• Home
  • »
  • News
  • »
  • state
  • »
  • ಕೊರೋನಾ ಬಂದರೂ ನಿಂತಿಲ್ಲ ರಾಜಕೀಯ ಕೆಸರೆರೆಚಾಟ; ಕೋಲಾರದಲ್ಲಿ ರಾಜಕಾರಣಿಗಳ ಮಾತಿನ ಫೈಟ್​

ಕೊರೋನಾ ಬಂದರೂ ನಿಂತಿಲ್ಲ ರಾಜಕೀಯ ಕೆಸರೆರೆಚಾಟ; ಕೋಲಾರದಲ್ಲಿ ರಾಜಕಾರಣಿಗಳ ಮಾತಿನ ಫೈಟ್​

ಎಂಪಿ ಮುನಿಸ್ವಾಮಿ ಹಾಗೂ ನಾಗೇಶ್​

ಎಂಪಿ ಮುನಿಸ್ವಾಮಿ ಹಾಗೂ ನಾಗೇಶ್​

ಇತ್ತೀಚೆಗೆ ಕೋಲಾರದಲ್ಲಿ ಮಾತನಾಡಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಬಿಜೆಪಿ ಮುಖಂಡರು ಅಧಿಕಾರಿಗಳನ್ನ ಬ್ಲಾಕ್‌ ಮೇಲ್ ಮಾಡಿ ರೋಲ್ ಕಾಲ್ ಮಾಡುತ್ತಿದ್ದು, ಗಾಳಿಗೆ ಬಂದಿರೋ ರಾಜಕಾರಣಿಗಳು ದಬ್ಬಾಳಿಕೆ ನಡೆಸ್ತಿದ್ದಾರೆಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.

  • Share this:

ಕೋಲಾರ (ಮೇ 28): ಮಹಾಮಾರಿ ಕೊರೋನಾ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಆದರೆ ಈ  ವೇಳೆ ಕೋಲಾರದಲ್ಲಿ ರಾಜಕೀಯ ನಾಯಕರ ಮಧ್ಯೆಯ ಮಾತಿನ ಸಮರ ಜೋರಾಗಿದೆ. 


ಇತ್ತೀಚೆಗೆ ಕೋಲಾರದಲ್ಲಿ ಮಾತನಾಡಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಬಿಜೆಪಿ ಮುಖಂಡರು ಅಧಿಕಾರಿಗಳನ್ನ ಬ್ಲಾಕ್‌ ಮೇಲ್ ಮಾಡಿ ರೋಲ್ ಕಾಲ್ ಮಾಡುತ್ತಿದ್ದು, ಗಾಳಿಗೆ ಬಂದಿರೋ ರಾಜಕಾರಣಿಗಳು ದಬ್ಬಾಳಿಕೆ ನಡೆಸ್ತಿದ್ದಾರೆಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಈ ಮಾತುಗಳು ಕೋಲಾರದಲ್ಲಿ ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು ನಿಜವಾಗಲು ಅಧಿಕಾರಿಗಳನ್ನ ಬ್ಲಾಕ್ ಮೇಲ್ ಮಾಡಿ ಬಿಜೆಪಿ ಮುಖಂಡರು ಹಣ ವಸೂಲಿ ಮಾಡ್ತಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.  ಜೊತೆಗೆ ಉಸ್ತುವಾರಿ ಸಚಿವ ಎಚ್ ನಾಗೇಶ್ ಹಾಗೂ ಸಂಸದ ಎಸ್ ಮುನಿಸ್ವಾಮಿ ಸದ್ಯ ಅಧಿಕಾರದಲ್ಲಿರೊ ಇಬ್ಬರು ರಾಜಕಾರಣಿಗಳಾಗಿದ್ದು ಇದೀಗ ಸಂಸದ ಎಸ್ ಮುನಿಸ್ವಾಮಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ಶಾಸಕ ಕೆವೈ ನಂಜೇಗೌಡ ವಿರುದ್ದವೆ ಹಲವು ಆರೋಪಗಳನ್ನ ಮಾಡಿದ್ದಾರೆ.


ಕೋಲಾರ ನಗರ ಹೊರವಲಯದ 72 ಹೆಕ್ಟೇರ್ ಪ್ರದೇಶದ ಕೋಡಿಕಣ್ಣೂರು ಕೆರೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ‌ ನೀಡಿದ ನಂತರ ಈ ಕುರಿತು ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ನಂಜೇಗೌಡ ವಿರುದ್ದವೇ ವಾಗ್ದಾಳಿ ನಡೆಸಿದ್ದಾರೆ ಗಾಳಿಯಿಂದ ಬಂದವರು ರಾಜಕೀಯ ಮಾಡ್ತಿದ್ದಾರೆಂದು ಶಾಸಕರು ಹೇಳಿದ್ದಾರೆ ಆದರೆ ನಾನು ಗಾಳಿಯಿಂದ  ಗೆದ್ದವನಲ್ಲ, ದುರಾಡಳಿತ ಮಣಿಸಿ ಗೆದ್ದವನು. ಮಾಲೂರು ಶಾಸಕ ಸ್ಥಾನಕ್ಕೆ ಶಾಸಕ ನಂಜೇಗೌಡ ಈಗ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ.  ನಾನು ರಾಜಿನಾಮೆ ನೀಡಿ ಎಲೆಕ್ಷನ್ ಎದುರಿಸಲು‌ ಸಿದ್ಧ. ಯಾರಿಗೆ ಜನ ಬೆಂಬಲ ಸಿಗುತ್ತೊ ನೋಡೊಣ, ಎಂದರು.


ಇದನ್ನೂ ಓದಿ: Bengaluru Crime: ಹಳೆಯ ದ್ವೇಷಕ್ಕೆ ಬೆಂಗಳೂರಲ್ಲಿ ನಡೆಯಿತು ಬರ್ಬರ ಹತ್ಯೆ!


ಇನ್ನು ಶಾಸಕ ಕೆವೈ ನಂಜೇಗೌಡ ಅವರು ನಡೆಸುತ್ತಿರುವ ಕ್ರಷರ್ ಹಾಗು ಮೈನಿಂಗ್ ನಿಂದ ಸಾಕಷ್ಟು ಭೂ ಪ್ರದೇಶ ಹಾನಿಯಾಗಿದೆ ಒಂದೇ ಕುಟುಂಬಕ್ಕೆ 109 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡು ಕ್ರಷರ್ ಮೂಲಕ ಹಣ  ಲೂಟಿ ಮಾಡಿ ಸರ್ಕಾರಕ್ಕೆ 62 ಕೋಟಿ ತೆರಿಗೆ ವಂಚಿಸಿದ್ದಾರೆ. ಅಷ್ಟೆ ಅಲ್ಲದೆ ರಾತ್ರಿ ಹೊತ್ತು ಕಳ್ಳತನವಾಗಿ ಕ್ರಷರ್ ಓಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಆರೋಪ ಸಾಬೀತಾದರೆ ರಾಜೀನಾಮೆ:


ಶಾಸಕ ಕೆವೈ ನಂಜೇಗೌಡ ಮಾಡಿರೊ ಆರೋಪಗಳು ಸಾಬೀತಾದರೆ ನಾನು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುವೆ, ಅಧಿಕಾರ ನಂಗೆ ಶಾಶ್ವತವಲ್ಲ ರಾಜಕೀಯ ಇಲ್ಲದಿದ್ದರು ಹೊಲದಲ್ಲಿ ಕೃಷಿ ಮಾಡುಕೊಂಡು ಜೀವನ ನಡೆಸಲು ಸಿದ್ದನಿದ್ದೇನೆ ಎಂದರು.  ಇನ್ನು ಸಂಸದರಾಗಿ ಒಂದು ವರ್ಷ ಪೂರೈಸಿದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಕಡೆಗೆ ಸಾಗುತ್ತಿದೆ ಇಂತಹ ಸರ್ಕಾರದ ಭಾಗವಾಗಿದ್ದಕ್ಕೆ ಬಹಳ ಸಂತಸವಿದೆ. ಕೋಲಾರ ಲೋಕಸಭಾ ಕ್ಷೇತ್ರದ ಜನತೆಗೆ ಕೈಲಾದಷ್ಟು ಸಹಾಯ ಮಾಡಿ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

Published by:Rajesh Duggumane
First published: