News18 India World Cup 2019

'ಆಪರೇಷನ್ ಕಮಲ'ಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮಿತ್ ಶಾ?; ಯಡಿಯೂರಪ್ಪ ನಿವಾಸದಲ್ಲಿ ನಾಯಕರ ದಂಡು!

news18
Updated:September 11, 2018, 12:11 PM IST
'ಆಪರೇಷನ್ ಕಮಲ'ಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮಿತ್ ಶಾ?; ಯಡಿಯೂರಪ್ಪ ನಿವಾಸದಲ್ಲಿ ನಾಯಕರ ದಂಡು!
ಅಮಿತ್ ಶಾ
news18
Updated: September 11, 2018, 12:11 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.11):  ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಉರುಳಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಅದಕ್ಕಾಗಿ ಆಪರೇಷನ್ ಕಮಲ ನಡೆಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರಿಂದ ಗ್ರೀಸ್ ಸಿಗ್ನಲ್​ ಸಿಕ್ಕಿದೆ ಎನ್ನಲಾಗಿದೆ.

ಗುಪ್ತವಾಗಿ ಆಪರೇಷನ್ ಕಮಲ ನಡೆಸುವಂತೆ ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಜವಾಬ್ದಾರಿಯನ್ನು ಶ್ರೀರಾಮುಲು, ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿಗೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್​ ಸೂಚನೆಯಂತೆ ನಾಲ್ಕು ಹಂತದಲ್ಲಿ ಆಪರೇಷನ್ ಮಾಡುವುದಾಗಿ ರಾಜ್ಯ ನಾಯಕರಿಂದ ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಗರಿಗೆದರಿದ ಚಟುವಟಿಕೆ

ಆಪರೇಷನ್ ಕಮಲಗೆ ಹೈಕಮಾಂಡ್​ನಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ ಬೆನ್ನಲ್ಲೆ, ಬಿ.ಎಸ್​. ಯಡಿಯೂರಪ್ಪ ಅವರ ಬೆಂಗಳೂರು ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಡಾಲರ್ಸ್​ ಕಾಲೊನಿಯಲ್ಲಿರುವ ಮನೆಗೆ ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ್, ತೇರದಾಳದ ಸಿದ್ದು ಸವಧಿ, ಉಮೇಶ್​ ಕತ್ತಿ, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಹಾಜರಿದ್ದಾರೆ. 
Loading...

ಜಾರಕಿಹೊಳಿ ಸಹೋದರರನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಚುರುಕುಗೊಂಡಿದ್ದು, ಆಪರೇಷನ್ ಕಮಲಗೆ ಸೂತ್ರ ಹೆಣೆಯಲಾರಂಭಿಸಿದ್ದಾರೆ.

ಇದನ್ನು ಓದಿ: ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ಸಿಎಂ ಎಂಟ್ರಿ, ಜಾರಕಿಹೊಳಿ ಬ್ರದರ್ಸ್​ ಭೇಟಿಯಾದ ದೇವೇಂದ್ರ ಫಡ್ನವೀಸ್?

ಒಟ್ಟು ನಾಲ್ಕು ಹಂತದಲ್ಲಿ ಕಾಂಗ್ರೆಸ್​ ಶಾಸಕರನ್ನು ಕರೆತರಲು ಯಡಿಯೂರಪ್ಪ ಉಪಾಯ ಮಾಡಿದ್ದಾರೆ. ಎಲ್ಲರನ್ನು ಒಟ್ಟಿಗೆ ಕರೆತರುವುದು ಕಷ್ಟದ ಕೆಲಸ ಹಾಗಾಗಿ ನಾಲ್ಕು ಹಂತದಲ್ಲಿ ಕರೆ ತರಲು ಚಿಂತನೆ​ ಮಾಡಿದ್ದಾರೆ ಎನ್ನಲಾಗುತ್ತಿದೆ.

ಜಾರಕಿಹೊಳಿ ಬದರ್ಸ್​ ನಡೆಯ ಬಗ್ಗೆ ಆತಂಕಗೊಂಡಿರುವ ಮೈತ್ರಿ ಸರ್ಕಾರ ಅವರನ್ನು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದೆ. ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರ್​ ಅವರ ನಿವಾಸದಲ್ಲೂ ಕಾಂಗ್ರೆಸ್​ ಮುಖಂಡರು ಮಂಗಳವಾರ ಸಭೆ ನಡೆಸಿದ್ದು, ಬಿಜೆಪಿ ಯತ್ನಗಳನ್ನು ವಿಫಲಗೊಳಿಸಲು ತಂತ್ರ ರೂಪಿಸಲಾಗುತ್ತಿದೆ.

ರಮೇಶ್​ ಜಾರಕಿಹೊಳಿಗೆ ಜೊತೆಗೆ ಪರಮೇಶ್ವರ್ ಅರ್ಧ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ. ಈ ಬಗ್ಗೆ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...