ಸದ್ಯದಲ್ಲೇ ಸಂಪುಟ ವಿಸ್ತರಣೆ, ಜ.18ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿ.ಎಸ್.ಯಡಿಯೂರಪ್ಪ

ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡುತ್ತೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದರು. ಈ ಬಾರಿಯ ಬಜೆಟ್​ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುತ್ತೇವೆ. ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡಲಿದ್ದೇವೆ ಎಂದರು.

news18-kannada
Updated:January 15, 2020, 10:10 AM IST
ಸದ್ಯದಲ್ಲೇ ಸಂಪುಟ ವಿಸ್ತರಣೆ, ಜ.18ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿ.ಎಸ್.ಯಡಿಯೂರಪ್ಪ
ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡುತ್ತೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದರು. ಈ ಬಾರಿಯ ಬಜೆಟ್​ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುತ್ತೇವೆ. ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡಲಿದ್ದೇವೆ ಎಂದರು.
  • Share this:
ಶಿವಮೊಗ್ಗ(ಜ.15): ಸಿಎಂ ಬಿ.ಎಸ್​.ಯಡಿಯೂರಪ್ಪ ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ.  ಶಿವಮೊಗ್ಗದ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯಗಳು ಎಂದರು. ನನಗೆ ಈ ಬಾರಿ ಇಲ್ಲಿ ಹಬ್ಬ ಆಚರಿಸುವ  ಅವಕಾಶ ದೊರೆತಿದೆ. ನಾನು ಹಬ್ಬದ ಸಂದರ್ಭದಲ್ಲಿ ಬೇರೆ ಕಡೆ ಇರುತ್ತಿದೆ. ಆದರೆ ಇಂದು ವಿಶೇಷವಾಗಿ ಇನ್​​​ವೆಸ್ಟರ್ ಮೀಟ್​​​ನಲ್ಲಿ ಭಾಗವಹಿಸುತ್ತಿದ್ದೇನೆ," ಎಂದು ಹೇಳಿದರು.

ಇದೇ ವೇಳೆ, ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೇ ಜನವರಿ 18ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಬಂದ ಬಳಿಕ ಶಾ ಜೊತೆ ಚರ್ಚೆ ನಡೆಸಲಾಗುತ್ತದೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ- ಸ್ವಾಮಿ ವಚನಾನಂದ ವಾಗ್ವಾದದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡುತ್ತೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದರು. ಈ ಬಾರಿಯ ಬಜೆಟ್​ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುತ್ತೇವೆ. ಮಾರ್ಚ್​ 5ರಂದು ಬಜೆಟ್​ ಮಂಡನೆ ಮಾಡಲಿದ್ದೇವೆ ಎಂದರು.

ಜನವರಿ 19ರಂದು ದಾವೋಸ್​ಗೆ ತೆರಳುತ್ತಿರುವುದಾಗಿ ಸಿಎಂ ತಿಳಿಸಿದರು. ಇದೇ ವೇಳೆ, ಸ್ವಾಮಿ ವಚನಾನಂದ ವಿರುದ್ಧ ಸಿಎಂ ಗರಂ ಆದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ,  ನಿನ್ನೆ ಘಟನೆ ಬಗ್ಗೆ ಚರ್ಚೆ ಮಾಡಲು ಇಷ್ಟಪಡಲ್ಲ ಎಂದು ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.

ಮದ್ಯಸೇವನೆ ಮಾಡಿದ ತಮಿಳುನಾಡು ವಿದ್ಯಾರ್ಥಿನಿಯರ ಅಮಾನತು ಪ್ರಕರಣ; ಮಹಿಳಾ ಆಯೋಗದಿಂದ ನೋಟಿಸ್ ಜಾರಿ
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading