ಬೆಂಗಳೂರು: ಭಾನುವಾರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಸಿಎಂ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BJP National General Secretary BL Santosh) ಸೇರಿ ಪ್ರಮುಖರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿಯ ಆಂತರಿಕ ಸರ್ವೇಗೆ ಅಮಿತ್ ಶಾ ಫುಲ್ ಖುಷಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಿರುವ ವರದಿ ಪ್ರಕಾರ ನಾವೇ ಅಧಿಕಾರಕ್ಕೆ ಬರುತ್ತೇವೆ. ಆದರೆ ನೀವು ಯಾವುದೇ ಹೊಂದಾಣಿಕೆ ಇಲ್ಲದೇ ಕೆಲಸ ಮಾಡಿ. ಯಾವ ಪಾರ್ಟಿಯ ಜೊತೆಗೂ ನಮಗೆ ಹೊಂದಾಣಿಕೆ ಬೇಡ ಎಂದು ಹೇಳಿದ್ದಾರಂತೆ.
ರಾಜ್ಯದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ನಾಯಕತ್ವಕ್ಕೆ ಜನರು ಮಣೆ ಹಾಕುತ್ತಿದ್ದಾರೆ. ಹೋದಲ್ಲಿ ಬಂದಲ್ಲೂ ಬಿಜೆಪಿಗೆ ದೊಡ್ಡ ಬೆಂಬಲ ಸಿಗುತ್ತಿದೆ ಎಂದು ಅಮಿತ್ ಶಾ ರಾಜ್ಯ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಯಾರ ಬಗ್ಗೆಯೂ ಮುಲಾಜ್ ಬೇಡ
ಬರುವ ದಿನಗಳಲ್ಲಿ ಮತ್ತಷ್ಟು ಬಿಜೆಪಿಗೆ ಶಕ್ತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸಿ. ವಿರೋಧ ಪಕ್ಷಗಳ ವಿರುದ್ಧ ಪರಿಣಾಮಕಾರಿಯಾಗಿ ದಾಳಿ ಮಾಡಿ. ಯಾವ ನಾಯಕರ ಬಗ್ಗೆಯೂ ಮುಲಾಜ್ ಬೇಡ. ಯಾರೇ ಇದ್ದರೂ ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡಿ ಎಂದು ಅಮಿತ್ ಶಾ ಕರೆ ನೀಡಿದ್ದಾರೆ.
ಯಾರಿಗೂ ಯಾವುದೇ ಭಯ ಬೇಡ, ನಾವೇ ಮತ್ತೆ ಸರ್ಕಾರ ರಚನೆ ಮಾಡೋದು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಏನೆಲ್ಲಾ ಚರ್ಚೆ?
ಮುಂದಿನ 1 ತಿಂಗಳು ಹೇಗೆಲ್ಲಾ ಪ್ರಚಾರ ನಡೆಸಬೇಕು. ಮೋದಿ ರೋಡ್ ಶೋ ಎಲ್ಲೆಲ್ಲಿ ನಡೆಸಿದ್ರೆ ಲಾಭ? ಕೇಂದ್ರ ಸಚಿವರು ರಾಜ್ಯದಲ್ಲಿ ಎಲ್ಲೆಲ್ಲಿ ಸಮಾವೇಶ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆದಿದೆ.
ಅಲ್ಲದೇ ಮೀಸಲಾತಿ ಜಾರಿ, ಟಿಕೆಟ್ ಆಯ್ಕೆ, ಮತದಾರರ ಅಭಿಪ್ರಾಯದ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಇದೇ ವೇಳೆ ಬಿಜೆಪಿಯಲ್ಲಿ ಪರಸ್ಪರ ಮುನಿಸಿಕೊಂಡಿದ್ದವರನ್ನೂ ಒಟ್ಟಿಗೆ ಸೇರಿಸೋ ಕೆಲಸ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ