• Home
  • »
  • News
  • »
  • state
  • »
  • Amrutha Panchayath Yojan: ‘ಅಮೃತ ಪಂಚಾಯ್ತಿ ಯೋಜನೆ‘ಗೆ ಚಾಲನೆ; 750 ಗ್ರಾ.ಪಂ.ಗಳ ಅಭಿವೃದ್ಧಿಗೆ ಪಣ ತೊಟ್ಟ ಸರ್ಕಾರ

Amrutha Panchayath Yojan: ‘ಅಮೃತ ಪಂಚಾಯ್ತಿ ಯೋಜನೆ‘ಗೆ ಚಾಲನೆ; 750 ಗ್ರಾ.ಪಂ.ಗಳ ಅಭಿವೃದ್ಧಿಗೆ ಪಣ ತೊಟ್ಟ ಸರ್ಕಾರ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದ ಆಯ್ದ 750 ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಮಾಡಲು ಯೋಜನೆ ಮಾಡಿಕೊಳ್ಳಲಾಗಿದೆ. ಪ್ರತಿ ಗ್ರಾಮಪಂಚಾಯ್ತಿಗಳಿಗೂ ಹೆಚ್ಚುವರಿಯಾಗಿ 25 ಲಕ್ಷ ಹಣ ಮಂಜೂರು ಮಾಡಲಾಗುತ್ತದೆ.

  • Share this:

    ಬೆಂಗಳೂರು(ಸೆ.23): ಮುಖ್ಯಮಂತ್ರಿಗಳ ಕನಸಿನ ಯೋಜನೆ ‘ಅಮೃತ ಪಂಚಾಯ್ತಿ ಯೋಜನೆ‘(Amrutha Panchayath Yojan)ಗೆ ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್(Union Rural Development Minister KS Eshwarappa)​ ಚಾಲನೆ ನೀಡಿದರು.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.  ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai), ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ(Rural Development Minister KS Eshwarappa), ಸಚಿವರಾದ ಮುನಿರತ್ನ(Minister muniratna), ಎಸ್ ಟಿ ಸೋಮಶೇಖರ್(ST Somashekhar),ಅಶ್ವಥ ನಾರಾಯಣ(Ashwath Narayan), ಬಿ ಸಿ ನಾಗೇಶ್(BC Nagesh), ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಿದ್ದಾರೆ. ರಾಜ್ಯದ ಆಯ್ದ 750 ಗ್ರಾಮ ಪಂಚಾಯತಿಗಳ(Gram Panchayaths) ಅಭಿವೃದ್ಧಿ ಮಾಡಲು ಯೋಜನೆ ಮಾಡಿಕೊಳ್ಳಲಾಗಿದೆ. ಪ್ರತಿ ಗ್ರಾಮಪಂಚಾಯ್ತಿಗಳಿಗೂ ಹೆಚ್ಚುವರಿಯಾಗಿ 25 ಲಕ್ಷ ಹಣ ಮಂಜೂರು ಮಾಡಲಾಗುತ್ತದೆ.


    ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ‘ಅಮೃತ ಪಂಚಾಯ್ತಿ‘ ಯೋಜನೆಯನ್ನು ಘೋಷಣೆ ಮಾಡಿದ್ದರು. ಅಮೃತ ಮಹೋತ್ಸವದ ನೆನಪಿಗಾಗಿ ಈ ಯೋಜನೆಯನ್ನು ಘೋಷಿಸಿದ್ದರು. ಹೀಗಾಗಿ ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್​ ಈ ಯೋಜನೆಗೆ ಚಾಲನೆ ನೀಡಿದರು. ಆ ಮೂಲಕ ಇಂದಿನಿಂದ ಅಮೃತ ಗ್ರಾ.ಪಂ. ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಗ್ರಾಮ ಪಂಚಾಯ್ತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರ ಅಭಿವೃದ್ಧಿ ಪಡಿಸಲು  ಸರ್ಕಾರ ಮುಂದಾಗಿದೆ.


    ಇದನ್ನೂ ಓದಿ:ಕೋಮುಲ್ ವಿಭಜನೆ ಹೆಸರಲ್ಲಿ ಸಚಿವ ಡಾ ಕೆ ಸುಧಾಕರ್ ರಾಜಕೀಯ; ಒಕ್ಕೂಟದ ಅಧ್ಯಕ್ಷ್ಯ ಹೇಳಿದ್ದೇನು?


    ಅಮೃತ ಯೋಜನೆಯ ಕಾರ್ಯಗಳು


    • ಬೀದಿ ದೀಪಗಳ ಅಳವಡಿಕೆ

    • ಪ್ರತಿ ಮನೆಗೆ ಕುಡಿಯುವ ನೀದಿನ ನಳ ಸಂಪರ್ಕ ಕಲ್ಪಿಸುವುದು

    • ಶೇಕಡಾ 100 ರಷ್ಟು ಘನ ತ್ಯಾಜ್ಯ ವಿಂಗಡಗೆ ಹಾಗೂ ವಿಲೇವಾರಿ

    • ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು

    • ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ

    • ಅಮೃತ್ ಉದ್ಯಾನವನಗಳ ನಿರ್ಮಾಣ

    • ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವುದು

    • ಶಾಲೆಗಳು,ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ಗಳ ಸೌಲಭ್ಯಗಳು ಕಲ್ಪಿಸುವುದು.

    • ಆಟದ ಮೈದಾನ ಹಾಗೂ ಆವರಣ ಗೋಡೆಗಳನ್ನು ನಿರ್ಮಿಸುವುದು

    • ರೈತರ ಉಪಯೋಗಕ್ಕಾಗಿ ಗ್ರಾಮೀಣ ಗೋದಾಮಗಳ ನಿರ್ಮಾಣ

    • ಕೆರೆಗಳ/ ಕಲ್ಯಾಣ ಗಳ ಪುನಶ್ಚೇತನ


    ಅಮೃತ ಯೋಜನೆಗೆ ಆಯ್ಕೆಯಾದ ಗ್ರಾಮಪಂಚಾಯ್ತಿಗಳ ವಿವರ

    • ಬಾಗಲಕೋಟೆ - 23

    • ಬಳ್ಳಾರಿ - 28

    • ಬೆಳಗಾವಿ - 59

    • ಬೆಂಗಳೂರು ನಗರ - 11

    • ಬೆಂಗಳೂರು ಗ್ರಾಮೀಣ - 12

    • ಬೀದರ್ - 22

    • ಚಾಮರಾಜನಗರ - 15

    • ಚಿಕ್ಕಬಳ್ಳಾಪುರ - 18

    • ಚಿಕ್ಕಮಗಳೂರು - 26

    • ಚಿತ್ರದುರ್ಗ - 22

    • ದಕ್ಷಿಣ ಕನ್ನಡ - 27

    • ದಾವಣಗೆರೆ - 23

    • ಧಾರವಾಡ - 17

    • ಗದಗ - 14

    • ಹಾಸನ - 31

    • ಹಾವೇರಿ - 26

    • ಕಲ್ಬುರ್ಗಿ - 31

    • ಕೊಡಗು - 12

    • ಕೋಲಾರ - 18

    • ಕೊಪ್ಪಳ - 18

    • ಮಂಡ್ಯ - 27

    • ಮೈಸೂರು - 31

    • ರಾಯಚೂರು - 21

    • ರಾಮನಗರ - 15

    • ಶಿವಮೊಗ್ಗ - 32

    • ತುಮಕೂರು - 38

    • ಉಡುಪಿ - 18

    • ಉತ್ತರ ಕನ್ನಡ - 27

    • ವಿಜಯಪುರ - 25

    • ಯಾದಗಿರಿ - 14


    ಸರ್ಕಾರದ ಮಟ್ಟದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳು ಒಟ್ಟು 50. ಒಟ್ಟು 750 ಗ್ರಾಮ ಪಂಚಾಯ್ತಿಗಳು.


    ಅಮೃತ ಪಂಚಾಯ್ತಿ ಯೋಜನೆ ಉತ್ತಮ ಯೋಜನೆ


    ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್,   ಅಮೃತ ಗ್ರಾ.ಪಂ ಯೋಜನೆ ಉತ್ತಮ ಯೋಜನೆ. ಇದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪಂಚಾಯ್ತಿಗಳ ಸಶಕ್ತೀಕರಣ ಗಾಂಧಿಯವರ ಆಶಯ. ಗಾಂಧಿ ಆಶಯವನ್ನು ಈಡೇರಿಸುವ ನಿಟ್ಟುನಲ್ಲಿ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಯೋಜನೆಯಲ್ಲಿ ಇ-ಲೈಬ್ರರಿಯ ಪರಿಕಲ್ಪನೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು.


    ರಾಜ್ಯಕ್ಕೆ ಹೆಚ್ಚಿನ ಅನುದಾನ


    ಹಣಕಾಸು ಆಯೋಗಗಳ ಮೂಲಕ‌ ರಾಜ್ಯಕ್ಕೆ ಸಾಕಷ್ಟು ಅನುದಾನ ಕೊಡಲಾಗಿದೆ. ರಾಜ್ಯದಲ್ಲಿ ಯಾವ ಸರ್ಕಾರ ಇದೆ ಅಂತ ನೋಡದೇ ಕೇಂದ್ರ ಅನುದಾನ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಇರಲಿ, ಬಿಜೆಪಿ ಸರ್ಕಾರ ಇರಲಿ ಅನುದಾನ ನೀಡಲಾಗಿದೆ. 13 ನೇ ಹಣಕಾಸು ಆಯೋಗಕ್ಕಿಂತ ಮೂರು ಪಟ್ಟು ಹೆಚ್ಚಿನ ಅನುದಾನ 14 ನೇ ಹಣಕಾಸು ಆಯೋಗದಲ್ಲಿ ನೀಡಲಾಗಿದೆ ಎಂದರು.


    ಕರ್ನಾಟಕ ಇಲ್ಲದೇ ಭಾರತ ಇಲ್ಲ


    ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಮಟ್ಟದಲ್ಲಿ ವಿಶೇಷ ಸ್ಥಾನಮಾನ ಇದೆ. ಕರ್ನಾಟಕ ಇಲ್ಲದೇ ಭಾರತ ಇಲ್ಲ. ನರೇಗಾದಡಿ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ 1,51,846 ಕೋಟಿ ರೂ ಖರ್ಚು ಮಾಡಿತ್ತು. ಆದ್ರೆ ಮೋದಿಯವರು 4,36,440 ಕೋಟಿ ರೂ ನರೇಗಾದಡಿ ರಾಜ್ಯದಲ್ಲಿ ವೆಚ್ಚ ಮಾಡಿದ್ದಾರೆ ಎಂದು ಹೇಳಿದರು.

    Published by:Latha CG
    First published: