Amit Shah: ಬಿಜೆಪಿಯಲ್ಲಿ ಬಿಎಸ್​ವೈಯೇ ಕಿಂಗ್- ಯಡಿಯೂರಪ್ಪರನ್ನೇ ಕರೆಸಿಕೊಂಡ ಚಾಣಕ್ಯ

ಯಡಿಯೂರಪ್ಪ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರೂ ಪಕ್ಷಕ್ಕೆ ಬಿಎಸ್ವೈಯೇ ಅನಿವಾರ್ಯವಾಗ್ತಿದ್ಯಾ..? ಯಡಿಯೂರಪ್ಪ ಇಲ್ಲದ ಕಮಲ ಪಾಳಯ ಸೊರಗುತ್ತಿದ್ಯಾ..? ಹೀಗೊಂದು ಅನುಮಾನ ಸ್ವತಃ ಹೈಕಮಾಂಡ್ಗೆ ಬಂದಂತಿದೆ.

ಬಿಎಸ್​​ವೈ ಜೊತೆ ಅಮಿತ್ ಶಾ ರಹಸ್ಯ ಮಾತುಕತೆ

ಬಿಎಸ್​​ವೈ ಜೊತೆ ಅಮಿತ್ ಶಾ ರಹಸ್ಯ ಮಾತುಕತೆ

  • Share this:
ಬಿ.ಎಸ್​.ಯಡಿಯೂರಪ್ಪ (B.S.Yediyurappa) ಮುಖ್ಯಮಂತ್ರಿ (Chief Minister) ಸ್ಥಾನಕ್ಕೆ ರಾಜೀನಾಮೆ (Resign) ನೀಡಿ ವರ್ಷ ಕಳೆದಿದೆ. ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಶಿಕಾರಿಪುರ (Shikharipur)) ಕ್ಷೇತ್ರವನ್ನು ತಮ್ಮ ಪುತ್ರ ವಿಜಯೇಂದ್ರಗೆ (Vijayendra) ಬಿಟ್ಟುಕೊಡೋದಾಗಿ ಘೋಷಿಸಿದ್ದರು. ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ರಾಜಕಾರಣ, ಬಿಜೆಪಿ ಚಟುವಟಿಗಳಿಂದ ದೂರನೇ ಉಳಿದಿದ್ದರು. ಯಡಿಯೂರಪ್ಪ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರೂ ಪಕ್ಷಕ್ಕೆ ಬಿಎಸ್​ವೈಯೇ ಅನಿವಾರ್ಯವಾಗ್ತಿದ್ಯಾ..? ಯಡಿಯೂರಪ್ಪ ಇಲ್ಲದ ಕಮಲ ಪಾಳಯ (Bjp) ಸೊರಗುತ್ತಿದ್ಯಾ..? ಹೀಗೊಂದು ಅನುಮಾನ ಸ್ವತಃ ಹೈಕಮಾಂಡ್​ಗೆ ಬಂದಂತಿದೆ. ಯಾಕೆಂದರೆ ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ಆಗಮಿಸಿದ್ದಾರೆ. ಈ ವೇಳೆ ಯಡಿಯೂರಪ್ಪರ ಜೊತೆ ರಹಸ್ಯವಾಗಿ ಸಮಾಲೋಚನೆ ನಡೆಸಿದ್ದಾರೆ.

ರಾಜ್ಯದಲ್ಲಿ ಕಳೆದ ಐದಾರು ತಿಂಗಳಿಂದ ಒಂದಿಲ್ಲೊಂದು ಕೋಮುಘರ್ಷಣೆ ನಡೀತಿದೆ. ಅದರಲ್ಲೂ ಕರಾವಳಿಯಲ್ಲಿ ನಡೆಯುತ್ತಿರೋ ಕೋಮುಹತ್ಯೆಯಿಂದ ಬಿಜೆಪಿ ವಿರುದ್ಧ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಈ ಬಿಸಿ ಬಿಜೆಪಿ ಹೈಕಮಾಂಡ್​ಗೆ ತಟ್ಟಿದೆ. ಅದಕ್ಕಾಗಿ ಈಗ ರಾಜ್ಯಕ್ಕೆ ಆಗಮಿಸಿರೋ ಅಮಿತ್ ಶಾ ಎಲ್ಲದಕ್ಕೂ ಮದ್ದು ಅರೆಯುತ್ತಿದ್ದಾರೆ.

ಬಿಜೆಪಿಗೆ ಬಿಎಸ್​ವೈಯೇ ಬೂಸ್ಟರ್​​ಡೋಸ್​!

ಒಂದು ದಿನದ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಂಗಳೂರಿಗೆ ಬರ್ತಿದ್ದಂತೆ ಮೊದಲು ಅಮಿತ್ ಶಾರವರು ಯಡಿಯೂರಪ್ಪರನ್ನು ಭೇಟಿಯಾಗಲು ಬಯಸಿದ್ದಾರೆ. ಅದರಂತೆ ಬಿಎಸ್​ವೈಯವರನ್ನು ಕರೆಸಿಕೊಂಡು ಪ್ರಸ್ತುತ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ. ಬರೋಬ್ಬರಿ 20 ನಿಮಷಕ್ಕೂ ಹೆಚ್ಚು ಸಮಯ ಅಮಿತ್ ಶಾ-ಯಡಿಯೂರಪ್ಪ ಮಾತುಕತೆ ನಡೆಸಿದ್ರು.

Amit Shah Yediyurappa Meeting on State development Bsy King
ಅಮಿತ್ ಶಾ-ಯಡಿಯೂರಪ್ಪ ಚರ್ಚೆ


ಇದನ್ನೂ ಓದಿ: Rahul Gandhi ಪ್ರಧಾನಿಯಾಗುತ್ತಾರೆ ಎಂದ ಸ್ವಾಮೀಜಿ! ಮುರುಘಾ ಶರಣರಿಂದ ಆಕ್ಷೇಪ ವ್ಯಕ್ತವಾಗಿದ್ದೇಕೆ?

ಪ್ರವೀಣ್ ನೆಟ್ಟಾರು ಹತ್ಯೆಯಿಂದ ಹಿಂದೂ ಕಾರ್ಯಕರ್ತರು ಕೆರಳಿದ್ದಾರೆ. ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಿದ್ದಾರೆ. ಈ ಬಗ್ಗೆ ಯಡಿಯೂರಪ್ಪರ ಬಳಿ ಅಮಿತ್ ಶಾ ಮಾಹಿತಿ ಪಡೆದರು. ಸರ್ಕಾರ ಹಾಗೂ ಪಕ್ಷದ ನಡವಳಿಕೆ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರು.

ಶೀಘ್ರದಲ್ಲೇ ಸಂಪುಟ ಪುನಾರಚನೆನಾ?

ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿದ ಬಳಿಕ ಸಂಪುಟ ವಿಸ್ತರಣೆ, ಪುನಾರಚನೆ ಮಾತು ಕೇಳಿ ಬರ್ತಾನೆ ಇದೆ. ಈ ಬಗ್ಗೆಯೂ ಅಮಿತ್ ಶಾ ಮಾಹಿತಿ ಪಡೆದಿದ್ದಾರೆ. ಸಂಪುಟ ಪುನಾರಚನೆ ಮಾಡುವ ಬಗ್ಗೆ ಯಡಿಯೂರಪ್ಪರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ನಳೀನ್ ಕಟೀಲ್​ಗೆ ಶೀಘ್ರದಲ್ಲಿ ಕೊಕ್

ಕರ್ನಾಟಕದಲ್ಲಿ ಇತ್ತಿಚೆಗೆ ನಡೆಯುತ್ತಿರೋ ಬೆಳವಣಿಗೆ ಬಗ್ಗೆ ಕಾರ್ಯಕರ್ತರು ಮಾತ್ರವಲ್ಲದೇ ಶಾಸಕರು, ಸಚಿವರು ಕೂಡ ಬೇಸತ್ತಿದ್ದಾರೆ. ಅಮಿತ್ ಶಾ ಭೇಟಿ ವೇಳೆ ಬಿಎಸ್​ವೈ, ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ ಮಾಡಿ ಅಂತಾ ಸಲಹೆ ಕೊಟ್ಟಿದ್ದು, ಮಾತ್ರವಲ್ಲ ಉತ್ಸಾಹಿ ಕೆಲಸಗಾರರನ್ನ ರಾಜ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಿ ಅಂತಾನೂ ಸೂಚಿಸಿದ್ದಾರೆ.

ಅಮಿತ್​ ಶಾಗೆ ಸಿದ್ದರಾಮೋತ್ಸವ ವರದಿ

ಕಮಲ ಪಾಳಯಕ್ಕೆ ಈಗ ಸಿದ್ದರಾಮೋತ್ಸವ ಟೆನ್ಶನ್ ಶುರುವಾಗಿದೆ. ಸಿದ್ದರಾಮೋತ್ಸವದ ವರದಿಯನ್ನ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರು ಕೊಡುವ ಮುನ್ನವೇ ಯಡಿಯೂರಪ್ಪ ನೀಡಿದ್ದಾರೆ. ಸಿದ್ದರಾಮೋತ್ಸವ ಸಮಾವೇಶ, ಚುನಾವಣಾ ಪ್ರಚಾರದ ದಿಕ್ಕನ್ನ ತೋರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಿದ್ದು, ಡಿಕೆಶಿ ಹೊಂದಾಣಿಕೆಯಿಂದ ಕ್ಯಾಂಪೇನ್ ಮಾಡಿದರೆ ಬಿಜೆಪಿ ಬೇರೆ ತಂತ್ರಗಾರಿಕೆ ಮಾಡಬೇಕಾಗುತ್ತದೆ ಅಂತಾ ವರದಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾಷಣದ ವೇಳೆ ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ ಸಾ ರಾ ಮಹೇಶ್!

ಶಾ ಭೇಟಿಯಾದ ಕಟೀಲ್, ಸಿಎಂ ಬೊಮ್ಮಾಯಿ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಗುಸುಗುಸು ಬಗ್ಗೆ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಂತೆ ನಳೀನ್ ಕಟೀಲ್ ದಿಢೀರ್​ ಆಗಿ ಅಮಿತ್ ಶಾರನ್ನು ಭೇಟಿ ಮಾಡಿದ್ರು. ಇನ್ನು ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಆಡಳಿತಾತ್ಮಕ ನಿರ್ಧಾರದ ಬಗ್ಗೆ ಬಿಎಸ್​​​ವೈ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಕೂಡ ಅಮಿತ್ ಶಾರನ್ನು ಭೇಟಿ ಮಾಡಿ ಚರ್ಚಿಸಿದ್ರು.

ಚುನಾವಣೆಗೆ ಏಳೆಂಟು ತಿಂಗಳಿರೋವಾಗಲೇ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದಕ್ಕೆ ತೇಪೆ ಹಚ್ಚೋ ಕಾರ್ಯವನ್ನು ಹೈಕಮಾಂಡ್ ಶುರು ಮಾಡಿದೆ. ಅದರಂತೆ ಇಂದು ಬಿಜೆಪಿ ನಾಯಕ ಅಮಿತ್​ ಶಾ ಬೆಂಗಳೂರಿನಲ್ಲಿ ಯಡಿಯೂರಪ್ಪರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ರು. ಹಾಗಾಗಿ ರಾಜ್ಯ ಬಿಜೆಪಿಗೆ ಈಗಲೂ ಯಡಿಯೂರಪ್ಪರೇ ಕಿಂಗ್ ಆಗಿರೋದಂತು ಸತ್ಯ.
Published by:Thara Kemmara
First published: