ಅಮುಲ್ (Amul) ಕರ್ನಾಟಕಕ್ಕೆ (Karnataka) ಪ್ರವೇಶ ಪಡೆಯುತ್ತಿದ್ದಂತೆಯೇ ರಾಜಕೀಯವಾಗಿ ರಂಗು ಪಡೆದು ಇನ್ನಷ್ಟು ವಿವಾದಕ್ಕೊಳಗಾಗಿದೆ. ನಂದಿನಿ ಬ್ರ್ಯಾಂಡ್‌ನೊಂದಿಗೆ ವಿಲೀನಗೊಳ್ಳಲಿದೆ ಹಾಗೂ ಇವೆರಡೂ ಇನ್ನುಮುಂದೆ ಪಾಲುದಾರಿಕೆಯಲ್ಲಿ ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲಿವೆ ಮೊದಲಾದ ಊಹಾಪೋಹಗಳು ತನ್ನಷ್ಟಕ್ಕೆ ಹಬ್ಬಿದವು. ಸಾಮಾಜಿಕ ತಾಣದಲ್ಲಿ (Social Media) ಅಮುಲ್ ವಿರುದ್ಧ ಬಾಯ್‌ಕಾಟ್ ಅಭಿಯಾನ ಜರುಗಿದವು.
ನಂದಿನಿ ಪಾರ್ಲರ್‌ನಲ್ಲಿ ಐಸ್‌ಕ್ರೀಮ್ ಸೇವಿಸಿದ ರಾಹುಲ್ ಗಾಂಧಿ ಹಾಗೂ ಬೆಂಬಲಿಗರು
ಇದೆಲ್ಲಾ ವಿವಾದಗಳ ನಡುವೆಯೇ ಬೆಂಗಳೂರಿನ ಜೆಪಿ ನಗರದಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಐಸ್‌ಕ್ರೀಮ್ ಸವಿಯುತ್ತಿರುವ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿದೆ.
ಮಾಜಿ ಸಂಸದರು, ಕಾಂಗ್ರೆಸ್ ರಾಜ್ಯ ಪಕ್ಷದ ಮುಖ್ಯಸ್ಥರಾದ ಡಿ.ಕೆ.ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಂದಿನಿ ಪಾರ್ಲರ್‌ನಲ್ಲಿ ಐಸ್‌ಕ್ರೀಮ್ ಸವಿಯುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ವಿಶ್ವದ ಬಡ ರಾಷ್ಟ್ರಗಳು ಆದಾಯದ 16% ಸಾಲದ ಮೇಲೆ ಖರ್ಚು ಮಾಡುತ್ತವೆ; ಸಮೀಕ್ಷೆಯಿಂದ ಬಯಲು
ಕೋಲಾರದಲ್ಲಿ ರ‍್ಯಾಲಿ ಕೈಗೊಂಡಿರುವ ಮಾಜಿ ಸಂಸದ
ರಾಹುಲ್ ಗಾಂಧಿಯವರನ್ನು ಸಂಸದರ ಸ್ಥಾನದಿಂದ ಅನರ್ಹಗೊಳಿಸಿದ 2019 ರ ವಿವಾದಾತ್ಮಕ ಭಾಷಣದ ನಂತರ ಇದೇ ಮೊದಲ ಬಾರಿಗೆ ಕೋಲಾರಕ್ಕೆ ಹಿಂತಿರುಗಿರುವ ಗಾಂಧಿ, ಎರಡು ದಿನಗಳ ಕರ್ನಾಟಕ ಪ್ರವಾಸಗಳನ್ನು ಕೈಗೊಂಡಿದ್ದು, ಕೋಲಾರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಈ ನಡುವೆ ಬೆಂಗಳೂರಿಗೆ ಭೇಟಿ ನೀಡಿರುವ ಮಾಜಿ ಸಂಸದ ರಾಹುಲ್ ಗಾಂಧಿ ನಂದಿನಿ ಔಟ್‌ಲೆಟ್‌ನಲ್ಲಿ ತಾವು ಹಾಗೂ ಪಕ್ಷದ ಇನ್ನಿತರ ಕಾರ್ಯಕರ್ತರು ಐಸ್‌ಕ್ರೀಮ್ ಸವಿಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಕರ್ನಾಟಕದ ಹೆಮ್ಮೆ ನಂದಿನಿ ಅತ್ಯುತ್ತಮ ಎಂಬುದಾಗಿ ಶೀರ್ಷಿಕೆ ನೀಡಿದ್ದಾರೆ.
ಬಿಜೆಪಿ ಸರಕಾರ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ
ಈ ಹಿಂದೆ ಶಿವಕುಮಾರ್ ಚುನಾವಣಾ ಪ್ರಚಾರದ ವೇಳೆ ನಂದಿನಿ ಸ್ಟೋರ್‌ಗೆ ಭೇಟಿ ನೀಡಿ ಹಾಲಿನ ಉತ್ಪನ್ನಗಳ ಖರೀದಿ ಮಾಡಿದ್ದರು. ಈ ಬ್ರ್ಯಾಂಡ್ ಕರ್ನಾಟಕದ ರೈತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಅವರು ಆ ಸಂದರ್ಭದಲ್ಲಿ ತಿಳಿಸಿದ್ದರು.
ನಂದಿನಿ ಸ್ಟೋರ್‌ಗೆ ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ ಎಂದು ತಿಳಿಸಿರುವ ಅಧ್ಯಕ್ಷರು ನಮ್ಮ ರೈತರ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ನಂದಿನಿ ಬ್ರ್ಯಾಂಡ್ ಅನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ. ಕನ್ನಡಿಗರು ಎಂದಿಗೂ ಸ್ವಾಭಿಮಾನಿಗಳು ಹಾಗೂ ಅದನ್ನು ಬಿಟ್ಟು ಬದುಕುವುದಿಲ್ಲ ಎಂಬುದನ್ನು ಸರಕಾರ ನೆನಪಿನಲ್ಲಿರಿಸಿಕೊಳ್ಳಲಿ ಎಂದು ಶಿವಕುಮಾರ್ ಕಟು ವಾಗ್ದಾಳಿ ನಡೆಸಿದ್ದಾರೆ.
ಪಕ್ಷಗಳ ನಡುವಿನ ಗದ್ದಲ
ಗುಜರಾತ್ ಮೂಲದ ಡೈರಿ ಬ್ರ್ಯಾಂಡ್ ಅಮುಲ್ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಮನೆ ಮನೆಗೆ ಬ್ರ್ಯಾಂಡ್‌ನ ಉತ್ಪನ್ನಗಳು ದೊರೆಯಲಿವೆ ಎಂಬ ಘೋಷಣೆಯ ಬೆನ್ನಲ್ಲೇ ದಕ್ಷಿಣ ರಾಜ್ಯದಲ್ಲಿ ನಾಟಕೀಯ ತಿರುವು ಆರಂಭವಾಯಿತು.
#KarnatakaAssemblyElections | Amid row over the entry of Amul in the state, Congress leader Rahul Gandhi, state party chief DK Shivakumar and general secretary KC Venugopal visited Nandani Milk parlour in JP Nagar, Bengaluru. pic.twitter.com/JzfJrTP5uf
— ANI (@ANI) April 16, 2023
ನಂದಿನಿ ಅಸ್ತಿತ್ವ ಕಳೆದುಕೊಳ್ಳಬಹುದು ಎಂಬ ಆತಂಕ
ಕರ್ನಾಟಕದ ಮನೆ ಮನೆಯಲ್ಲಿ ನಂದಿನಿ ಬ್ರ್ಯಾಂಡ್ ಬರಿಯ ಹಾಲು ಹಾಗೂ ಹಾಲಿನ ಉತ್ಪನ್ನ ಮಾತ್ರವಾಗಿಲ್ಲದೆ, ಪ್ರತಿಯೊಬ್ಬರ ಭಾವನೆಗಳೊಂದಿಗೆ ಮಿಳಿತಗೊಂಡಿದೆ. ಅಮುಲ್ ಕರ್ನಾಟಕಕ್ಕೆ ಪ್ರವೇಶ ಪಡೆದುಕೊಂಡರೆ ನಂದಿನಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು ಎಂಬುದು ಕನ್ನಡಿಗ ವರ್ಗಗಳಲ್ಲಿ ಹೆಚ್ಚುತ್ತಿರುವ ಆತಂಕವಾಗಿದೆ.
ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿರುವ ಪಕ್ಷಗಳು
ಇಂತಹ ವಿವಾದಗಳನ್ನು ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ತಿಳಿಸಿರುವ ಬಿಜೆಪಿ, ನಂದಿನಿ ಹಾಗೂ ಅಮುಲ್ ದೇಶದ ಕ್ಷೀರ ಕ್ರಾಂತಿಯಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಂಡ ಬ್ರ್ಯಾಂಡ್‌ಗಳಾಗಿವೆ ಎಂದು ತಿಳಿಸಿದೆ. ಕರ್ನಾಟಕದಲ್ಲಿ ಅಮುಲ್‌ಗೆ ಅವಕಾಶ ನೀಡುವ ಬಿಜೆಪಿ ನಂದಿನಿಯನ್ನು ನಾಶಮಾಡಲು ಬಯಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ