Water Project: ಕೋಟೆನಾಡಲ್ಲಿ 122 ಪ್ರಾಕೃತಿಕ ಜಲಮೂಲಗಳ ರಕ್ಷಣೆಗೆ ಅಮೃತ ಸರೋವರ ಯೋಜನೆ ಜಾರಿ

ಸರ್ಕಾರ ಇದೀಗ ಅಮೃತ ಸರೋವರ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 122 ಜಲಮೂಲಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ.

ಅಮೃತ ಸರೋವರ ಯೋಜನೆ ಜಾರಿ

ಅಮೃತ ಸರೋವರ ಯೋಜನೆ ಜಾರಿ

  • Share this:
ಚಿತ್ರದುರ್ಗ: ನರೇಗಾ ಯೋಜನೆಯಡಿ (Nrega Project) ಗ್ರಾಮೀಣ ಭಾಗದ ನಿರುದ್ಯೋಗ (Rural unemployment) ಇರುವ ಜನರಿಗೆ ಕೆಲಸ (Work) ಒದಗಿಸುವುದರೊಂದಿಗೆ ಶಾಶ್ವತ ಹಾಗೂ ಜನೋಪಯೋಗಿ ಕಾರ್ಯಗಳನ್ನ ಕೈಗೊಳ್ಳುವ ಉದ್ದೇಶದಿಂದ ಸರ್ಕಾರ (Government) ಇದೀಗ ಅಮೃತ ಸರೋವರ (Amrit Sarovar) ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಒಟ್ಟು 122 ಜಲಮೂಲಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ಕಳೆದ ಒಂದೂವರೆ ದಶಕಗಳಿಂದ ಕೇಂದ್ರ ಸರ್ಕಾರ (Central Government) ಗ್ರಾಮೀಣ ಭಾಗದ ಜನ್ರಿಗೆ ಉದ್ಯೋಗ ಕೊಡುವ ದೃಷ್ಠಿಯಿಂದ ಹಳ್ಳಿಗಳಲ್ಲಿ ರಸ್ತೆ (Road), ಚರಂಡಿ (drainage), ಕೃಷಿ ಹೊಂಡ, ಸೇರಿದಂತೆ ಹಲವು ಕಾಮಗಾರಿಗಳನ್ನ ಮಾಡುವ ಅವಕಾಶ ನೀಡಿ ನರೇಗಾ ಯೋಜನೆಯನ್ನ ಜಾರಿಗೆ ತಂದಿತ್ತು. ಅದು ಜಾರಿಯಾಗಿ ಜನ್ರಿಗೆ ಕೂಲಿ (Wages) ಸಿಗುವುದರ ಜೊತೆಗೆ, ಹಳ್ಳಿಗಳ ಅಭಿವೃದ್ದಿ (Development) ಕೂಡಾ ಆಗುತ್ತಿತ್ತು.

ಪ್ರಾಕೃತಿಕ ಜಲಮೂಲಗಳ ಸಂರಕ್ಷಣೆಗೆ ಕ್ರಮ

ಈ ಹಿಂದೆ ನರೆಗಾ ಯೋಜನೆಯಲ್ಲಿ ಶಾಲೆಗಳಿಗೆ ಕೊಠಡಿ, ಕಾಂಪೌಂಡ್, ಪಾರ್ಕ್ ನಂಥ ಅಭಿವೃದ್ದಿ ಕಾರ್ಯಗಳಿಗೆ ಸಾಥ್ ನೀಡಿತ್ತು. ಇದೀಗ ಇದೇ ತರಹದ ಮತ್ತೊಂದು ಹೊಸ ಪ್ಲಾನ್ ಮಾಡಿರುವ ಸರ್ಕಾರ ಪ್ರಾಕೃತಿಕ ಜಲ ಮೂಲಗಳನ್ನು ಸಂರಕ್ಷಣೆ ಮಾಡಿ, ಕೆರೆ ಕಟ್ಟೆಗಳ ಹೂಳು ತೆಗೆದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣ ಹಿಡುವಳಿದಾರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸವ ನರೇಗಾ ಅಮೃತ ಸರೋವರ ಯೋಜನೆಯ ತಂದಿದೆ.

ಕೋಟೆನಾಡಿನಲ್ಲಿ ಅಮೃತ ಸರೋವರ ಯೋಜನೆ

ಚಿತ್ರದುರ್ಗ ಜಿಲ್ಲೆಯಲ್ಲಿ ಅಮೃತ ಸರೋವರ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 75 ಜಲಮೂಲಗಳನ್ನು ಯೋಜನೆಯಡಿ ಅಭಿವೃದ್ಧಿ ಪಡಿಸಲು ಸರ್ಕಾರ ಜಿಲ್ಲಾ ಪಂಚಾಯಿತಿಗೆ ಗುರಿ ನೀಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 122 ಜಲಮೂಲಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ.

ಇದನ್ನೂ ಓದಿ: Tunga Bhadra: ತುಂಗಭದ್ರೆಯ ಒಡಲಲ್ಲಿ ಜಲರಾಶಿಯ ಅಬ್ಬರ! ಅದ್ಭುತ ದೃಶ್ಯ ನೀವೂ ಕಣ್ತುಂಬಿಕೊಳ್ಳಿ

ಆಗಸ್ಟ್ 15ರ ಒಳಗೆ 20 ಜಲಮೂಲಗಳ ಅಭಿವೃದ್ಧಿ ಗುರಿ

ನರೇಗಾದಡಿ ನೀಡಿರುವ 75 ಜಲಮೂಲಗಳ ಗುರಿಯನ್ನು ಮೀರಿ ಹೆಚ್ಚಿನ ಸಾಧನೆ ತೋರುವ ಉಮೇದಿನಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಾರ್ಯ ಆರಂಭಿಸಿದೆ. ಅಲ್ಲದೇ ಆಜಾದಿಕಾ ಅಮೃತ ಮಹೋತ್ಸವ ಆಚರಿಸುವ ಆಗಸ್ಟ್ 15 ರ ಒಳಗಾಗಿ ಜಿಲ್ಲೆಯಲ್ಲಿ ಕನಿಷ್ಠ 20 ಜಲಮೂಲಗಳನ್ನು ಅಭಿವೃದ್ಧಿ ಪಡಿಸಿ ಆಗಸ್ಟ್ 15 ರಂದು ಜಲಮೂಲಗಳ ಬಳಿ ಧ್ವಜಾರೋಹಣ ನೆರವೇರಿಸಲು ಗುರಿ ಹೊಂದಲಾಗಿದೆ.

ಅಧಿಕಾರಿಗಳಿಂದ ಯೋಜನೆಯ ಕಾಮಗಾರಿ ವೀಕ್ಷಣೆ

ಇನ್ನೂ  ಅಮೃತ ಸರೋವರ ಯೋಜನೆಯ ಮುಖ್ಯ ಇಂಜಿನೀಯರ್ ಕೆ.ಸಿ.ಮಲ್ಲಪ್ಪ, ಜಿಲ್ಲೆಗೆ ಈಚೆಗೆ ಆಗಮಿಸಿ ಚಿತ್ರದುರ್ಗ ತಾಲೂಕಿನ ಐನಹಳ್ಳಿ ಗ್ರಾಮ ಹಾಗೂ ಹಿರಿಯೂರು ತಾಲೂಕಿನ ಮರಡಿಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Otters in Tungabhadra: ತುಂಗಭದ್ರೆಯ ಒಡಲಲ್ಲಿ ನೀರುನಾಯಿಗಳ ಸಂಸಾರ, ಅಪರೂಪದ ಜೀವ ಸಂಕುಲಕ್ಕೆ ಜನರಿಂದ ಸಂಚಕಾರ!

ಯೋಜನೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ

ಜಿಲ್ಲೆಯ 6 ತಾಲ್ಲೂಕುಗಳಲ್ಲಿನ ಗ್ರಾಮಗಳ ಕೆರೆ, ಗೋಕಟ್ಟೆ ಸಮಗ್ರ ಅಭಿವೃದ್ಧಿ ಪಡಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಗ್ ವಿಭಾದ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಓಗಳಿಗೆ ಸೂಚನೆ ನೀಡಿದ್ದಾರೆ. ಇನ್ನೂ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಸಂಸ್ಥೆಗಳ ಚುನಾಯಿತರು, ಸಾರ್ವಜನಿಕರು ಅದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Published by:Annappa Achari
First published: