ರಾಜ್ಯದಲ್ಲಿ ಹಕ್ಕಿ ಜ್ವರ ತಡೆಗೆ ಅಲರ್ಟ್ ಘೋಷಣೆ; ಐದು ಜಿಲ್ಲೆಗಳಲ್ಲಿ ಕೋಳಿ ಸಾಗಣೆಗೆ ನಿರ್ಬಂಧ ; ಸಚಿವ ಪ್ರಭು ಚವ್ಹಾಣ್​

ಬೆಂಗಳೂರು ಗ್ರಾಮಾಂತರ, ಮಡಿಕೇರಿ,ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಈ ಐದು ಜಿಲ್ಲೆಗಳ ಗಡಿಭಾಗದಲ್ಲಿ ಈಗಾಗಲೇ ಚೆಕ್ ಪೋಸ್ಟ್ ನಿರ್ಮಾಣ  ಮಾಡಿ ಕಟ್ಟೆಚ್ಚೆರ ವಹಿಸಲಾಗಿದೆ

ಸಚಿವ ಪ್ರಭು ಚವ್ಹಾಣ್

ಸಚಿವ ಪ್ರಭು ಚವ್ಹಾಣ್

  • Share this:
ಯಾದಗಿರಿ (ಜ. 12): ದೇಶದ ಕೆಲ  ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಇದರ ಪರಿಣಾಮ ರಾಜ್ಯ ಸರಕಾರ ಕೂಡ ಅಲರ್ಟ್ ಘೋಷಣೆ ಮಾಡಿದೆ. ಗಡಿಭಾಗದಲ್ಲಿ ವ್ಯಾಪಾಕ ಕಟ್ಟೆಚ್ಚೆರ ವಹಿಸಿ ಕೋಳಿಗಳ ಸಾಗಣೆಗೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಂದ ಎಲ್ಲಡೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.  ನಗರದಲ್ಲಿ ಮಾತನಾಡಿದ ಅವರು, ಹಕ್ಕಿಜ್ವರ ಭೀತಿಯಿಂದಾಗಿ ನೆರೆಯ ರಾಜ್ಯಗಳಿಂದ  ಐದು ಜಿಲ್ಲೆಗಳಲ್ಲಿ ಕೋಳಿ ಸಾಗಾಟ ಮಾಡದಂತೆ ಈಗಾಗಲೇ ಗಡಿಭಾಗದಲ್ಲಿ ಚೆಕ್ ಪೊಸ್ಟ್ ಗಳನ್ನು ಹಾಕಿ ನಿಗಾವಹಿಸಲಾಗುತ್ತಿದೆ.  ನೆರೆಯ ಮಹಾರಾಷ್ಟ್ರ, ಕೇರಳ ದಲ್ಲಿ ಈಗಾಗಲೇ ಹಕ್ಕಿ ಜ್ವರ ಕಾಣಿಸಿಕೊಂಡ ಪರಿಣಾಮ  ರಾಜ್ಯದ ಜನರು ಈಗ ಆತಂಕಗೊಂಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಈ ಕುರಿತು ಯಾವುದೇ ವರದಿಯಾಗಿಲ್ಲ.  ರಾಜ್ಯ ಸರಕಾರ ಈಗಾಗಲೇ ಅಗತ್ಯ ಕಟ್ಟುನಿಟ್ಟಿನ ಕ್ರಮವಹಿಸಿದೆ‌ ಎಂದರು

ರಾಜ್ಯದ ಬೆಂಗಳೂರು ಗ್ರಾಮಾಂತರ, ಮಡಿಕೇರಿ,ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಈ ಐದು ಜಿಲ್ಲೆಗಳ ಗಡಿಭಾಗದಲ್ಲಿ ಈಗಾಗಲೇ ಚೆಕ್ ಪೋಸ್ಟ್ ನಿರ್ಮಾಣ  ಮಾಡಿ ಕಟ್ಟೆಚ್ಚೆರ ವಹಿಸಲಾಗಿದೆ. ಅಲ್ಲದೇ ಎಲ್ಲಿಯೇ ಹಕ್ಕಿಗಳು ಸಾವನ್ನಪ್ಪಿದರೂ ಈ ಕುರಿತು ವರದಿ ಮಾಡುವಂತೆ ಸೂಚಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ ಎಂದರು.

ಯಾವ ಸಚಿವರನ್ನು ಕೈಬಿಡಲ್ಲ...!

ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು,  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ.  ಜಿಲ್ಲೆಗೆ ಕೂಡ ಮೆಡಿಕಲ್ ಕಾಲೇಜ್ ಸೇರಿ ಹಲವಾರು ಕೊಡುಗೆ ನೀಡಿದ್ದಾರೆ. ಅವರೇ ಸಿಎಂ ಆಗಿ ತಮ್ಮ ಅಧಿಕಾರವಧಿ ಪೂರ್ಣಗೊಳಿಸುತ್ತಾರೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನಾಳೆ ಸಚಿವರಾಗಿ 7ರಿಂದ 8 ಶಾಸಕರ ಪದಗ್ರಹಣ ಎಂದ ಸಿಎಂ ಬಿಎಸ್​ವೈ; ಸಂಜೆ ಪಟ್ಟಿ ಬಿಡುಗಡೆ

ಸಂಪುಟ ವಿಸ್ತರಣೆ ಹಿನ್ನಲೆ ಕೆಲ ಸಚಿವರಿಗೆ ಕೋಕ್​ ನೀಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದರೆ, ಸಿಎಂ ಬಿಎಸ್ ವೈ ಅವರು ಯಾವ ಸಚಿವರನ್ನು ಕೈಬಿಡುವುದಿಲ್ಲ.  ಸಚಿವ ಸಂಪುಟ ವಿಸ್ತರಣೆ ಇದ್ದು, ಪುನರ್ ರಚನೆ ನಡೆಯುವುದಿಲ್ಲ. ಸಿಎಂ ಅವರು ರಾಷ್ಟ್ರೀಯ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ.  ಸಂಪುಟ ವಿಸ್ತರಣೆ ಮಾತ್ರ ಇದ್ದು ವಿನಃ ಪುನರ್ ರಚನೆ  ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು

ನಾನು ಕೂಡ 30 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಇದ್ದು ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದೇನೆ. ಸಿಎಂ ಬಿಎಸ್ ವೈ ಸಂಪುಟದಲ್ಲಿ ಇದ್ದು  ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಿಎಂ ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೆನೆ. ಬಿಜೆಪಿ ಪಕ್ಷ ನನಗೆ ಮನೆ ಇದ್ದಹಾಗೆ ನಮ್ಮ ಹೈಕಮಾಂಡ್ ಸೂಚನೆಯಂತೆ ಸಿಎಂ ಮುಂದೆ ಸಂಪುಟ ರಚನೆ ಮಾಡಲಿದ್ದಾರೆ. ಬಿಎಸ್ ವೈ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿದ್ದೆನೆಂದರು.
Published by:Seema R
First published: