ಅರಮನೆ ಮೈದಾನದಲ್ಲಿ ವಿವೇಕದೀಪಿನೀ ಕಾರ್ಯಕ್ರಮ; ಅಮಿತ್ ಶಾ ಭಾಗಿ

ವಿವೇಕ ದೀಪಿನಿ ಕಾರ್ಯಕ್ರಮದಲ್ಲಿ ಶ್ರೀ ಶಂಕರಭಾರತಿ ಸ್ವಾಮಿಗಳ ಸಾನಿಧ್ಯ ಇರಲಿದೆ. ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಗಳ ಸಂಗ್ರಹವಾದ ವಿವೇಕ ದೀಪಿನಿಯನ್ನು ಬೆಂಗಳೂರು ಜಿಲ್ಲೆಯ ಲಕ್ಷಾಂತರ ವಿದ್ಯಾರ್ಥಿಗಳು ಸಾಮೂಹಿಕ ಪಠನ ಮಾಡಲಿದ್ಧಾರೆ.

ಅಮಿತ್ ಶಾ

ಅಮಿತ್ ಶಾ

 • News18
 • Last Updated :
 • Share this:
  ಬೆಂಗಳೂರು(ಜ. 18): ವೇದಾಂತ ಭಾರತಿ ಸಂಸ್ಥೆ ಆಯೋಜಿಸಿರುವ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಪಾಲ್ಗೊಂಡಿದ್ಧಾರೆ. ಅರಮನೆ ಮೈದಾನದ ಕೃಷ್ಣ ವಿಹಾರ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವರು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿಳಿದ ಅಲ್ಲಿಂದ ನೇರವಾಗಿ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 12:40ಕ್ಕೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

  ಇನ್ನು, ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಅರಮನೆ ಮೈದಾನದವರೆಗೆ ಅಮಿತ್ ಶಾ ಬರಲಿರುವ ಮಾರ್ಗದಲ್ಲೂ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಟ್ರಾಫಿಕ್ ಕಿರಿಕಿರಿಯಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಈ ಮಾರ್ಗದಲ್ಲಿ 800 ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು.

  ಇದನ್ನೂ ಓದಿ: ವಚನಾನಂದ ಶ್ರೀಗಳ ಆಗ್ರಹಕ್ಕೆ ಸಿಎಂ ಗರಂ; ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ಮುರುಗೇಶ್ ನಿರಾಣಿ

  ವಿವೇಕ ದೀಪಿನಿ ಕಾರ್ಯಕ್ರಮದಲ್ಲಿ ಶ್ರೀ ಶಂಕರಭಾರತಿ ಸ್ವಾಮಿಗಳ ಸಾನಿಧ್ಯ ಇದೆ. ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಗಳ ಸಂಗ್ರಹವಾದ ವಿವೇಕ ದೀಪಿನಿಯನ್ನು ಬೆಂಗಳೂರು ಜಿಲ್ಲೆಯ ಲಕ್ಷಾಂತರ ವಿದ್ಯಾರ್ಥಿಗಳು ಸಾಮೂಹಿಕ ಪಠನ ಮಾಡುತ್ತಿದ್ಧಾರೆ.

  ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಅವರು ಈ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿಗೆ ತೆರಳಲಿದ್ದಾರೆ. ರಾಜ್ಯ ರಾಜಕೀಯ, ಸಂಪುಟ ವಿಸ್ತರಣೆ ಇತ್ಯಾದಿ ವಿಚಾರಗಳತ್ತ ಗಮನ ಹರಿಸಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲಿದ್ದಾರೆ. ವಿವೇಕ ದೀಪಿನಿ ಕಾರ್ಯಕ್ರಮದ ಬಳಿಕ ಅಮಿತ್ ಶಾ ಮತ್ತು ಯಡಿಯೂರಪ್ಪ ಇಬ್ಬರೂ ಒಟ್ಟಿಗೆ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುವ ಸಾಧ್ಯತೆ ಇದೆ. ಈ ವೇಳೆ, ಮಹತ್ವದ ಚರ್ಚೆಗಳಾಗಲಿದೆ. ಇಂದು ಸಂಜೆ ಅಮಿತ್ ಶಾ ಅವರು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಡೆನಿಸನ್ಸ್ ಹೋಟೆಲ್ನಲ್ಲೇ ರಾತ್ರಿ ಉಳಿದುಕೊಂಡು ಬೆಳಗ್ಗೆ 9:15ಕ್ಕೆ ದೆಹಲಿಗೆ ವಾಪಸ್ಸಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: