ಅಂಬಿಡೆಂಟ್​ ಚಿಟ್​ ಫಂಡ್​ ಪ್ರಕರಣ; ಜನಾರ್ದನ ರೆಡ್ಡಿಯ ಬೆಂಗಳೂರು ಮನೆಯೂ ಸರ್ಕಾರದ ವಶಕ್ಕೆ!

ಕಂದಾಯ ಇಲಾಖೆ ಆದೇಶದಂತೆ ಜನಾರ್ದನ ರೆಡ್ಡಿಗೆ ಸೇರಿದ ಪಾರಿಜಾತ ಮನೆಯನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಜನಾರ್ದನ ರೆಡ್ಡಿ ಅವರ ಪಾರಿಜಾತ ಮನೆ ಇದೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕೋರ್ಟ್‌ ಗೆ ಒಪ್ಪಿಸಲು ಕಂದಾಯ ಇಲಾಖೆ ಆಧಿಕಾರಿಗಳು ತಯಾರಿ ನಡೆಸಿಕೊಂಡಿದ್ದಾರೆ.

HR Ramesh | news18
Updated:February 12, 2019, 9:03 PM IST
ಅಂಬಿಡೆಂಟ್​ ಚಿಟ್​ ಫಂಡ್​ ಪ್ರಕರಣ; ಜನಾರ್ದನ ರೆಡ್ಡಿಯ ಬೆಂಗಳೂರು ಮನೆಯೂ ಸರ್ಕಾರದ ವಶಕ್ಕೆ!
ಜನಾರ್ದನ ರೆಡ್ಡಿ
HR Ramesh | news18
Updated: February 12, 2019, 9:03 PM IST
ಬೆಂಗಳೂರು: ಅಂಬಿಡೆಂಟ್​ ಚಿಟ್​ ಫಂಡ್​ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ, ಅಲಿಖಾನ್ ಸೇರಿ ಇತರ ಆರೋಪಿಗಳ 100 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ಆದೇಶದಂತೆ ಜನಾರ್ದನ ರೆಡ್ಡಿಗೆ ಸೇರಿದ ಪಾರಿಜಾತ ಮನೆಯನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಜನಾರ್ದನ ರೆಡ್ಡಿ ಅವರ ಪಾರಿಜಾತ ಮನೆ ಇದೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕೋರ್ಟ್‌ ಗೆ ಒಪ್ಪಿಸಲು ಕಂದಾಯ ಇಲಾಖೆ ಆಧಿಕಾರಿಗಳು ತಯಾರಿ ನಡೆಸಿಕೊಂಡಿದ್ದಾರೆ. ಜಪ್ತಿ ನಂತರ ಕೋರ್ಟ್ ಆದೇಶ ಪಡೆದು ಹರಾಜು ಹಾಕಲು ಕಂದಾಯ ಇಲಾಖೆ ಆಧಿಕಾರಿಗಳ ನಿರ್ಧರಿಸಿದ್ದಾರೆ.

ಇದನ್ನು ಓದಿ: ನಾನು ರಾಜಕೀಯಕ್ಕೆ ಬರೋಕೆ ಒಂದು ವರ್ಷ ಸಾಕು; ಮಾಜಿ ಸಚಿವ ಜನಾರ್ದನ ರೆಡ್ಡಿ

ಅಂಬಿಡೆಂಟ್ ಚಿಟ್ ಫಂಡ್ ಪ್ರಕರಣದಲ್ಲಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿ ಸುಮಾರು ೪೦೦ ಕೋಟಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಮೋಸ ಹೋದ ಗ್ರಾಹಕರು ದೂರು ದಾಖಲಿಸಿದ್ದಾರೆ. ಸದ್ಯ 100 ಕೋಟಿ ಆಸ್ತಿ ಜಪ್ತಿ ಮಾಡಿ ಗ್ರಾಹಕರಿಗೆ ಹಿಂದಿರುಗಿಸಲು ತಯಾರಿ ನಡೆದಿದೆ. ಈಗಾಗಲೇ ಸರ್ಕಾರದ ಗೆಜೆಟ್​ನಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ. ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್ ಸಿ ನಾಗರಾಜು ಅಧಿಕೃತ ಆಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...