Bengaluru Accident: ಸಿನಿಮಾ ನೋಡಿ ವಾಪಸ್​ ಆಗ್ತಿದ್ದಾಗ ನವದಂಪತಿಗೆ ಅಪಘಾತ, ಪತ್ನಿ ಸಾವು ಪತಿ ಗಂಭೀರ

ಬೆಂಗಳೂರಿನಲ್ಲಿ ದಾರುಣ ಘಟನೆ ಸಂಭವಿಸಿದೆ. ನವದಂಪತಿ ಸಿನಿಮಾ ನೋಡಿ ವಾಪಸ್ ಬರ್ತಿದ್ದಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಭೀಕರ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪತಿ ಸ್ಥಿತಿ ಚಿಂತಾಜನಕವಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಶ್ವೇತಾ

ಅಪಘಾತದಲ್ಲಿ ಸಾವನ್ನಪ್ಪಿದ ಶ್ವೇತಾ

  • Share this:
ಅದು ಬದುಕಿನ ಸುಂದರ ಕನಸುಗಳನ್ನ ಹೊತ್ತ ನವಜೋಡಿ (New couple). ಕೇವಲ 4 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆ (Marriage) ಸಂಭ್ರಮವನ್ನು ಮುಗಿಸಿದ್ರು. ಹೀಗಿರೋವಾಗ ನಿನ್ನೆ ರಾತ್ರಿ ಸಿನಿಮಾ (Movie) ನೋಡಿ ಖುಷಿ ಖುಷಿಯಿಂದ ಬೈಕ್ ಏರಿ ಮನೆಯತ್ತ (Home) ಹೊರಟಿದ್ರು. ಆದ್ರೆ ಆ ವೇಳೆಯೇ ಯಮರಾಜ ಅಟ್ಟಹಾಸ ಮೆರೆದಿದ್ದ. ನೋಡನೋಡ್ತಿದ್ದಂತೆ ಅಪರಿಚಿತ ವಾಹನವೊಂದು ನವಜೋಡಿಯ ಮೇಲೆ ಅಪ್ಪಳಿಸಿದೆ. ಈ ಭೀಕರ ರಸ್ತೆ (Accident) ಅಪಘಾತದಲ್ಲಿ ಪತ್ನಿ ಶ್ವೇತಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ (Death), ಪತಿ ಆನಂದ್​​ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಬಾಣಸವಾಡಿಯ ಕಲ್ಯಾಣನಗರದ ಬಳಿ ದುರ್ಘಟನೆ ನಡೆದುಹೋಗಿದೆ. ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆಯ ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ದಾರುಣ ಘಟನೆ ಸಂಭವಿಸಿದೆ. ನವದಂಪತಿ ಸಿನಿಮಾ ನೋಡಿ ವಾಪಸ್ ಬರ್ತಿದ್ದಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಭೀಕರ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪತಿ ಸ್ಥಿತಿ ಚಿಂತಾಜನಕವಾಗಿದೆ.

ಸಿನಿಮಾ ನೋಡಲು ಹೋಗಿದ್ದ ಆನಂದ್-ಶ್ವೇತಾ

ನಿನ್ನೆ ರಾತ್ರಿ ಆನಂದ್ ಮತ್ತು ಶ್ವೇತಾ ದಂಪತಿ ಸಿನಿಮಾ ನೋಡಲು ಹೋಗಿದ್ರು. ನಂತರ ಸಿನಿಮಾ ಮುಗಿಸಿಕೊಂಡು ರಾತ್ರಿ ಖುಷಿ ಖುಷಿಯಿಂದ ಬೈಕ್​ನಲ್ಲಿ ವಾಪಸ್ ಮನೆಯ ಕಡೆ ಹೊರಟಿದ್ರು. ಈ ವೇಳೆ ಬಾಣಸವಾಡಿಯ ಕಲ್ಯಾಣನಗರದ ಬಳಿ ಹಿಂದಿನಿಂದ ಬಂದ ಅಪರಿಚಿತ ವಾಹನ ಇವರ ಬೈಕ್​​ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ.

An accident Bengaluru happened to the new couple while returning from watching the movie
ಭೀಕರ ಅಪಘಾತಕ್ಕೆ ಶ್ವೇತಾ ಬಲಿ


ಇದನ್ನೂ ಓದಿ: ಮಹಾಕಾಲನಿಗೆ ಅಪಮಾನ ಮಾಡಿದ್ರಾ ಹೃತಿಕ್ ರೋಷನ್? ಜೊಮ್ಯಾಟೊ ಜಾಹೀರಾತಿಗೆ ಬೈಕಾಟ್ ಬಿಸಿ!

ಡಿಕ್ಕಿ ರಭಸಕ್ಕೆ ಲಾರಿಗೆ ಅಪ್ಪಳಿಸಿದ್ದ ಶ್ವೇತಾ

ಇದೇ ಸಮಯಕ್ಕೆ ಕಲ್ಯಾಣನಗರದ ಬಳಿ ಊಟ ತರೋಣ ಅಂತಾ ಲಾರಿಯನ್ನ ಡ್ರೈವರ್ ಇಲ್ಲೇ ಪಾರ್ಕ್ ಮಾಡಿದ್ದರು. ಡ್ರೈವರ್ ಲಾರಿಯಿಂದ ಇಳಿದು  ಹೋಟೆಲ್ ಒಳಗೆ ಹೋಗಿದ್ದರು. ಈ ವೇಳೆ ಅಪರಿಚಿತ ವಾಹನ ಶ್ವೇತಾ-ಆನಂದ್ ದಂಪತಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ನಿಂತಿದ್ದ ಲಾರಿಗೆ ಶ್ವೇತಾ ಅಪ್ಪಳಿಸಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಭೀಕರ ಅಪಘಾತದಲ್ಲಿ ಪತಿಗೆ ಗಂಭೀರ ಗಾಯ

ಅಪಘಾತದಲ್ಲಿ ಪತಿ ಆನಂದ್​ಗೆ ಗಂಭೀರ ಗಾಯವಾಗಿದೆ. ಸದ್ಯ ಆನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನಂದ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹೆಬ್ಬಾಳ ಬಳಿ ವಾಸವಿದ್ದ ನವದಂಪತಿ ಕಂಪನಿಯೊಂದರಲ್ಲಿ ಇಬ್ಬರೂ ಕೆಲಸಕ್ಕೆ ಹೋಗ್ತಿದ್ರಂತೆ.

ಶ್ವೇತಾ ಹೆತ್ತವರ ಕಣ್ಣೀರು

ಸಾವನ್ನಪ್ಪಿದ ಶ್ವೇತಾ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಇದ್ದ ಒಬ್ಬಳೇ ಒಬ್ಬ ಮಗಳಿಗೆ ಹೀಗಾಯ್ತಲ್ಲ ಅಂತಾ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಯ ಶವಾಗಾರದ ಬಳಿ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಇದ್ದ ಒಬ್ಬಳೇ ಮಗಳನ್ನ ಶ್ವೇತಾ ಪೋಷಕರು ಆನಂದ್​​ಗೆ ಮದುವೆ ಮಾಡಿಕೊಟ್ಟಿದ್ರು.

ಘಟನೆ ಬಗ್ಗೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನಕ್ಕೆ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ಮಾಜಿ ಕಾರ್ಪೊರೇಟರ್​ ಪುತ್ರನ ಕಾರು ಅಪಘಾತ, ಇಬ್ಬರಿಗೆ ಗಾಯ

ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ಬಳಿ ಮಾಜಿ ಕಾರ್ಪೊರೇಟರ್ ಅಬ್ದುಲ್ ವಾಜೀದ್​​ಗೆ ಸೇರಿದ ಕಾರು ಅಪಘಾತವಾಗಿದೆ. ಕಾರು ಬೈಕ್​​ಗೆ ಡಿಕ್ಕಿಯಾಗಿದೆ. ಅಬ್ದುಲ್ ವಾಜೀದ್ ಪುತ್ರ ಯಾಯೀದ್ ಕಾರು ಚಲಾಯಿಸುತ್ತಿದ್ದ. ಘಟನೆಯಲ್ಲಿ ಬೈಕ್​​ನಲ್ಲಿದ್ದ ಯುವಕ ಯುವತಿ ಇಬ್ಬರಿಗೂ ಗಾಯವಾಗಿದೆ. ಯಶವಂತ(28) ಹಾಗೂ ನಿಖಿತಾ(21) ಗಾಯಗೊಂಡ ಬೈಕ್ ಸವಾರರು.

ಇದನ್ನೂ ಓದಿ: ಪ್ರೇಯಸಿಯೊಂದಿಗೆ ಸರಸವಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಪಾತಕಿ, ಲವ್ವಿಡವ್ವಿಗೆ ಪೊಲೀಸರೇ ಸಾಥ್!

ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಘಟನೆ

ಜಯನಗರದಿಂದ ವಸಂತನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಅಪಘಾತದ ಬಳಿಕ ವಾಜೀದ್ ಮಗ, ಯುವಕ-ಯುವತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Thara Kemmara
First published: