• Home
  • »
  • News
  • »
  • state
  • »
  • 2023 Karnataka Elections: ಆ ರತ್ನ ಈ ರತ್ನ ಅಂತಿದ್ದಾರೆ; ಆದ್ರೆ ಅಮಿತ್​​ ಶಾ ಬಂದ ಕೂಡಲೇ ಯುದ್ಧ ಶುರು ಎಂದ ಆರ್​ ಅಶೋಕ್

2023 Karnataka Elections: ಆ ರತ್ನ ಈ ರತ್ನ ಅಂತಿದ್ದಾರೆ; ಆದ್ರೆ ಅಮಿತ್​​ ಶಾ ಬಂದ ಕೂಡಲೇ ಯುದ್ಧ ಶುರು ಎಂದ ಆರ್​ ಅಶೋಕ್

ಅಮಿತ್ ಶಾ ಕರ್ನಾಟಕ ಭೇಟಿ

ಅಮಿತ್ ಶಾ ಕರ್ನಾಟಕ ಭೇಟಿ

ಅಮಿಶಾ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಚುನಾವಣಾ ಯುದ್ಧ ಶುರುವಾಗಿದೆ. ಅವರು ಆ ರತ್ನ ಈ ರತ್ನ ಅಂತ ಓಡಾಡಿಕೊಂಡಿದ್ದಾರೆ. ಆದರೆ ಹಿಂದೆಂದಿಗೂ ಗೆಲ್ಲದ ರೀತಿಯಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ವರದಿ ಬಂದಿದೆ ಎಂದ್ರು ಆರ್​.ಅಶೋಕ್.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ (2023 Karnataka Elections) ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಇಂದು ದೇವನಹಳ್ಳಿ ಬಳಿ ನಡೆಯುತ್ತಿರುವ ಬೂತ್ ವಿಜಯ್ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್ (Minister R.Ashok) ಅವರು, ಅಮಿಶಾ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಚುನಾವಣಾ ಯುದ್ಧ ಶುರುವಾಗಿದೆ. ಅವರು ಆ ರತ್ನ ಈ ರತ್ನ ಅಂತ ಓಡಾಡಿಕೊಂಡಿದ್ದಾರೆ. ಆದರೆ ಹಿಂದೆಂದಿಗೂ ಗೆಲ್ಲದ ರೀತಿಯಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ವರದಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಆ ರತ್ನ ಈ ರತ್ನ ಅಂತಾ ಇದ್ದಾರೆ. ಆದರೆ ಅಮಿತ್ ಶಾ ಬಂದ ಕೂಡಲೇ ಚುನಾವಣಾ ಯದ್ಧ ಶುರುವಾಗಿದೆ. ಈಗ ದೆಹಲಿಯವರು ಮಾಡಿರುವ ಸಮೀಕ್ಷೆಯಲ್ಲಿ ಹಿಂದೆಂದಿಗೂ ಗೆಲ್ಲದ ರೀತಿಯ ಹೆಚ್ಚು ಗೆಲ್ಲುವ ಬಗ್ಗೆ ವರದಿ ಬಂದಿದೆ.


ಬೆಂಗಳೂರಲ್ಲಿ 20 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವರದಿ ಹೇಳಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಶೇಕಡಾ 20ರಷ್ಟು ವೋಟ್ ಮತ್ತೆ ಜಾಸ್ತಿ ಆಗುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅದಕ್ಕಾಗಿಯೇ ಅಮಿತ್ ಶಾ ಅವರಿಗೆ ಚುನಾವಣಾ ಚಾಣಕ್ಯ ಅಂತ ಬಿರುದು ಕೊಟ್ಟಿದ್ದಾರೆ.


ಇದನ್ನೂ ಓದಿ: Amit Shah: ಸಕ್ಕರೆ ನಾಡಲ್ಲಿ ಬಿಜೆಪಿ ಚಾಣಕ್ಯ, ಮಂಡ್ಯದಲ್ಲಿ ಮೆಗಾ ಡೈರಿಗೆ ಅಮಿತ್ ಶಾ ಚಾಲನೆ


ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರಕ್ಕೆ ಮಾತ್ರ ಲೀಡರ್


ಗೃಹ ಸಚಿವ ಅಮಿತ್ ಶಾ ಅವರು ಕಾಲಿಟ್ಟ ಕಡೆಗಳೆಲ್ಲ ಗೆಲವು ಸಿಕ್ಕಿದೆ. ಆದರೆ ರಾಹುಲ್ ಗಾಂಧಿ ಕಾಲಿಟ್ಟ ಕಡೆಗಳೆಲ್ಲ ಸೋಲು ಎದುರಾಗಿದೆ. ಅದಕ್ಕಾಗಿ ರಾಹುಲ್ ಗಾಂಧಿ ಸೋಲಿನ ಸರದಾರ, ಅಮಿತ್​ ಶಾ ಗೆಲುವಿನ ಸರದಾರ. ಈ ಚುನಾವಣೆ ಆದ ಮೇಲೆ ಕಾಂಗ್ರೆಸ್ ದಿಕ್ಕಾಪಾಲಾಗಿ ಹೋಗಲಿದೆ. ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಅಂತ ಹೇಳ್ತಿದ್ದಾರೆ, ಇತ್ತ ಡಿಕೆ ಶಿವಕುಮಾರ್ ಅವರ ಕ್ಷೇತ್ರಕ್ಕೆ ಮಾತ್ರ ಲೀಡರ್. ರಾಜ್ಯದಲ್ಲಿ ಅವರ ಪ್ರಭಾವ ಏನು ಇಲ್ಲ. ಅವರು ಕನಕಪುರಕ್ಕೆ ಮಾತ್ರ ಸೀಮಿತ ಅಷ್ಟೇ. ಬೆಂಗಳೂರಲ್ಲಿ ಜಾಸ್ತಿ ಸೀಟು ಗೆದ್ದರೆ, ಇಡೀ ರಾಜ್ಯದಲ್ಲಿ ಹೆಚ್ಚು ಗೆದ್ದಂತೆ ಎಂದರು.


ರಾಹುಲ್ ಗಾಂಧಿ ಗಡ್ಡ ಬಿಡ್ಡು ಸನ್ಯಾಸಿಯಾಗಿದ್ದಾರೆ


ಇವತ್ತು ಕಾಶ್ಮೀರ ನಮ್ಮದಾಗಿದೆ. ಇಂತಹ ಭರವಸೆಗಳನ್ನು ನಾವು ಈಡೇರಿಸುತ್ತಿದ್ದೇವೆ. ಇನ್ನೂ 20 ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆದರೆ ಮೋದಿಯವರು ಹೇಳಿದ್ರು, ಇನ್ನೂ 40 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕು ಅಂತ.


ಬೆಂಗಳೂರು ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡ್ತೀನಿ ಅಂತ ಮೋದಿ ಅವರೇ ಅಮಿತ್​ ಶಾ ಅವರಿಗೆ ಹೇಳಿದ್ದಾರೆ. ನರೇಂದ್ರ ಮೋದಿಯವರು ಹದಿನೈದು ದಿನಗಳಿಗೊಮ್ಮೆ ಬರ್ತೀನಿ ಅಂದಿದ್ದಾರೆ. ಅದಕ್ಕಾಗಿ ಇವರು ಬೆಂಕಿ-ಬಿರುಗಾಳಿ. ಬೆಂಕಿ ಬಿರುಗಾಳಿಯನ್ನು ತಡೆಯುವ ಶಕ್ತಿ ಯಾವ ಸಿದ್ದರಾಮಯ್ಯ ಗೂ, ಇಲ್ಲ ಡಿಕೆ ಶಿವಕುಮಾರ್​​ಗೂ ಇಲ್ಲ. ಈಗಾಗಲೇ ರಾಹುಲ್ ಗಾಂಧಿ ಗಡ್ಡ ಬಿಡ್ಡು ಸನ್ಯಾಸಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: Panchamasali Reservation: ರಾಜ್ಯದ ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ; ಪಂಚಮಸಾಲಿಗೆ 2D, ಒಕ್ಕಲಿಗರಿಗೆ 2C ಪ್ರವರ್ಗ ರಚಿಸಿದ ಸರ್ಕಾರ


ಮೀಸಲಾತಿ ಹೋರಾಟಗಾರರಿಗೂ ಟಾಂಗ್


ಇದೇ ವೇಳೆ ಮೀಸಲಾತಿ ಹೋರಾಟ ಕುರಿತಂತೆ ಪ್ರತಿಕ್ರಿಯೆ ನೋಡಿದ ಅಶೋಕ್ ಅವರು, ಮೀಸಲಾತಿಗಾಗಿ ಬೇರೆಯವರೆಲ್ಲ ಹೋರಾಟ ಮಾಡಿದ್ದರು. ಆದರೆ ಒಕ್ಕಲಿಗರು ಹೋರಾಟ ಮಾಡಿದ್ರಾ? ಸಿಎಂ ಅವರಿಗೆ ಮನವಿ ಮಾಡಿದರು. ಸಿಎಂ ಪರಿಶೀಲನೆ ನಡೆಸಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಂಚಮಸಾಲಿ ಸಮುದಾಯದ ಹೋರಾಟಗಾರರಿಗೆ ಟಾಂಗ್ ಕೊಟ್ಟರು.ಇನ್ನು, ದೇವನಹಳ್ಳಿ ಬಳಿ ನಡೆಯುತ್ತಿರುವ ವಿಜಯ್ ಸಂಕಲ್ಪ ಸಮಾವೇಶಕ್ಕೆ ಗೃಹ ಸಚಿವ ಅಮಿತ್​ ಚಾಲನೆ ನೀಡಿದ್ದಾರೆ. ಅಮಿತ್ ಶಾ ಅವರಿಗೆ ಕೆಂಪೇಗೌಡ ಪ್ರತಿಮೆ ನೀಡಿ ಬಿಜೆಪಿ ಘಟಕ ಗೌರವಿಸಿದೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಸದ ಸದಾನಂದ ಗೌಡ, ಸಚಿವರಾದ ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಅಶ್ವಥ್ ನಾರಾಯಣ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Published by:Sumanth SN
First published: