• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Amit Shah: ಮೈಸೂರು, ಕರಾವಳಿ ಬಳಿಕ ಕಲ್ಯಾಣ ಕರ್ನಾಟಕ ಗುರಿ; ಜನಾರ್ದನ ರೆಡ್ಡಿ ತವರಲ್ಲಿ ಅಮಿತ್‌ ಶಾ ಪಾಲಿಟಿಕ್ಸ್‌

Amit Shah: ಮೈಸೂರು, ಕರಾವಳಿ ಬಳಿಕ ಕಲ್ಯಾಣ ಕರ್ನಾಟಕ ಗುರಿ; ಜನಾರ್ದನ ರೆಡ್ಡಿ ತವರಲ್ಲಿ ಅಮಿತ್‌ ಶಾ ಪಾಲಿಟಿಕ್ಸ್‌

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಜೆಡಿಎಸ್ ಪರಿವಾರವಾರಕ್ಕೆ ಅಂಟಿಕೊಂಡಿದೆ. ಮನೆಯ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ. ಮನೆ ಯಾರು ನಡೆಸುತ್ತಾರೋ ಅಂತ ನನಗೆ ಅಚ್ಚರಿ ಆಗುತ್ತೆ. ಕಾಂಗ್ರೆಸ್ ಪೂರ್ಣ ಕುಟುಂಬ ರಾಜಕಾರಣ ಒಳಗೊಂಡಿದೆ. ಇವೆರಡೂ ಪಕ್ಷಗಳಿಗಿಂತ ವಿಭಿನ್ನ ಪಕ್ಷ ಬಿಜೆಪಿ ಎಂದು ಅಮಿತ್ ಶಾ ಹೇಳಿದ್ದಾರೆ.

  • Share this:

ಬಳ್ಳಾರಿ: ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) ಬಿಜೆಪಿಗೆ ಒಂದಲ್ಲ ಅಂತ ಮೂರು ಮೂರು ಹೊಡೆತಗಳು. ರಾಹುಲ್​ಗಾಂಧಿ (Rahul Gandhi) ಭಾರತ್ ​ಜೋಡೋ ಯಾತ್ರೆ  (Bharat Jodo Yatra) ಜೊತೆ ಭರ್ಜರಿ ಸಮಾವೇಶ ನಡೆಸಿದ್ದರು. ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ (HD Kumaraswamy) ಅವರು ಪಂಚರತ್ನ ರಥಯಾತ್ರೆ (Pancharatna Yatra) ಮಾಡಿ ಜನಮನ ಗೆದ್ದಿದ್ದರು. ಇದರ ಮಧ್ಯೆ ಬಿಜೆಪಿ ಮೇಲೆ ರೆಬೆಲ್​ ಆಗಿರುವ ಜನಾರ್ದನ ರೆಡ್ಡಿ (Janardhan Reddy) ಅಬ್ಬರ. ಎಲ್ಲರನ್ನೂ ಕಟ್ಟಿಹಾಕಿ ಬಿಜೆಪಿಗೆ ಹೆಚ್ಚು ಸೀಟ್​ ಗಿಟ್ಟಿಸಲು ಸಚಿವ ಶ್ರೀರಾಮುಲು (Sriramulu) ಇವತ್ತು ಅಮಿತ್​​ ಶಾರನ್ನು ಕರೆಸಿದರು. ಕಾಂಗ್ರೆಸ್ (Congress)​ ಭದ್ರಕೋಟೆ ಆಗಿರುವ ಸಂಡೂರಿನಲ್ಲಿ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಭಾಗಿಯಾಗಿ ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ.


ಬಿಜೆಪಿ ಗೆದ್ದರೆ 5 ವರ್ಷದಲ್ಲಿ ರಾಜ್ಯ ಭ್ರಷ್ಟಾಚಾರ ಮುಕ್ತ


ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವ​ ಅಮಿತ್ ಶಾ, ಮೋದಿ ನೇತೃತ್ವದ ಬಿಜೆಪಿ ಭಾರತವನ್ನು ಬಲಪಡಿಸುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್​ಗೆ ತುಕ್ಡೆ-ತುಕ್ಡೆ ಗ್ಯಾಂಗ್‌ ಜೊತೆ ಸಂಪರ್ಕವಿದೆ. ಜೆಡಿಎಸ್​​ ಕೂಡ ಕುಟುಂಬದ ಪಕ್ಷ.


ಇಬ್ಬರನ್ನ ದೂರವಿಟ್ಟು ಭ್ರಷ್ಟಾಚಾರ ತೊಡೆದು ಹಾಕಲು ಬಿಜೆಪಿ ಗೆಲ್ಲಿಸಿ. 5 ವರ್ಷದಲ್ಲಿ ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ಒನ್ ಸ್ಥಾನಕ್ಕೆ ತರುತ್ತೇವೆ ಎಂದು ತಿಳಿಸಿದರು. ಆ ಬಳಿಕ ಸಮಾವೇಶದ ಜೊತೆಗೆ ಬಳ್ಳಾರಿ, ವಿಜಯನಗರ ರಾಯಚೂರು, ಕೊಪ್ಪಳ ಜಿಲ್ಲೆ ಮುಖಂಡರು, ಶಾಸಕರು, ಸಂಸದರು, ಹಾಗು ಟಿಕೆಟ್​ ಆಕಾಂಕ್ಷಿಗಳ ಜೊತೆ ಅಮಿತ್​ ಶಾ ಕೋರ್​ ಕಮಿಟಿ ಸಭೆನೂ ಮಾಡಿದ್ದರು.




ಇದನ್ನೂ ಓದಿ: CT Ravi: 'ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ಮಠಾಧೀಶರ ಮೌನ' -ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ


ಬೆಂಗಳೂರಲ್ಲಿ ಬಿಜೆಪಿ ಎಲೆಕ್ಷನ್​ ಉಸ್ತುವಾರಿಗಳ ಸಭೆ


ಅಮಿತ್ ಶಾ ಇಂದು ಕರ್ನಾಟಕ್ಕೆ ಆಗಮಿಸುತ್ತಿದ್ದಂತೆ ಇತ್ತ ಬೆಂಗಳೂರಿಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿರುವ ಧರ್ಮೇಂದ್ರ ಪ್ರಧಾನ್​. ಮನ್ಸೂಖ್​ ಮಾಂಡವಿಯಾ, ಅಣ್ಣಾಮಲೈ ಆಗಮಿಸಿದ್ದರು. ಬಿಜೆಪಿ ಕಚೇರಿಯಲ್ಲಿ ಕೋರ್​ ಕಮಿಟಿ ಸಭೆ ನಡೆಸಿದ ಆ ಬಳಿಕ ಸಂಜೆ ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಅಮಿತ್​ ಶಾ ಅವರ ಜೊತೆಯೂ ಬಿಜೆಪಿ ಸಭೆ ನಡೆಸಿದರು.


ಸಭೆಯಲ್ಲಿ ಬೆಂಗಳೂರು ನಗರದ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳಿ ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಕೆ ಅಣ್ಣಾಮಲೈ, ಸಿ ಟಿ ರವಿ ಭಾಗಿಯಾಗಿದ್ದರು.



ಇದನ್ನೂ ಓದಿ: Pratap Simha: ಮೈಮರೆತರೆ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ: ಬಿಜೆಪಿ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ!


ಜೆಡಿಎಸ್​ ಪಕ್ಷದಲ್ಲಿ ಮನೆಯ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ


ಟೌನ್​​ಹಾಲ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಜೆಡಿಎಸ್ ಪರಿವಾರವಾರಕ್ಕೆ ಅಂಟಿಕೊಂಡಿದೆ. ಮನೆಯ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ. ಮನೆ ಯಾರು ನಡೆಸುತ್ತಾರೋ ಅಂತ ನನಗೆ ಅಚ್ಚರಿ ಆಗುತ್ತೆ.


ಕಾಂಗ್ರೆಸ್ ಪೂರ್ಣ ಕುಟುಂಬ ರಾಜಕಾರಣ ಒಳಗೊಂಡಿದೆ. ಇವೆರಡೂ ಪಕ್ಷಗಳಿಗಿಂತ ವಿಭಿನ್ನ ಪಕ್ಷ ಬಿಜೆಪಿ. ನಮ್ಮ ಪಕ್ಷ ಪರಿವಾರವಾರಕ್ಕೆ ಬಲವಾಗಿ ವಿರೋಧಿಸುತ್ತದೆ. ಬ್ರಿಟಿಷ್ ಅಧಿಕಾರಿ ಸ್ಥಾಪಿಸಿದ ಪಕ್ಷ ಕಾಂಗ್ರೆಸ್, ಬ್ರಿಟಿಷರ ಮನಸ್ಥಿತಿಯೇ ಒಳಗೊಂಡ ಪಕ್ಷ. ನಮ್ಮ ಪಕ್ಷದ ಐಡಿಯಾಲಜಿ ಸಾಂಸ್ಕೃತಿಕ ರಾಷ್ಟ್ರವಾದ ಆಗಿದೆ ಎಂದು ಹೇಳಿದ್ದರು.

Published by:Sumanth SN
First published: