ಯಶ್ ಮಗಳಿಗೆ ಅಂಬಿ ಕಡೆಯಿಂದ ಬಂತು 1.5 ಲಕ್ಷ ರೂ. ಮೌಲ್ಯದ ಗಿಫ್ಟ್!

ಯಶ್​ಗೆ ಕಾಲ್​ ಮಾಡಿದ ಸುಮಲತಾ, ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ, ಎಂದು ಹೇಳಿದ್ದಾರೆ.

HR Ramesh | news18india
Updated:December 7, 2018, 10:07 AM IST
ಯಶ್ ಮಗಳಿಗೆ ಅಂಬಿ ಕಡೆಯಿಂದ ಬಂತು 1.5 ಲಕ್ಷ ರೂ. ಮೌಲ್ಯದ ಗಿಫ್ಟ್!
ಸಂಗ್ರಹ ಚಿತ್ರ
  • Share this:
ಬೆಂಗಳೂರು: ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್ ಯಶ್​ ಮತ್ತು ರಾಧಿಕಾ ದಂಪತಿಗೆ ಹೆಣ್ಣು ಮಗು ಜನಿಸಿರುವ ಸುದ್ದಿ ಎಲ್ಲರಿಗೂ ಗೊತ್ತು. ಈ ಮಗುವಿಗೆ ಮಂಡ್ಯದ ಗಂಡು ಅಂಬರೀಷ್​ ಅತ್ಯಮೂಲ್ಯವಾದ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

ಅರೇ, ಇದೇನಿದು ಅಂಬರೀಷ್ ಅಗಲಿ ಇಂದಿಗೆ 14 ದಿನಗಳಾದವು. ಯಶ್​ಗೆ ಮಗು ಹುಟ್ಟಿ ವಾರವಷ್ಟೇ ಆಗಿದೆ. ಅಂಬರೀಷ್​ ಅವರು ಹೇಗೆ ಯಶ್​ ಮಗಳಿಗೆ ಉಡುಗೊರೆ ಕೊಡಲು ಸಾಧ್ಯ ಎಂದು ಅಚ್ಚರಿಯಾಗುತ್ತಿದೆಯೇ. ಅಚ್ಚರಿ ಆದರೂ ಇದು ಸತ್ಯ.

ಅಂಬರೀಷ್ ನಿಧನಕ್ಕೂ ಮುನ್ನ ಯಶ್​ಗೆ ಹುಟ್ಟಲಿರುವ ಮಗುವಿಗಾಗಿ 1.5 ಲಕ್ಷ ರೂ.ಬೆಲೆಯ ತೊಟ್ಟಿಲನ್ನು ಬುಕ್​ ಮಾಡಿದ್ದರು. ಈ ವಿಚಾರ ಅಂಬರೀಷ್​ ಹೊರತುಪಡಿಸಿ ಯಾರಿಗೂ ಗೊತ್ತಿರಲಿಲ್ಲ. ಸುಮಲತಾ ಅವರಿಗೂ ಕೂಡ ಈ ವಿಷಯ ತಿಳಿದಿರಲಿಲ್ಲ. ಅಂಬರೀಷ್​ ಬಳಸುತ್ತಿದ್ದ ಮೊಬೈಲ್​ಗೆ ಮೊನ್ನೆ 'ತೊಟ್ಟಿಲು ರೆಡಿ' ಎಂಬ ಸಂದೇಶ ಬಂದಿದೆ. ನಂತರ ಈ ಬಗ್ಗೆ ಸುಮಲತಾ ವಿಚಾರಿಸಿದಾಗ ಅಂಬರೀಷ್​ ಅವರು ಯಶ್​ ದಂಪತಿಗೆ ಹುಟ್ಟುವ ಮಗುವಿಗಾಗಿ ತೊಟ್ಟಿಲು ಆರ್ಡರ್​ ಮಾಡಿದ್ದರು  ಎಂಬ ವಿಷಯ ತಿಳಿದುಬಂದಿದೆ.

ಇದನ್ನು ಓದಿ: Photos: ರಾಕಿಂಗ್​ ಜೋಡಿ ಯಶ್​-ರಾಧಿಕಾರ ಕರುಳ ಕುಡಿಯ ಮೊದಲ ಚಿತ್ರಗಳು…!

ಆಗ ಯಶ್​ಗೆ ಕಾಲ್​ ಮಾಡಿದ ಸುಮಲತಾ, "ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ," ಎಂದು ಹೇಳಿದ್ದಾರೆ.

ಅಂಬರೀಷ್​ ಮೃತಪಟ್ಟಾಗ ಯಶ್​ ಮೂರು ದಿನವೂ ಪಾರ್ಥಿವ ಶರೀರದೊಂದಿಗೆ ಇದ್ದು, ಅಂತ್ಯಸಂಸ್ಕಾರದ ವಿಧಿ ವಿಧಾನ ನಡೆಯಲು ಸಹಕರಿಸಿದ್ದರು.

First published:December 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading