Amit Shah: ಕುತೂಹಲ ಮೂಡಿಸಿದ ಹೈ ಕಮಾಂಡ್​ ಸಭೆ; ರಾಜ್ಯ ರಾಜಕೀಯದಲ್ಲಿ ನಡೆಯಲಿದ್ಯಾ ಮಹತ್ವದ ಬದಲಾವಣೆ?

ಅಮಿತ್ ಶಾ ರಾಜ್ಯ ಭೇಟಿಗೂ ಮುನ್ನ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಮಹತ್ವದ ಸಭೆ ನಡೆಸಿದ್ದಾರೆ. ಜೆ.ಪಿ ನಡ್ಡಾ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಸಿದ್ದು, ಅಮಿತ್ ಶಾ, ಬಿ.ಎಲ್ ಸಂತೋಷ್, ರಾಜನಾಥ್ ಸಿಂಗ್ ಭಾಗಿ ಆಗಿದ್ದಾರೆ.

ಅಮಿತ್​ ಶಾ

ಅಮಿತ್​ ಶಾ

 • Share this:
  ಬೆಂಗಳೂರು (ಮೇ.2): ರಾಜ್ಯದಲ್ಲಿ ಹಿಜಾಬ್​​, ಹಲಾಲ್​ ವಿವಾದಗಳ ನಡುವೆ ಸಚಿವರ ಮೇಲಿನ ಆರೋಪಗಳು, ಪ್ರಕರಣಗಳು ರಾಜ್ಯ ಮಾತ್ರವಲ್ಲದೇ, ದೇಶದಲ್ಲಿ ಸುದ್ದಿಯಾಗುತ್ತಿವೆ. ಮುಂದಿನ ವರ್ಷ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಈ ಎಲ್ಲಾ ಅಂಶಗಳು ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆ ಕೇಂದ್ರ ಸರ್ಕಾರ ಆಲರ್ಟ್​​ ಆಗಿದೆ. ಸಚಿವ ಸಂಪುಟ ವಿಸ್ತರಣೆ ಕಾರ್ಯದ ನೆಪದಲ್ಲಿ ರಾಜ್ಯಕ್ಕೆ ಬರಲಿರುವ ಬಿಜೆಪಿ ನಾಯಕರು (BJP Leader) ಪಕ್ಷದಲ್ಲಿ ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದ್ದಾರೆ ಎಂಬ ಊಹಾಪೋಹಾಗಳು ಕೇಳಿ ಬಂದಿವೆ. ಇನ್ನು ರಾಜ್ಯಕ್ಕೆ ಈಗಾಗಲೇ ಉಸ್ತುವಾರಿ ಅರುಣ್​ ಸಿಂಗ್​ ಆಗಮಿಸಿದ್ದು, ಅವರು ಬೆಂಗಳೂರಿಗೆ ಬಂದಿಳಿದಾಕ್ಷಣ ನೇರವಾಗಿ ಸಿಎಂ ಬೊಮ್ಮಾಯಿ ಭೇಟಿಗೆ ಮುಂದಾಗಿದ್ದಾರೆ

  ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇದೇ ವೇಳೆ ಕೋರ್​ ಕಮಿಟಿ ಸಭೆ ಸೇರಿದಂತೆ ಮುಖ್ಯಮಂತ್ರಿಗಳು, ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನು ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

  ಬೆಂಗಳೂರು ಭೇಟಿಗೂ ಮುನ್ನ ಕುತೂಹಲ ಮೂಡಿಸಿದ ಸಭೆ

  ಅಮಿತ್ ಶಾ ರಾಜ್ಯ ಭೇಟಿಗೂ ಮುನ್ನ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಮಹತ್ವದ ಸಭೆ ನಡೆಸಿದ್ದಾರೆ. ಜೆ.ಪಿ ನಡ್ಡಾ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಸಿದ್ದು, ಅಮಿತ್ ಶಾ, ಬಿ.ಎಲ್ ಸಂತೋಷ್, ರಾಜನಾಥ್ ಸಿಂಗ್ ಭಾಗಿ ಆಗಿದ್ದಾರೆ. ದಿಢೀರನೇ ನಡೆದ ಈ ಸಭೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ಕೇಳಿಬರುತ್ತಿರುವ ಅಕ್ರಮಗಳ ಕುರಿತು ಚರ್ಚೆ ಆಗಿದ್ದು, ಇದರಿಂದ ಪಕ್ಷ, ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಗಿದೆ.

  ಸಂಚಲನ ಮೂಡಿಸಲಿರುವ ಭೇಟಿ
  ರಾಜ್ಯದ ನಾಯಕತ್ವದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಅವರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆಯಾಗಲಿದೆಯಾ ಎಂಬ ಚರ್ಚೆ ಕೂಡ ಬಂದಿದೆ. ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ ಈ ಪ್ರಯೋಗವು ಪಂಜಾಬ್ ಮತ್ತು ಗುಜರಾತ್‌ನಲ್ಲಿ ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ಸಂತೋಷ್​ ಹೇಳಿಕೆ ನೀಡಿದ್ದರು. ಈ ಹಿನ್ನಲೆ ಚುನಾವಣೆ ಉದ್ದೇಶಕ್ಕಾಗಿ ಬೊಮ್ಮಾಯಿ ನಾಯಕತ್ವ ಬದಲಾವಣೆ ಆದರೆ ಅಚ್ಚರಿಯಿಲ್ಲ ಎಂಬ ಮಾತು ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಅಮಿತ್ ಶಾ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವ ನಿರೀಕ್ಷೆ ಇದೆ

  ಇದನ್ನು ಓದಿ: Belagavi MES ಮುಖಂಡನ ವಿವಾದಾತ್ಮಕ ಪೋಸ್ಟ್; ಸಿಎಂ ಖಡಕ್​ ಎಚ್ಚರಿಕೆ

  150 ಮಿಷನ್ ಗುರಿ
  ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ 150 ಮಿಷನ್​​ ಹೊಂದಿರುವ ಬಿಜೆಪಿ ಈ ಕುರಿತು ನಾಳೆ ನಾಯಕರೊಂದಿಗೆ ಚರ್ಚೆ ನಡೆಸಲಿದೆ. ಈ ಸಂಬಂಧ ಬಿಜೆಪಿ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ಕೂಡ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

  ಸಂಪುಟ ವಿಸ್ತರಣೆಯಾ? ಪುನಾರಚನೆಯಾ?
  ಈಗಾಗಲೇ ಬಿಜೆಪಿ ಸರ್ಕಾರದಲ್ಲಿ ಮೂವರು ಸಚಿವರು ರಾಜೀನಾಮೆ ನೀಡಿದ್ದು, ಉಳಿದ ನಾಯಕರು ಸಂಪುಟ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಸಚಿವರ ಮೇಲೆ ಕೇಳಿ ಬರುತ್ತಿರುವ ಆರೋಪದ ಹಿನ್ನಲೆ ಈ ಬಾರಿ ಸಂಪುಟ ವಿಸ್ತರಣೆ ನಡೆಯುತ್ತದಾ ಅಥವಾ ಪುನರಾಚನೆ ಆಗಲಿದ್ಯಾ ಎಂಬುದು ಅಮಿತ್​ ಶಾ ಭೇಟಿ ವೇಳೆ ಸ್ಪಷ್ಟವಾಗಲಿದೆ. ಸಂಪುಟಕ್ಕೆ 10 ಹೊಸ ಮುಖಗಳನ್ನು ಪರಿಚಯಿಸಲು ಪಕ್ಷವು ಉದ್ದೇಶಿಸಿದೆ. ಈ ಹಿನ್ನಲೆ ಸಂಪುಟದಲ್ಲಿ ಕಾರ್ಯನಿರ್ವಹಿಸದ ಹಿರಿಯ ಸಚಿವರನ್ನು ಕೈಬಿಡುವ ಪ್ರಸ್ತಾಪವಿದೆ ಎಂದು ಮೂಲಗಳು ತಿಳಿಸಿವೆ.

  ಇದನ್ನು ಓದಿ: 'ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು, ನಮಗೆ ಭಯ ಆಗುತ್ತಿದೆ'

  ರಾಜ್ಯದಲ್ಲಿನ ಆಕ್ರಮಣಕಾರಿ ಹಿಂದುತ್ವ ವಿಚಾರ ಕುರಿತು ಚರ್ಚೆ ಸಾಧ್ಯತೆ
  ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್​, ಹಲಾಲ್​ ಸೇರಿದಂತೆ ಅನೇಕ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತೊದೆ. ರಾಜ್ಯದ ಆಡಳಿತಾರೂಢ ಬಿಜೆಪಿಯ ಆಕ್ರಮಣಕಾರಿ ಹಿಂದುತ್ವ ಧೋರಣೆ ಮತ್ತು ರಾಜ್ಯದಲ್ಲಿನ ಪ್ರಸ್ತುತ ಅಶಾಂತಿಯ ರೀತಿಯ ಪರಿಸ್ಥಿತಿಯ ಬಗ್ಗೆಯೂ ಈ ವೇಳೆ ಕೇಂದ್ರ ಗೃಹ ಸಚಿವರು ಮಾಹಿತಿ ಪಡೆಯಲಿದ್ದಾರೆ.

  ಈಶ್ವರಪ್ಪ ರಾಜೀನಾಮೆ, ಪಿಎಸ್​ಐ ಹಗರಣ ಕುರಿತು ಮಾಹಿತಿ
  ಇನ್ನು ಸಂತೋಷ್​ ಪಾಟೀಲ್​ ಪ್ರಕರಣ ಸಂಬಂಧ ಈಶ್ವರಪ್ಪ ರಾಜೀನಾಮೆ ಮತ್ತು ಪಿಎಸ್​ಐ ಹಗರದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿ ಬಂದಿರುವ ಹಿನ್ನಲೆ ಈ ವಿಚಾರ ಕುರಿತು ಕೂಡ ಅವರು ಮಾಹಿತಿ ಪಡೆಯುವ ಸಾಧ್ಯತೆ ಇದೆ.
  Published by:Seema R
  First published: