ಬಿಎಸ್​ವೈಗೆ ಲೋಕಸಭಾ ಚುನಾವಣೆ ಪ್ರಚಾರದ ಹೊಣೆ: ರಾಷ್ಟ್ರ ನಾಯಕರ ಕರ್ನಾಟಕ ಪ್ರವಾಸ ಸದ್ಯಕ್ಕಿಲ್ಲ

news18
Updated:August 3, 2018, 9:27 AM IST
ಬಿಎಸ್​ವೈಗೆ ಲೋಕಸಭಾ ಚುನಾವಣೆ ಪ್ರಚಾರದ ಹೊಣೆ: ರಾಷ್ಟ್ರ ನಾಯಕರ ಕರ್ನಾಟಕ ಪ್ರವಾಸ ಸದ್ಯಕ್ಕಿಲ್ಲ
ಯಡಿಯೂರಪ್ಪ ಮತ್ತು ಅಮಿತ್ ಶಾ
  • News18
  • Last Updated: August 3, 2018, 9:27 AM IST
  • Share this:
ನ್ಯೂಸ್​18 ಕನ್ನಡ

ಬೆಂಗಳೂರು (ಆ.2): ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಚುನಾವಣಾ ಪ್ರಚಾರದ ಸಿದ್ಧತೆ ಜೋರಾಗೇ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಈಗಾಗಲೇ ಚುನಾವಣೆ ಪ್ರಚಾರದ ಬಗ್ಗೆಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಬಾರಿಯ ಬಿಜೆಪಿ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಆಗಮನವಾಗಬೇಕಾಗಿತ್ತು. ಆದರೆ, ಸದ್ಯಕ್ಕೆ ಕರ್ನಾಟಕಕ್ಕೆ ಅಮಿತ್​ ಶಾ ಭೇಟಿ ನೀಡುತ್ತಿಲ್ಲ. ಯೋಜನೆಯ ಪ್ರಕಾರ ಆಗಸ್ಟ್​ ತಿಂಗಳಲ್ಲಿ ಅಮಿತ್​ ಶಾ ಕರ್ನಾಟಕ ಪ್ರವಾಸ ನಿಗದಿಯಾಗಿತ್ತು.

ಅಮಿತ್​ಶಾ ಬಾರದಿರಲು ಕಾರಣವೇನು?:

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಪಕ್ಕಕ್ಕಿಟ್ಟು ರಾಷ್ಟ್ರ ನಾಯಕರೇ ಚುನಾವಣಾ ಪ್ರಚಾರದ ಹೊಣೆ ಹೊತ್ತಿದ್ದರು. ಆದರೆ, ಅದರಿಂದ ಬಿಜೆಪಿಗೆ ಲಾಭಕ್ಕಿಂತ ಹೆಚ್ಚಾಗಿ ಹೊಡೆತವೇ ಬಿದ್ದಿತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್​ ಈ ಬಾರಿಯ ಲೋಕಸಭಾ ಚುನಾವಣೆಯ ಕರ್ನಾಟಕ ಪ್ರಚಾರದ ಸಂಪೂರ್ಣ ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರಿಗೆ ವಹಿಸುವ ಮೂಲಕ ಫುಲ್ ಪವರ್ ನೀಡಿದೆ.

ಲೋಕಸಭೆಗೆ ರಾಜ್ಯದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನೂ ಯಡಿಯೂರಪ್ಪನವರಿಗೆ ವಹಿಸಲಾಗಿದೆ. ಹೀಗಾಗಿ,  ಚುನಾವಣೆ ಹತ್ತಿರ ಇರುವಾಗ ರಾಷ್ಟ್ರ ಬಿಜೆಪಿ ನಾಯಕರ ತಂಡ ರಾಜ್ಯಕ್ಕೆ ಬಂದು ಪ್ರಚಾರದಲ್ಲಿ ಭಾಗಿಯಾಗಲಿದೆ. ಅಲ್ಲಿವರೆಗೆ ಯಡಿಯೂರಪ್ಪ ನಾಯಕತ್ವದಲ್ಲಿಯೇ ಸಂಘಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಮಿತ್​ ಶಾ ಪ್ರವಾಸ ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೇ ರಾಜ್ಯ ಚುನಾವಣಾ ಪ್ರವಾಸ ನಡೆಯಲಿದೆ.  ಕನಿಷ್ಠ 25 ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲಿಸಲು ಯಡಿಯೂರಪ್ಪನವರಿಗೆ ಹೈಕಮಾಂಡ್​ ಟಾರ್ಗೆಟ್ ನೀಡಿದೆ. ಹಾಗಾಗಿ, ಹೈಕಮಾಂಡ್​ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ತಮ್ಮ ಪ್ರಯತ್ನವನ್ನು ಆರಂಭಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿರುವ ಯಡಿಯೂರಪ್ಪ 28 ಲೋಕ ಸಭೆ ಕ್ಷೇತ್ರಗಳಲ್ಲೂ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಿದ್ದಾರೆ.
First published: August 3, 2018, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading