ಮನುಷ್ಯರ ಹಾಗೆ  ಪಶುಗಳಿಗೂ ಬಂತು ಆ್ಯಂಬುಲೆನ್ಸ್​​​ ಭಾಗ್ಯ; ಶೀಘ್ರದಲ್ಲೇ ರಾಜ್ಯಾದ್ಯಂತ ಯೋಜನೆ ಜಾರಿಗೆ

ಪಶು ಸಹಾಯವಾಣಿ ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ವಾರ್ ರೂಮ್ ಎಂದು ಹೆಸರು ಕೊಟ್ಟು ಸಹಾಯವಾಣಿ ಆರಂಭಿಸಲು ಸಿದ್ಧತೆ ನಡೆಸಿದೆ. ಪಶು ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರಲ್ಲ, ಸರಿಯಾಗಿ ಚಿಕಿತ್ಸೆ ನೀಡಲ್ಲ ಎಂಬ ದೂರುಗಳು ಬಂದ ಹಿನ್ನೆಲೆ ಸಚಿವ ಪ್ರಭು ಚೌವ್ಹಾಣ್​​. ಈ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ನ.26): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲಾ ಗೋವಿನ ಬಗೆಗಿನ ಕಾಳಜಿ ಎಲ್ಲರಲ್ಲೂ ಮೂಡುತ್ತೆ. ಈಗ ರಾಜ್ಯ ಬಿಜೆಪಿ ಸರ್ಕಾರ ಗೋವು ರಕ್ಷಣೆಯ ಜತೆಗೆ ಇತರೆ ಜಾನುವಾರುಗಳ ಶ್ರೇಯೋಭಿವೃದ್ದಿಗೋಸ್ಕರ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ. ಬರಿ ಒಂದು ಕರೆ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಆ್ಯಂಬುಲೆನ್ಸ್​​​ ಬಂದು ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಹೌದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಗೋ ಸಂರಕ್ಷಣೆ ಲಾಲನೆ ಪಾಲನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದೆ ಇರುತ್ತವೆ. ಹೀಗಾಗಿಯೇ ಸದ್ಯ ಬಿಎಸ್ ವೈ ನೇತೃತ್ವದ ರಾಜ್ಯ ಸರ್ಕಾರ, ಈಗ ಹೊಸ ಯೋಜನೆಗಳನ್ನ ಗೋ ಸಂರಕ್ಷಣೆ ಸೇರಿದಂತೆ ಇತರೆ ಜಾನುವಾರುಗಳಿಗೂ ಅನ್ವಯವಾಗುವಂತೆ ತರಲು ಮುಂದಾಗಿದೆ.

ಅದೇನು ಅಂದ್ರೆ ಸದ್ಯ ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಜಾರಿಯಲ್ಲಿರುವ 108 ರೀತಿ ಪಶುಗಳಿಗೆ ಆರೋಗ್ಯದ ಸಮಸ್ಯೆಯಾದಾಗ ಅವುಗಳನ್ನ ಆಸ್ಪತ್ರಗೆ ಕೊಂಡೊಯ್ಯಲು ಆ್ಯಂಬುಲೆನ್ಸ್​​ ಯೋಜನೆಯನ್ನ ಜಾರಿಗೆ ತರಲು ಬಿ ಎಸ್ ವೈ ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಇದರ ಪ್ರಾಯೋಗಿಕವಾಗಿ ಯೋಜನೆ ಪ್ರಾರಂಭಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಯಾವುದೆ ಪಶುಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಮನೆಯಿಂದಲೇ ಪಶು ಸಂಜೀವಿನಿ ನಂಬರ್​ಗೆ ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಆ್ಯಂಬುಲೆನ್ಸ್​​​​ ಬಂದು ಪಶುಗಳಿಗೆ ಬೇಕಾದ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.

International Flights: ಡಿಸೆಂಬರ್ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ

ಇದು ಒಂದು ಕಡೆಯಾದರೆ ಈಗಾಗಲೇ ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ರೀತಿ ಪಶು ಸಹಾಯವಾಣಿ ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ವಾರ್ ರೂಮ್ ಎಂದು ಹೆಸರು ಕೊಟ್ಟು ಸಹಾಯವಾಣಿ ಆರಂಭಿಸಲು ಸಿದ್ಧತೆ ನಡೆಸಿದೆ. ಪಶು ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರಲ್ಲ, ಸರಿಯಾಗಿ ಚಿಕಿತ್ಸೆ ನೀಡಲ್ಲ ಎಂಬ ದೂರುಗಳು ಬಂದ ಹಿನ್ನೆಲೆ ಸಚಿವ ಪ್ರಭು ಚೌವ್ಹಾಣ್​​. ಈ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.

ಪಶು ವೈದರು ಇನ್ಮುಂದೆ ಕೆಲಸಕ್ಕೆ ಚಕ್ಕರ್ ಹಾಕದೆ ಕಂಟ್ರೋಲ್ ರೂಮ್ ನಿಂದ ಫೋನ್ ಬಂದಾಕ್ಷಣ ಕಂಪ್ಲೆಂಟ್ ಮಾಡಿದ ರೈತನ ಪಶುವಿಗೆ ಚಿಕಿತ್ಸೆ ಮಾಡಿ ಆ ಪಶುವಿನ ಸ್ಥಿತಿಗತಿಗಳನ್ನ ಮರಳಿ ವಾರ್ ರೂಮ್​ಗೆ ನೀಡುವ ಯೋಜನೆಯನ್ನು ಜಾರಿಗೆ ತರಲಿದ್ದಾರೆ. ಆದರೆ ಈ ಯೋಜನೆಗಳು ಕೇವಲ ಘೋಷಣೆಯಾಗೆ ಉಳಿಯದೆ ಬೇಗ ಜಾರಿಗೆ ಬರಲಿ ಎನ್ನುವುದು ರೈತರು ಮತ್ತು ಸಾಮಾಜಿಕ ಹೋರಾಟಗಾರರ ಆಶಯ.

ಒಟ್ಟಿನಲ್ಲಿ ಗೋರಕ್ಷಣೆಯನ್ನೆ ಅಜೆಂಡಾವಾಗಿಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ರಾಜ್ಯ ಹಾಗೂ ಕೇಂದ್ರ  ಬಿಜೆಪಿ ಸರ್ಕಾರಗಳು ಗೋವು ಸೇರಿದಂತೆ ಇತರ ಪಶುಗಳಿಗೆ ಅನುಕೂಲಕರ ವಾತಾವರಣ ಸೃಷ್ಠಿಗೆ ಮುಂದಾಗಿರೋದು ಸಂತಸದ ಸಂಗತಿ. ಆದರೆ ಈ ಘೋಷಣೆಗಳೆಲ್ಲ ಆದಷ್ಟು ಬೇಗ ಯೋಜನೆಗಳಾಗಿ ಅನುಷ್ಠಾನಕ್ಕೆ ಬರಲಿ ಎನ್ನುವುದು ರೈತಾಪಿ ಹಾಗೂ ಹೈನುಗಾರಿಕೆ ಮಾಡುವವರ ಆಶಯ.
Published by:Latha CG
First published: