• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Amul vs Nandini: ಅಮುಲ್ & ನಂದಿನಿ ವಿವಾದ ಚುನಾವಣೆ ಗಿಮಿಕ್ ಎಂದ ನಿರ್ಮಲಾ ಸೀತಾರಾಮನ್

Amul vs Nandini: ಅಮುಲ್ & ನಂದಿನಿ ವಿವಾದ ಚುನಾವಣೆ ಗಿಮಿಕ್ ಎಂದ ನಿರ್ಮಲಾ ಸೀತಾರಾಮನ್

ಒಟ್ಟಿನಲ್ಲಿ ಚುನಾವಣೆಗಾಗಿ ಭಾವನಾತ್ಮಕವಾಗಿ ಬ್ರ್ಯಾಂಡ್‌ಗಳ ನಡುವೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಪಾದಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗಾಗಿ ಭಾವನಾತ್ಮಕವಾಗಿ ಬ್ರ್ಯಾಂಡ್‌ಗಳ ನಡುವೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಪಾದಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗಾಗಿ ಭಾವನಾತ್ಮಕವಾಗಿ ಬ್ರ್ಯಾಂಡ್‌ಗಳ ನಡುವೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಪಾದಿಸಿದ್ದಾರೆ.

 • Trending Desk
 • 3-MIN READ
 • Last Updated :
 • Karnataka, India
 • Share this:

ರಾಜ್ಯದಲ್ಲಿ ಅಮುಲ್ (Amul) ಹಾಗೂ ನಂದಿನಿ ಬ್ರ್ಯಾಂಡ್‌ಗಳ (Nandini Brand) ನಡುವಿನ ವಿವಾದ ಇನ್ನೂ ಬಗೆಹರಿದಂತೆಯೇ ಕಾಣುತ್ತಿಲ್ಲ. ದೇಶದ ಕ್ಷೀರ ಕ್ರಾಂತಿಗೆ ಕಾರಣೀಕರ್ತವಾದ ಈ ಎರಡೂ ಬ್ರ್ಯಾಂಡ್‌ಗಳು (Brands) ಇದೀಗ ಪೈಪೋಟಿಗೆ ಇಳಿದುಬಿಟ್ಟಿವೆ. ಯಾರು ಮೇಲೆ ಯಾರು ಕೆಳಗೆ ಎಂಬ ಅಸಮಾನತೆಯ ಬೆನ್ನು ಹತ್ತಿವೆ. ರಾಜಕೀಯವಾಗಿ (political) ರಂಗು ಪಡೆದುಕೊಂಡು ಸಂಘರ್ಷಕ್ಕೆ ಕಾರಣವಾಗಿರುವ ಬ್ರ್ಯಾಂಡ್‌ಗಳ ನಡುವಿನ ಕಿತ್ತಾಟ ಸಾಮಾಜಿಕ ತಾಣದಲ್ಲಿ (Social Media) ಕೂಡ ಅಸಮಾಧಾನಕ್ಕೆ ಕಾರಣವಾಯಿತು.


ನಂದಿನಿಯ ವಿನಾಶಕ್ಕೆ ಅಮುಲ್ ಕಾರಣವಾಗುತ್ತಿದೆ ಎಂಬ ಕೂಗು ಮತ್ತಷ್ಟು ಕಿಚ್ಚನ್ನು ಹೆಚ್ಚಿಸಿತು. ಒಟ್ಟಿನಲ್ಲಿ ಚುನಾವಣೆಗಾಗಿ ಭಾವನಾತ್ಮಕವಾಗಿ ಬ್ರ್ಯಾಂಡ್‌ಗಳ ನಡುವೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಪಾದಿಸಿದ್ದಾರೆ.


 ಅಮುಲ್ ಬ್ರ್ಯಾಂಡ್ ಏಕಾಏಕೀಯಾಗಿ ಕರ್ನಾಟಕ ಪ್ರವೇಶಿಸಿಲ್ಲ


ಇದೀಗ ಕೇಂದ್ರವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಬ್ರ್ಯಾಂಡ್‌ಗಳ ನಡುವಿನ ವಿವಾದಕ್ಕೆ ತಮ್ಮ ಕೆಲವೊಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ಗುಜರಾತ್ ಬ್ರ್ಯಾಂಡ್ ಕರ್ನಾಟಕಕ್ಕೆ ಏಕಾಏಕೀಯಾಗಿ ಪ್ರವೇಶಿಸಿಲ್ಲ ಹಾಗೂ ಕಾಂಗ್ರೆಸ್ ಅಧಿಕಾರವಧಿಯಲ್ಲಿದ್ದಾಗಲೇ ಗುಜರಾತ್ ಮೂಲದ ಡೈರಿ ಸಹಕಾರಿ ರಾಜ್ಯಕ್ಕೆ ಪ್ರವೇಶ ಮಾಡಿತ್ತು ಎಂದು ತಿಳಿಸಿದ್ದಾರೆ.


ಹಾಗಾಗಿ ಅಮುಲ್‌ನ ಆಗಮನ ನಂದಿನಿ ಬ್ರ್ಯಾಂಡ್‌ನ ವಿನಾಶಕ್ಕೆ ಕಾರಣವಾಗಿದೆ ಎಂದು ಪ್ರತಿಪಕ್ಷಗಳು ಹೇಳುವುದು ನಾಚಿಕೆಗೇಡು ಎಂದಿದ್ದಾರೆ.


ಇದನ್ನೂ ಓದಿ:Karnataka Election 2023: ಈಶ್ವರಪ್ಪ ಇದ್ದ ಕಾರ್ಯಕ್ರಮದಲ್ಲಿ ತಮಿಳು ನಾಡುಗೀತೆ! ಮಾಜಿ ಸಚಿವ ಮಾಡಿದ್ದೇನು?


ಆಯಾಯ ರಾಜ್ಯದಲ್ಲಿ ಆಯಾಯ ಬ್ರ್ಯಾಂಡ್‌ಗೆ ಪ್ರಾಶಸ್ತ್ಯವಿದೆ


ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹಾಲು, ಮೊಸರು ಮತ್ತು ಇತರ ಡೈರಿ ಉತ್ಪನ್ನಗಳನ್ನು ನಂದಿನಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಅಂತೆಯೇ ನಂದಿನಿ ಕರ್ನಾಟಕದ ಮನೆ ಮಂದಿಯೊಂದಿಗೆ ಅನೂಹ್ಯ ಬಾಂಧವ್ಯವನ್ನು ಹೊಂದಿದೆ.


ಒಟ್ಟಿನಲ್ಲಿ ಚುನಾವಣೆಯ ಸಮಯದಲ್ಲಿಯೇ ಈ ವಿಷಯವನ್ನು ಇನ್ನಷ್ಟು ರಾಜಕೀಯವಾಗಿ ತಿರುಚಿ ಅದಕ್ಕೆ ಒಂದಿಷ್ಟು ಉಪ್ಪು ಖಾರ ಹಾಕಿ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


ರಾಜಕೀಯವಾಗಿ ರಂಗು ಪಡೆದುಕೊಂಡಿರುವ ವಿವಾದ


ಭಾವನಾತ್ಮಕ ವಿಷಯವನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡಿರುವ ಪ್ರತಿಪಕ್ಷಗಳು ಅಮುಲ್‌ ಕರ್ನಾಟಕಕ್ಕೆ ಪ್ರವೇಶ ಪಡೆದುಕೊಂಡರೆ ಅದು ನಂದಿನಿಯ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅದೂ ಅಲ್ಲದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ಅಮುಲ್ ಕರ್ನಾಟಕಕ್ಕೆ ಪ್ರವೇಶಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.


ಅಮುಲ್ ಬ್ರ್ಯಾಂಡ್ ಖರೀದಿಸಿದರೆ ನಾನು ನಂದಿನಿಗೆ ವಿರುದ್ಧ ಎಂದಲ್ಲ


ಭಾರತದ ಕ್ಷೀರಕ್ರಾಂತಿ ಯೋಜನೆಯಲ್ಲಿ ಪ್ರತಿಯೊಂದು ರಾಜ್ಯವು ತನ್ನದೇ ಆದ ಹಾಲಿನ ಸಹಕಾರಿ ಸಂಘವನ್ನು ಹೊಂದಿದೆ. ಆಯಾಯ ರಾಜ್ಯಕ್ಕೆ ಈ ಬ್ರ್ಯಾಂಡ್‌ಗಳು ಆ ರಾಜ್ಯದ ಹೆಮ್ಮೆ ಎಂದೆನಿಸಿವೆ.


ಕರ್ನಾಟದಲ್ಲಿದ್ದರೆ ನಾನು ನಂದಿನಿಯ ಉತ್ಪನ್ನಗಳನ್ನೇ ಖರೀದಿಸಿತ್ತೇನೆ ಅದೇ ನಾನು ದೆಹಲಿಯಲ್ಲಿದ್ದರೆ ಅಲ್ಲಿ ಅಮುಲ್ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸುತ್ತೇನೆ.


ದೆಹಲಿಯಲ್ಲಿದ್ದಾಗಲೂ ನಾನು ಕರ್ನಾಟಕವನ್ನು ಪ್ರತಿನಿಧಿಸುತ್ತೇನೆ. ದೆಹಲಿಯಲ್ಲಿ ನಂದಿನಿ ದೊರೆಯುತ್ತಿಲ್ಲವೆಂದು ಅಮುಲ್ ಖರೀದಿಸುವುದು ನಾನು ಕರ್ನಾಟಕಕ್ಕೆ ವಿರುದ್ಧವಾಗಿರುವೆ ಎಂಬುದಾಗಿ ಅಲ್ಲ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: JDS Manifesto: ಜನತಾ ಅಭಿಪ್ರಾಯ ಆಧಾರಿತ ಜನತಾ ಸರ್ಕಾರ, ಅಧಿಕಾರಕ್ಕೆ ಬಂದರೆ ಪಂಚರತ್ನ ಸಾಕಾರ! ಜೆಡಿಎಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ


ಯಾವ ರಾಜ್ಯದಲ್ಲಿ ಯಾವ ಉತ್ಪನ್ನವಿದೆಯೋ ಅದನ್ನೇ ಖರೀದಿಸುತ್ತೇನೆ. ನಾನು ಕರ್ನಾಟಕಕ್ಕೆ ಇಲ್ಲಾ ದೆಹಲಿಗೆ ವಿರುದ್ದವಾಗಿರುವೆ ಎಂದಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.


ಕರ್ನಾಟಕದ ಹೈನುಗಾರರಿಗೆ ಬೆಂಬಲ ಇನ್ನೂ ದೊರೆಯುತ್ತದೆ


ಅಮುಲ್ ಕರ್ನಾಟಕಕ್ಕೆ ಪ್ರವೇಶಿಸುತ್ತಿದೆ ಎಂದರೆ ಕರ್ನಾಟಕದ ಹೈನುಗಾರರಿಗೆ ಹಾಗೂ ಬ್ರ್ಯಾಂಡ್‌ಗೆ ಇನ್ನು ಮುಂದೆ ತೊಂದರೆ ಇದೆ ಎಂದಲ್ಲ ಅವರಿಗೆ ದೊರೆಯುವ ಬೆಂಬಲ ಹಾಗೂ ಸಹಕಾರ ಇನ್ನು ಮುಂದೆ ಕೂಡ ಹಾಗೆಯೇ ಇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.


ನಂದಿನಿ ಕೂಡ ತನ್ನ ಉತ್ಪನ್ನಗಳನ್ನು ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಂತಹ ಇತರ ರಾಜ್ಯಗಳ ಡೈರಿ ಉತ್ಪನ್ನಗಳಂತೆಯೇ ಕರ್ನಾಟಕದಲ್ಲಿಯೂ ಮಾರಾಟ ಮಾಡುತ್ತಿದೆ ಎಂದು ಅವರು ಗಮನಸೆಳೆದರು.


ಭಾರತದ ಕ್ಷೀರಕ್ರಾಂತಿಗೆ ಬ್ರ್ಯಾಂಡ್‌ಗಳ ಕೊಡುಗೆ ಅಪಾರ


ನಂದಿನಿ ಹಾಗೂ ಅಮುಲ್ ಹೀಗೆ ರಾಜ್ಯಗಳ ಎಲ್ಲಾ ಬ್ರ್ಯಾಂಡ್‌ಗಳು ಭಾರತದ ಅಮೂಲ್ಯ ಕ್ಷೀರ ಕ್ಷೇತ್ರದ ಆಸ್ತಿಗಳಾಗಿವೆ. ಭಾರತವನ್ನು ಪ್ರತಿಯೊಂದು ಅಂಶದಲ್ಲಿಯೂ ಬಲಪಡಿಸುವುದು ಇಲ್ಲಿ ಮುಖ್ಯ ಉದ್ದೇಶವಾಗಿದೆ. ಹಾಗಾಗಿಯೇ ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಹಾಲಿನ ಬೆಲೆ ಹೆಚ್ಚಳ


ಒಟ್ಟಿನಲ್ಲಿ ಭಾವಾನತ್ಮಕ ವಿಷಯವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು ಅದನ್ನು ತಿರುಚಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರೋಗ್ಯಕರ ಸ್ಪರ್ಧೆಯ ಬದಲಿಗೆ ವಿಷಬೀಜ ಬಿತ್ತಲಾಗುತ್ತಿದೆ ಎಂದು ವಿತ್ತ ಸಚಿವೆ ದೂರಿದ್ದಾರೆ.ಕರ್ನಾಟಕದ ಹಾಲಿನ ರೈತರನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸೀತಾರಾಮನ್ ತಿಳಿಸಿದ್ದು, ಮೊದಲ ಬಾರಿಗೆ ಹಾಲಿನ ಸಂಗ್ರಹಣೆ ಬೆಲೆಯನ್ನು ಹೆಚ್ಚಿಸಿದ ಕರ್ನಾಟಕದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸರಕಾರದ ಕಾರ್ಯಕ್ಕೆ ಸಚಿವರು ಶ್ಲಾಘನೆ ನೀಡಿದ್ದು, ನಂತರ ಬಂದ ಸರಕಾರಗಳು ಕೂಡ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದವು ಎಂದು ತಿಳಿಸಿದ್ದಾರೆ.


ಕೇಂದ್ರದಿಂದ ಕೂಡ ಬೆಂಬಲ


ಬಿಜೆಪಿ ಸರಕಾರ ಹಾಲಿನ ದರವನ್ನು ರೂ 5 ಕ್ಕೆ ಹೆಚ್ಚಿಸಿದೆ. ಹಾಗಾಗಿ ಹಾಲು ಒದಗಿಸುವ ರೈತರಿಗೆ ಸಹಕಾರ ಇದ್ದೇ ಇರುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ರೈತರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಕೇಂದ್ರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

top videos
  First published: