• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಕಾಂಗ್ರೆಸ್​ ಸೇರ್ಪಡೆಯಾಗೋ ವದಂತಿ ಮಧ್ಯೆ ಸೋಮಣ್ಣ ಜೊತೆ ಸಿಎಂ, ಜೋಶಿ ಮೀಟಿಂಗ್!

Karnataka Politics: ಕಾಂಗ್ರೆಸ್​ ಸೇರ್ಪಡೆಯಾಗೋ ವದಂತಿ ಮಧ್ಯೆ ಸೋಮಣ್ಣ ಜೊತೆ ಸಿಎಂ, ಜೋಶಿ ಮೀಟಿಂಗ್!

ವಿ. ಸೋಮಣ್ಣ ಜೊತೆ ಬಿಜೆಪಿ ಹಿರಿಯ ನಾಯಕರು

ವಿ. ಸೋಮಣ್ಣ ಜೊತೆ ಬಿಜೆಪಿ ಹಿರಿಯ ನಾಯಕರು

ಸೋಮಣ್ಣ ಕಾಂಗ್ರೆಸ್ ಗೆ ಸೇರ್ತಾರೆ ಅನ್ನೋ ದಟ್ಟ ವದಂತಿಯ ಬೆನ್ನ ಹಿಂದೆಯೇ ಬಿಜೆಪಿ ಘಟಾನುಘಟಿಗಳು ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಸಿಎಂ ಹಾಗೂ ಪ್ರಹ್ಲಾದ್ ಜೋಶಿ ನಡೆಸಿದ ಉಪಹಾರ ಪಾಲಿಟಿಕ್ಸ್ ಇದಕ್ಕೆ ಸಾಕ್ಷಿಯಾಗಿದೆ.

 • News18 Kannada
 • 2-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ(ಮಾ.13): ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ತೊರೆಯುತ್ತಾರೆಂಬ ವದಂತಿ ಬೆನ್ನ ಹಿಂದೆಯೇ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನ ಸಿಎಂ ಬೊಮ್ಮಾಯಿ ಮತ್ತಿತರರು ಆರಂಭಿಸಿದ್ದಾರೆ. ಕೆಲ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದ ವಿ.ಸೋಮಣ್ಣ ಧಾರವಾಡದಲ್ಲಿ ನಡೆದ ಐಐಟಿ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದರು. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸೋಮಣ್ಣ ಭಾಗಿಯಾಗಿದ್ದರು. ಸೋಮಣ್ಣ ಕೈ ಹಿಡಿಯುತ್ತಾರೆಂಬ ಊಹಾಪೋಹಗಳಿಗೆ ಮುಲಾಮು ಹಚ್ಚಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಮ್ ಬಸವರಾಜ ಬೊಮ್ಮಾಯಿ ಉಪಹಾರ ಪಾಲಿಟಿಕ್ಸ್ ಮಾಡಿದ್ದಾರೆ‌.


ಉಭಯ ನಾಯಕರು ವಿ.ಸೋಮಣ್ಣ ಜೊತೆಗೆ ಸಂಧಾನ ಸಭೆ ನಡೆಸಿದರು‌. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಉಪಹಾರ ಸೇವನೆ ಮಾಡುತ್ತಲೇ ಚರ್ಚೆ ನಡೆಸಿದರು‌. ಬರೋಬ್ಬರಿ ಒಂದು ಗಂಟೆಗಳ ವಿ.ಸೋಮಣ್ಣರೊಂದಿಗೆ ಸಭೆ ಮಾಡಿದ್ದಾರೆ‌. ವಸತಿ ಸಚಿವರನ್ನ ಮನವೊಲಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನಿಸಿದ್ದಾರೆ. ಧಾರವಾಡದಲ್ಲಿ ನಡೆದ ಐಐಟಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದ ವಿ.ಸೋಮಣ್ಣರನ್ನು ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದ ನಾಯಕರು ಸಂಧಾನ ಸಭೆ ನಡೆಸಿದರು.


ಇದನ್ನೂ ಓದಿ: Ramesh Jarkiholi: CD ಇಟ್ಟುಕೊಂಡು ಸಚಿವರನ್ನು ಹೆದರಿಸುತ್ತಿದ್ದಾರಾ ಕೆಪಿಸಿಸಿ ಅಧ್ಯಕ್ಷರು? ಸಾಹುಕಾರ್​ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?


ಒಂದು ಹಂತದಲ್ಲಿ ಮಾತುಕತೆಗೆ ಮನವೊಲಿಕೆಯಾಗಿದ್ದಾರೆ ಅನ್ನೋ ವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಜಗದೀಶ್, ಸಚಿವ ಭೈರತಿ ಬಸವರಾಜ ಸೇರಿದಂತೆ ಹಲವು ನಾಯಕರು ಕೂಡಾ ಭಾಗಿ. ಅಂತಿಮವಾಗಿ ಸೋಮಣ್ಣ ಮನವೊಲಿಕೆಯಾಯಿತೋ ಇಲ್ಲವೋ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.


ಸೋಮಣ್ಣ ನಮ್ಮೊಂದಿಗೇ ಇರ್ತಾರೆ


ವಿ.ಸೋಮಣ್ಣ ಜೊತೆ ಖಾಸಗಿ ಹೋಟೆಲ್ ನಲ್ಲಿ ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮುಂದೆಯೂ ಅವರು ನಮ್ಮ ಜೊತೆಗೇ ಇರ್ತಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ರೀತಿಯ ಮಾತುಕತೆ ಮಾಡಿಲ್ಲ. ಸೋಮಣ್ಣ ನಾನು ಹಳೆಯ ಸ್ನೇಹಿತರು. ಸೋಮಣ್ಣ ನಮ್ಮ ಜೊತೆಗಿದಾರೆ, ನಮ್ಮ ಜೊತೆಗೇ ಇರ್ತಾರೆ ಎಂದರು.


ಇದನ್ನೂ ಓದಿ: Bengaluru: BMTC ಕಂಡಕ್ಟರ್ ಸಜೀವ ದಹನ ಕೇಸ್​ಗೆ ಮತ್ತೆ ಟ್ವಿಸ್ಟ್​; ಡ್ರೈವರ್​ ಕೈವಾಡ ಶಂಕೆ! ತನಿಖೆ ಚುರುಕುಗೊಳಿಸಿದ ಪೊಲೀಸರು


ರೌಡಿ ಶೀಟರ್ ಗೆ ಮೋದಿ ಕೈಮುಗಿದಿದ್ದಕ್ಕೆ ಸಿಎಂ ಸಮರ್ಥನೆ


ಸಾರ್ವಜನಿಕವಾಗಿ ಯಾರೇ ಬಂದ್ರೂ ಮೋದಿ ನಮಸ್ಕಾರ ಮಾಡ್ತಾರೆ ಅನ್ನೋ ಮುಲಕ ಸಿಎಂ ಬಸವರಾಜ ಬೊಮ್ಮಾಯಿ ರೌಡಿಶೀಟರ್ ಗೆ ಮೋದಿ ನಮಸ್ಕಾರ ಮಾಡಿರೋದನ್ನ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರೌಡಿಶೀಟರ್ ಫೈಟರ್ ರವಿಗೆ ಮೋದಿ ನಮಸ್ಕಾರ ಮಾಡೋ ಮೂಲಕ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ನಂತರ ಸಾರ್ವಜನಿಕವಾಗಿ ಯಾರೇ ಬಂದ್ರೂ ಮೋದಿ ನಮಸ್ಕಾರ ಮಾಡ್ತಾರೆ ಅನ್ನೋ ಸಮಜಾಯಿಷಿ ನೀಡಿದರು.


ಪ್ರಧಾನಿ ನರೇಂದ್ರ ಮೋದಿ/ ರೌಡಿಶೀಟರ್ ಫೈಟರ್ ರವಿ


ಕರ್ನಾಟಕದಲ್ಲಿ ಮೋದಿ ಸುನಾಮಿ


ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ. ಅವರು ಬಂದು ಹೋಗಿದ್ದರಿಂದ ಮೋದಿ ಮತ್ತು ಬಿಜೆಪಿ ಪರ ಒಲವು ಹೆಚ್ಚಾಗಿದೆ. ರಾಜ್ಯದಲ್ಲಿ ಮೋದಿ ಸುನಾಮಿ ಎದ್ದಿದೆ ಎಂದರು. ಕಾಮಗಾರಿಗಳ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿಯೇ ಕ್ರೆಡಿಟ್ ವಾರ್ ಇದೆ. ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡೆ ಹಂಚುವ ಕೆಲಸ ಮಾಡ್ತಿದಾರೆ ಅನ್ನೋ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು.
ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಜೊತೆ ನಮ್ಮವರು ಮಾತುಕತೆ ನಡೆಸಿದ್ದಾರೆ. ಇಂಧನ ಸಚಿವರು ಚರ್ಚೆಯಲ್ಲಿದ್ದಾರೆ. ಕೂಡಲೇ ಅದನ್ನು ಬಗೆಹರಿಸುತ್ತಾರೆ. ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದಾರೆ. ಎಲ್ಲ ವಿವರಗಳನ್ನ ಹಂಚಿಕೊಳ್ಳೋಕೆ ಆಗಲ್ಲ. ಮೋದಿ ದೇವರು ಎಂಬ ಕಾಂಗ್ರೆಸ್ ಟೀಕೆ ವಿಚಾರಕ್ಕೆ, ನಾವು ಮೋದಿ ಅವರನ್ನ ದೇವರು ಅಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಅಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ. ಮೋದಿ ಗಡಿಯಲ್ಲಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ. ದೇಶಕ್ಕೆ ಮೋದಿ ಆಪತ್ಬಾಂಧವ ಎಂದರು.


-ಶಿವರಾಮ ಅಸುಂಡಿ, ನ್ಯೂಸ್​ 18 ಕನ್ನಡ

Published by:Precilla Olivia Dias
First published: