದಿಗಾಗಿ ವೈದ್ಯರು ನಿರೀಕ್ಷೆ ಮಾಡುತ್ತಿದ್ದಾರೆ.

ಬೆಂಗಳೂರಲ್ಲಿ ಶಂಕಿತ ಮಂಕಿಪಾಕ್ಸ್ ರೋಗಲಕ್ಷಣ ಪತ್ತೆ

ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಶಂಕಿತ ರೋಗಲಕ್ಷಣ ಕಂಡು ಬಂದಿದೆ ಎನ್ನಲಾಗಿದೆ. ಶಂಕಿತ ರೋಗ ಲಕ್ಷಣ ಕಂಡು ಬಂದ ಆಫ್ರಿಕನ್ ಪ್ರಜೆಯೊಬ್ಬರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಆಫ್ರಿಕಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿ

ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಆಫ್ರಿಕನ್ ವ್ಯಕ್ತಿಯೊಬ್ಬರು ಜುಲೈ 4 ರಂದು ಇಥಿಯೋಪಿಯಾದಿಂದ ಬಂದಿದ್ದರು. ಅವರು ಡಯಾಲಿಸಿಸ್ ಮತ್ತು ಪೂರ್ವ ಕಸಿ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಈ ವೇಳೆ ಅವರ ಚರ್ಮದ ಮೇಲೆ ದದ್ದುಗಳು ಸೇರಿದಂತೆ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡು ಬಂದಿವೆ ಎನ್ನಲಾಗಿದೆ.

ಇದನ್ನೂ ಓದಿ: Monkeypox V/s Marburg Virus: ಮಾನವರಿಗೆ ಯಾವುದು ಮಾರಣಾಂತಿಕ? ಮಂಕಿಪಾಕ್ಸ್ ಅಥವಾ ಮಾರ್ಬರ್ಗ್?

ಶಂಕಿತ ವ್ಯಕ್ತಿಯ ಮಾದರಿ ಪರೀಕ್ಷೆಗೆ ರವಾನೆ

ಅವರು ಇಥಿಯೋಪಿಯಾದಿಂದ ಬಂದವರಾಗಿರುವುದರಿಂದ ಮತ್ತು ವೈರಸ್‌ನ ಕಾವು ಕಾಲಾವಧಿಯು ಕೆಲವೊಮ್ಮೆ 20 ದಿನಗಳವರೆಗೆ ವಿಸ್ತರಿಸುತ್ತದೆ. ಅವರ ರಕ್ತ ಮತ್ತು ಚರ್ಮದ ಗಾಯಗಳ ಸ್ಯಾಂಪಲ್‌ಗಳನ್ನು ಪುಣೆಯ ಎನ್‌ಐವಿ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ರಿಪೋರ್ಟ್ ಇನ್ನಷ್ಟೇ ಬರಬೇಕಿದ್ದು, ವೈದ್ಯರು ಆ ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದು ಎರಡನೇ ಶಂಕಿತ ಪ್ರಕರಣ

ಇಲ್ಲಿಯವರೆಗೆ, ಇದು ಕರ್ನಾಟಕದಿಂದ ಪರೀಕ್ಷೆಗೆ ಕಳುಹಿಸಲಾದ ಮಂಕಿಪಾಕ್ಸ್‌ನ ಎರಡನೇ ಶಂಕಿತ ಮಾದರಿಯಾಗಿದೆ. ಮೊದಲ ಮಾದರಿಯು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣದ ಇತಿಹಾಸ ಹೊಂದಿರುವ ಬೆಂಗಳೂರಿನ ವ್ಯಕ್ತಿಯದ್ದಾಗಿತ್ತು ಮತ್ತು ಕಳೆದ ವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಪುಣೆಯ NIVಗೆ ಕಳುಹಿಸಲಾಗಿದೆ. ವರದಿ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳಿಂದ ಹೈ ಅಲರ್ಟ್

ಶಂಕಿತ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ. ನಾವು ಹೆಚ್ಚಿನ ಎಚ್ಚರಿಕೆಯಲ್ಲಿದ್ದೇವೆ. ಶಂಕಿತ ಪ್ರಕರಣಗಳು ಕಂಡುಬಂದಾಗ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡುವಂತೆ ನಾವು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Monkeypox ಸೋಂಕು ಇವರಿ'ಗೇ' ಜಾಸ್ತಿ ಬರೋದಾ? ಸಂಚಲನ ಮೂಡಿಸಿದ WHO ರಿಪೋರ್ಟ್

ಲಕ್ಷಣಗಳನ್ನು ಬದಲಾಯಿಸಿಕೊಂಡಿತಾ ಮಂಕಿಪಾಕ್ಸ್?

ಈ ಹಿಂದೆ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಸುಸ್ತು ಹಾಗೂ ದದ್ದುಗಳು ಮಂಕಿಪಾಕ್ಸ್​ನ ಲಕ್ಷಣಗಳು ಎನ್ನಲಾಗಿತ್ತು. ಆದರೆ, ಆಫ್ರಿಕನ್ ಪ್ರದೇಶಗಳಲ್ಲಿ ಮೊದಲು ಪತ್ತೆಯಾದ ಮಂಕಿಪಾಕ್ಸ್  ರೋಗ ಲಕ್ಷಣಗಳಿಗಿಂತಲೂ ಈಗಿನ ಲಕ್ಷಣಗಳು ಭಿನ್ನವಾಗಿವೆ. ಇದಕ್ಕಾಗಿ 197 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಎಲ್ಲಾ 197 ಜನರೂ ಸರಾಸರಿ 38 ವರ್ಷ ವಯಸ್ಸಿನ ಪುರುಷರು. ಭಾಗವಹಿಸಿದವರಲ್ಲಿ 196 ಜನರು ಸಲಿಂಗಕಾಮಿ ಅಥವಾ ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಪುರುಷರು ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಮಾತ್ರ ಸಲಿಂಗಿಯಲ್ಲದ ರೋಗಿಯಾಗಿದ್ದರು.
Published by:Annappa Achari
First published: